More

    ಆತಿಥೇಯ ನ್ಯೂಜಿಲೆಂಡ್ ತಂಡ ಶುಭಾರಂಭ, ವಿಂಡೀಸ್ ಎದುರು 5 ವಿಕೆಟ್ ಜಯ

    ಆಕ್ಲೆಂಡ್: ಮಧ್ಯಮ ವೇಗಿ ಲಾಕಿ ಫರ್ಗ್ಯುಸನ್ (21ಕ್ಕೆ 5) ಮಾರಕ ದಾಳಿ ಹಾಗೂ ಜೇಮ್ಸ್ ನೀಶಾಮ್ (48*ರನ್, 24 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಮಿಚೆಲ್ ಸ್ಯಾಂಟ್ನರ್ (31*ರನ್, 18 ಎಸೆತ, 3 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಫಲವಾಗಿ ಆತಿಥೇಯ ನ್ಯೂಜಿಲೆಂಡ್ ತಂಡ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಸಾಧಿಸಿತು. ಮಳೆ ಅಡ್ಡಿಯುಂಟು ಮಾಡಿದ ಪರಿಣಾಮ ಪಂದ್ಯವನ್ನು ತಲಾ 16 ಓವರ್‌ಗಳಿಗೆ ಇಳಿಸಲಾಗಿತ್ತು.
    ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್, ನಾಯಕ ಕೈರಾನ್ ಪೊಲ್ಲಾರ್ಡ್ (75*ರನ್, 37 ಎಸೆತ, 4 ಬೌಂಡರಿ, 8 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 16 ಓವರ್‌ಗಳಲ್ಲಿ 7 ವಿಕೆಟ್‌ಗೆ 180 ರನ್ ಪೇರಿಸಿತು. ಪ್ರತಿಯಾಗಿ ಡಿ-ಎಲ್ ನಿಯಮದನ್ವಯ 176 ರನ್‌ಗಳ ಪರಿಷ್ಕೃತ ಗುರಿ ಪಡೆದ ನ್ಯೂಜಿಲೆಂಡ್ ತಂಡ 15.2 ಓವರ್‌ಗಳಲ್ಲಿ 5 ವಿಕೆಟ್‌ಗೆ 179 ರನ್ ಗಳಿಸಿ ಜಯಿಸಿತು.

    * 1 ರನ್‌ಗೆ 5 ವಿಕೆಟ್ ಕಳೆದುಕೊಂಡ ವಿಂಡೀಸ್
    ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮೊದಲ ವಿಕೆಟ್‌ಗೆ 58 ರನ್ ಪೇರಿಸಿತು. ಬಳಿಕ ಫರ್ಗ್ಯುಸನ್ ಹಾಗೂ ಟೀಮ್ ಸೌಥಿ (22ಕ್ಕೆ 2) ಮಾರಕ ದಾಳಿಗೆ ನಲುಗಿ ಕೇವಲ 1 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.

    ವೆಸ್ಟ್ ಇಂಡೀಸ್: 16 ಓವರ್‌ಗಳಲ್ಲಿ 7 ವಿಕೆಟ್‌ಗೆ 180 (ಆಂಡ್ರೆ ಫ್ಲೆಚರ್ 34, ಕೈರಾನ್ ಪೊಲ್ಲಾರ್ಡ್ 75*, ಫ್ಯಾಬಿಯನ್ ಅಲೆನ್ 30, ಲಾಕಿ ಫರ್ಗ್ಯುಸನ್ 21ಕ್ಕೆ 5, ಟಿಮ್ ಸೌಥಿ 22ಕ್ಕೆ 2), ನ್ಯೂಜಿಲೆಂಡ್: 15.2 ಓವರ್‌ಗಳಲ್ಲಿ 5 ವಿಕೆಟ್‌ಗೆ 179 (ಜೇಮ್ಸ್ ನೀಶಾಮ್ 48*, ಮಿಚೆಲ್ ಸ್ಯಾಂಟ್ನರ್ 31*, ಡೆವೊನ್ ಕಾನ್ವೇ 41, ಓಶಾನೆ ಥಾಮಸ್ 23ಕ್ಕೆ 2, ಶೆಲ್ಡನ್ ಕಾಟ್ರೆಲ್ 30ಕ್ಕೆ 1, ಪೊಲ್ಲಾರ್ಡ್ 16ಕ್ಕೆ 1).

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts