More

    ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆಯಲಿ

    ಶಹಾಬಾದ್: ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕಾರ ಬೆಳೆಸಿಕೊಳ್ಳಬೇಕು, ಗುರಿ ತಲುಪಲು ನಿರಂತರ ಶ್ರಮ ಪಡಬೇಕು ಎಂದು ಎಂಸಿಸಿ ಶಾಲೆ ಮುಖ್ಯಗುರು ಸಿಸ್ಟರ್ ಲಿನೆಟ್ ಸಿಕ್ವೇರಾ ಹೇಳಿದರು.

    ವಿಜಯ ಕಂಪ್ಯೂಟರ್ ಶಿಕ್ಷಣ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹೊಸ ವರ್ಷದ ಸ್ಫೂರ್ತಿಯ ಚಿಲುಮೆ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಸ್ಪರ್ಧಾತ್ಮಕ ಜಗತ್ತು, ಹೀಗಾಗಿ ಪ್ರತಿಯೊಬ್ಬರೂ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಗಣಕಯಂತ್ರದ ಶಿಕ್ಷಣ ಪಡೆಯಬೇಕು. ಅಲ್ಲದೆ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.

    ಎಸ್‌ಬಿಐ ಹಿರಿಯ ವ್ಯವಸ್ಥಾಪಕ ಸುಭಾಷಚಂದ್ರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಿಗುವಂತಹ ಅವಕಾಶಗಳನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡರೆ ಗುರಿ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದರು.

    ಪತ್ರಕರ್ತ ರಮೇಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಅಂಕಿತಾ ಪ್ರಾರ್ಥಿಸಿದರು. ವಾಸುದೇವ ಚವ್ಹಾಣ್ ನಿರೂಪಣೆ ಮಾಡಿದರು. ಶೀತಲ್ ಸ್ವಾಗತಿದರು, ಶ್ವೇತಾ ರಾಜು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts