More

    ನ್ಯೂಜಿಲೆಂಡ್​ ಪ್ರಧಾನಿ ಸ್ಥಾನಕ್ಕೆ ಜಸಿಂಡಾ ಅಡೆರ್ನ್ ರಾಜೀನಾಮೆ: ಕೊಟ್ಟ ಕಾರಣ ಹೀಗಿದೆ…

    ವೆಲ್ಲಿಂಗ್ಟನ್​: ಕಳೆದ ಆರು ವರ್ಷಗಳಿಂದ ಅಧಿಕಾರದ್ದಲ್ಲಿದ್ದ ನ್ಯೂಜಿಲೆಂಡ್​ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ದಿಢೀರ್​ ರಾಜೀನಾಮೆ ಘೋಷಣೆ ಮಾಡಿದ್ದು, ಮುಂದಿನ ತಿಂಗಳು ಅಧಿಕಾರದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ.

    ಕಿರಿಯ ವಯಸ್ಸಿನಲ್ಲಿ ಪ್ರಧಾನಿ ಹುದ್ದೆಗೇರುವ ಮೂಲಕ ಮಾದರಿಯಾಗಿದ್ದ ಜಸಿಂಡಾ ಅವರ ರಾಜೀನಾಮೆ ನಿರ್ಧಾರ ಎಲ್ಲರನ್ನು ಅಚ್ಚರಿಗೆ ದೂಡಿದೆ. ತಮ್ಮ ನಿರ್ಧಾರದ ಬಗ್ಗೆ ಮಾತನಾಡಿರುವ ಜಸಿಂಡಾ, ಉಳಿದ ಅಧಿಕಾರದ ಅವಧಿಯಲ್ಲಿ ಮುಂದುವರಿಯಲು ಅವಶ್ಯವಿರುವುದನ್ನು ಕಂಡುಕೊಳ್ಳುತ್ತೇನೆಂದು ಅಂದುಕೊಂಡಿದ್ದೆ ಆದರೆ, ದುರದೃಷ್ಟವಶಾತ್ ನನ್ನಿಂದ ಸಾಧ್ಯವಾಗಲಿಲ್ಲ. ಪ್ರಧಾನಿ ಹುದ್ದೆಯನ್ನು ನಿರ್ವಹಿಸಲು ಆಗುತ್ತಿಲ್ಲ. ನಾನು ಈ ಹುದ್ದೆಯಲ್ಲಿ ಮುಂದುವರಿದರೆ, ಅದು ನ್ಯೂಜಿಲೆಂಡ್‌ಗೆ ಮಾಡಿದ ಅಪಚಾರವಾಗುತ್ತದೆ ಎಂದು ಜಸಿಂಡಾ ಹೇಳಿದ್ದಾರೆ.

    ಕಳೆದ ಆರು ವರ್ಷದ ಅಧಿಕಾರದ ಅವಧಿ ಹೇಗೆ ಸವಾಲಿನದ್ದಾಗಿತ್ತು ಎಂದು ವಿವರಿಸಿರುವ ಜಸಿಂಡಾ, ಮಾನಸಿಕವಾಗಿ ತುಂಬಾ ದಣಿದಿದ್ದಾಗಿ ತಿಳಿಸಿದ್ದಾರೆ. ಮುಂದಿನ ನಾಲ್ಕು ವರ್ಷ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಕಳೆದ ಐದೂವರೆ ವರ್ಷ ನನ್ನ ಜೀವನದಲ್ಲಿ ಅತ್ಯಂತ ಸಾರ್ಥಕ ವರ್ಷ. ಆದರೆ, ಬಿಕ್ಕಟ್ಟಿನ ಸಮಯದಲ್ಲಿ ದೇಶವನ್ನು ಮುನ್ನೆಡೆಸುವುದು ತುಂಬಾ ಕಷ್ಟವಾಗಿತ್ತು ಎಂದು ಜಸಿಂಡಾ ಹೇಳಿದರು. ಕೋವಿಡ್​ 19, ನಂತರದ ಆರ್ಥಿಕ ಹಿಂಜರಿತ, ಕ್ರೈಸ್ಟ್​ಚರ್ಚ್ ಮಸೀದಿ ಶೂಟಿಂಗ್​ ಮತ್ತು​ ವೈಟ್ ಐಲ್ಯಾಂಡ್ ಜ್ವಾಲಾಮುಖಿ ಸ್ಫೋಟದಂತಹ ಕಠಿಣ ಸಂದರ್ಭನ್ನು ಜಸಿಂಡಾ ಮುನ್ನೆಡೆಸಿದ್ದಾರೆ.

    2017ರಲ್ಲಿ 37ನೇ ವಯಸ್ಸಿನಲ್ಲಿ ನ್ಯೂಜಿಲೆಂಡ್​ ಪ್ರಧಾನಿಯಾಗುವ ಮೂಲಕ ವಿಶ್ವದ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ಜಸಿಂಡಾ ಗಳಿಸಿದರು. ಇದೀಗ ತಮ್ಮ ಲೇಬರ್​ ಪಕ್ಷದ ಸಭೆಯಲ್ಲಿ ದಿಢೀರ್​ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಮುಂದಿನ ಫೆ.7ರಂದು ಪ್ರಧಾನಿ ಹುದ್ದೆಯಿಂದ ಜಸಿಂಡಾ ಕೆಳಗಿಳಿಯಲಿದ್ದಾರೆ. ಅವರ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಲು ಮುಂದಿನ ದಿನಗಳಲ್ಲಿ ಮತದಾನ ನಡೆಯಲಿದೆ.

    ಅಕ್ಟೋಬರ್​ 14ರಂದು ನ್ಯೂಜಿಲೆಂಡ್​ನ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಚುನಾವಣೆಗೆ ಮುನ್ನವೇ ಜಸಿಂಡಾ ರಾಜೀನಾಮೆ ನೀಡಿದ್ದಾರೆ. ಅವರ ವರ್ಚಸ್ಸು ಕಡಿಮೆಯಾಗುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

    ಸಾಯಿಸಲೆಂದೇ ಎಳೆದೊಯ್ದೆ… ಪೊಲೀಸರ ಮುಂದೆ ಸಾಹಿಲ್​ ಬಾಯ್ಬಿಟ್ಟ ಸತ್ಯ ಘಟನೆಯಷ್ಟೇ ಕ್ರೂರವಾಗಿದೆ

    ತನ್ನ ಕಚೇರಿಯಲ್ಲೇ ಚಿನ್ನ ಕದ್ದು ಸಿಕ್ಕಿಬಿದ್ದ ಮ್ಯಾನೇಜರ್​! ಬೆಂಗಳೂರಲ್ಲಿ ಘಟನೆ

    ಪರೀಕ್ಷಾ ಕೊಠಡಿಯೊಳಗೆ ಶಿಕ್ಷಕನಿಗೆ ಚಾಕು ಇರಿದ ವಿದ್ಯಾರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts