More

    ಹಾಡುಗಾರಿಕೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಮಾನಸಿ

    ಉಡುಪಿ: ಭರತನಾಟ್ಯದ ಮೂಲಕ ಪರಿಚಿತರಾಗಿದ್ದ ವಿದುಷಿ ಮಾನಸಿ ಸುಧೀರ್ ಲಾಕ್‌ಡೌನ್ ಕಾಲದಲ್ಲಿ ಕನ್ನಡದ ಹೆಸರಾಂತ ಕವಿಗಳ ಕವಿತೆಗಳನ್ನು ಅಭಿನಯ ಮತ್ತು ಗಾಯನ ಮೂಲಕ ಅಭಿವ್ಯಕ್ತಿಪಡಿಸುವ ಹೊಸ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದು, ಹಾಡುಗಾರಿಕೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಈ ವಿಭಿನ್ನ ಪ್ರಯತ್ನ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

    ಬಿ.ಆರ್.ಲಕ್ಷ್ಮಣ್ ರಾವ್ ಅವರ ಹೇಗಿದ್ದೀಯೆ ಟ್ವಿಂಕಲ್, ಡುಂಡಿರಾಜ್ ಅವರ ಗಣರಾಜ್ಯದ ಗುಣಗಾನ, ಕೆ.ವಿ.ತಿರುಮಲೇಶ್ ಅವರ ಎಲ್ಲಿಗೆ ಹೋಗೋಣ….ಹೀಗೆ ಅನೇಕ ಗೀತೆಗಳನ್ನು ಭಾವಾಭಿನಯದೊಂದಿಗೆ ಪ್ರಸ್ತುತಪಡಿಸಿದ್ದಾರೆ.

    ಹಾಡುಗಳಿಗೆ ವಿಭಿನ್ನ ಅಭಿವ್ಯಕ್ತಿ ನೀಡುವ ಕಾರ್ಯವಾಗಿದ್ದು, ಅದಕ್ಕಾಗಿ ಮಾನಸಿ ಅವರು ನಾಟಕೀಯ ಗೀತೆಗಳನ್ನು ಹಾಗೂ ಸಂಭಾಷಣಾ ರೂಪದ ಹಾಡುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೊಸ ಬಗೆಯ ಸೃಜನಶೀಲ ಪ್ರಯತ್ನಕ್ಕೆ ಕಲಾಭಿಮಾನಿಗಳು ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ. ಯುಟ್ಯೂಬ್ ಚಾನೆಲ್ ಹಾಗೂ ಫೇಸ್‌ಬುಕ್‌ನಲ್ಲಿ ಅನೇಕ ಮಂದಿ ಈ ಹಾಡುಗಳನ್ನು ಹಂಚಿಕೊಂಡಿದ್ದು, ಸಾವಿರಾರು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಬಿ.ಆರ್.ಲಕ್ಷ್ಮಣ್ ರಾವ್ ಅವರು ಹೇಗಿದ್ದೀಯೆ ಟ್ವಿಂಕಲ್, ಡುಂಡಿರಾಜ್ ಅವರ ಕವನ ಗಣರಾಜ್ಯದ ಗುಣಗಾನ, ಕವಿ ಕೆ.ವಿ.ತಿರುಮಲೇಶ್ ಅವರ ಎಲ್ಲಿಗೆ ಹೋಗೋಣ ಕವಿತೆಗಳಿಗೆ ಸಂಗೀತ ವಿದ್ವಾಂಸರಾದ ಗುರುರಾಜ ಮಾರ್ಪಳ್ಳಿ, ಚಂದ್ರಶೇಖರ ಕೆದ್ಲಾಯ ರಾಗ ಸಂಯೋಜಿಸಿದ್ದಾರೆ.
    ಲೇಖಕ, ವಿಮರ್ಶಕ ಮುರಳೀಧರ ಉಪಾಧ್ಯ ಹಿರಿಯಡ್ಕ, ತಾಯಿ ಶಾರದಾ ಉಪಾಧ್ಯ ದಂಪತಿ ಪುತ್ರಿ ಮಾನಸಿ ಸುಧೀರ್ ಅವರಿಗೆ ಬಾಲ್ಯದಿಂದಲೇ ಸಂಗೀತ, ಭರತನಾಟ್ಯದಲ್ಲಿ ಒಲವು. ನೃತ್ಯ ಹಾಗೂ ಸಂಗೀತದಲ್ಲಿಯೂ ಸಾಧನೆ ಮಾಡಿದ್ದಾರೆ. ಹದಿನಾಲ್ಕು ವರ್ಷದ ಹಿಂದೆ ಗಂಟಲಿನ ಧ್ವನಿ ತಂತು ಬಲಹೀನವಾಗಿತ್ತು. ಸುಮಾರು ದಿನ ಮಾತನಾಡದೆ ಇದ್ದರೆ, ಗಂಟಲು ಸರಿಯಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದರು. ಪ್ರಸ್ತುತ ಲಾಕ್‌ಡೌನ್ ಸಮಯದಲ್ಲಿ ಭರತನಾಟ್ಯ ಕ್ಲಾಸ್‌ಗಳಿಲ್ಲ. ನೃತ್ಯ ಕಾರ್ಯಕ್ರಮಗಳಿಲ್ಲ. ಈ ಸಂದರ್ಭದಲ್ಲಿ ಧ್ವನಿ ಪೆಟ್ಟಿಗೆ ಕೊಂಚ ಸುಧಾರಿಸಿದ್ದು, ಈ ನವೀನ ಪ್ರಯೋಗಕ್ಕೆ ನಾಂದಿ ಹಾಡಿದೆ.

     ಹಾಡುಗಾರಿಕೆಗೆ ಸೀಮಿತವಾಗದೆ ಕಾವ್ಯದ ಸ್ವರೂಪಕ್ಕೆ ತಕ್ಕಂತಹ ಹಾವಭಾವ, ಆಂಗಿಕಾಭಿನಯವನ್ನೂ ಒಳಗೊಂಡ ವಿಧಾನ ಹಲವು ಮಂದಿಗೆ ಮೆಚ್ಚುಗೆಯಾಗಿದೆ. ಹಾಡುಗಾರಿಕೆಯಲ್ಲಿ ಇದೊಂದು ಹೊಸ ಪ್ರಯೋಗ. ಕವನ ವಾಚನಕ್ಕೆ ಹೊಸ ಆಯಾಮ ನೀಡಿದೆ. ಹಾಡು ಮತ್ತು ಅಭಿನಯ ಒಟ್ಟಿಗೆ ಪ್ರಸ್ತುತಪಡಿಸುವಿಕೆ ಬಹಳ ಅಪರೂಪ.
    ಮಾನಸಿ ಸುಧೀರ್ ಸಂಗೀತ-ನೃತ್ಯ ಕಲಾವಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts