More

    VIDEO: ವಿದಾಯದ ಪಂದ್ಯದಲ್ಲಿ ವಿಕೆಟ್ ಪಡೆದು ಸಂಭ್ರಮಿಸಿದ ನ್ಯೂಜಿಲೆಂಡ್ ಆಟಗಾರ ರಾಸ್ ಟೇಲರ್

    ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್ ತಂಡದ ಹಿರಿಯ ಬ್ಯಾಟರ್ ರಾಸ್ ಟೇಲರ್, ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಬಾದಾತ್ ಹುಸೇನ್ ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ವಿಶೇಷ ರೀತಿಯಲ್ಲಿ ವಿದಾಯ ಹೇಳಿದರು. 37 ವರ್ಷದ ಟೇಲರ್ ಪಾಲಿಗೆ ಇದು ಕಡೇ ಟೆಸ್ಟ್ ಪಂದ್ಯವಾಗಿತ್ತು. ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ 126 ರನ್‌ಗಳಿಗೆ ಸರ್ವಪತನ ಕಂಡ ಹಿನ್ನೆಲೆಯಲ್ಲಿ 3ನೇ ದಿನದಾಟದ ಆರಂಭಕ್ಕೂ ಮುನ್ನ ಕಿವೀಸ್ ತಂಡ ಫಾಲೋಆನ್ ಹೇರಿತು. ಎರಡನೇ ಸರದಿಯಲ್ಲೂ ಬಾಂಗ್ಲಾ ತಂಡ ಕುಸಿತ ಕಂಡ ಹಿನ್ನೆಲೆಯಲ್ಲಿ ಕಿವೀಸ್ ನಾಯಕ ಟಾಮ್ ಲಾಥಮ್, ರಾಸ್ ಟೇಲರ್‌ಗೆ ಬೌಲಿಂಗ್ ನೀಡುವ ಮೂಲಕ ವಿಶೇಷವಾಗಿ ಹಿರಿಯ ಆಟಗಾರನಿಗೆ ಬೀಳ್ಕೊಟ್ಟರು.

    ನ್ಯೂಜಿಲೆಂಡ್ ತಂಡದ ಮಾಜಿ ನಾಯಕನೂ ಆಗಿರುವ ಟೇಲರ್ ಮೂರೇ ಎಸೆತಗಳಲ್ಲಿ ಬಾಂಗ್ಲಾದ ಕೊನೇ ವಿಕೆಟ್ ಕಬಳಿಸಿದಾಗ ತಂಡದ ಸಹ ಆಟಗಾರರು ಹಾಗೂ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಪಂದ್ಯದ ಚೆಂಡನ್ನು ಉಡುಗೊರೆಯಾಗಿ ಹಸ್ತಾಂತರಿಸಲಾಯಿತು. ಇದಕ್ಕೂ ಮೊದಲು ಬಾಂಗ್ಲಾ ಆಟಗಾರರು ಕೂಡ ಗಾರ್ಡ್ ಆಫ್ ಆನರ್ ನೀಡಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ ಕಿವೀಸ್, ಪ್ರವಾಸಿ ಬಾಂಗ್ಲಾದೇಶ ತಂಡವನ್ನು ಇನಿಂಗ್ಸ್ ಹಾಗೂ 117 ರನ್‌ಗಳಿಂದ ಸೋಲಿಸಿತು. ಇದರಿಂದ 2 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿತ್ತು.

    ನ್ಯೂಜಿಲೆಂಡ್: 6 ವಿಕೆಟ್‌ಗೆ 521 ಡಿಕ್ಲೇರ್, ಬಾಂಗ್ಲಾದೇಶ: 126 ಮತ್ತು 79.3 ಓವರ್‌ಗಳಲ್ಲಿ 278 (ಲಿಟನ್ ದಾಸ್ 102, ನುರುಲ್ ಹಸನ್ 36, ನೈಮ್ 24, ನಜ್ಮುಲ್ 29, ಜೇಮಿಸನ್ 82ಕ್ಕೆ 4, ವಾಗ್ನರ್ 77ಕ್ಕೆ 3, ಸೌಥಿ 54ಕ್ಕೆ 1, ಟೇಲರ್ 0ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts