More

    ಹಳಿಗಳ ಮೇಲೇ ಭಜನೆ, ರೈಲಲ್ಲೇ ರಾಮನ ದೇವಸ್ಥಾನ: ಬರಲಿದೆ ಶ್ರೀ ರಾಮಾಯಣ ಎಕ್ಸ್​ಪ್ರೆಸ್​ನ ನೆಕ್ಸ್ಟ್ ವರ್ಷನ್​

    ನವದೆಹಲಿ: ಮಾರ್ಚ್​ ತಿಂಗಳಿನಲ್ಲಿ ವಿಶೇಷವಾದ ಶ್ರೀ ರಾಮಾಯಣ ಎಕ್ಸ್​ಪ್ರೆಸ್​ ರೈಲನ್ನು ಬಿಡುವುದಾಗಿ ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ರೈಲಿನ ಒಳ ಮತ್ತು ಹೊರ ಭಾಗವು ಶ್ರೀ ರಾಮನ ಥೀಮ್​ ಹೊಂದಿರಲಿದೆ ಎಂದು ಇಲಾಖೆ ತಿಳಿಸಿದೆ.

    ರೈಲಿನ ಒಳಗೆ ಶ್ರೀ ರಾಮನ ಥೀಮ್​ನಿಂದ ಅಲಂಕಾರ ಮಾಡಲಾಗುವುದು. ರೈಲಿನ ಹೊರ ಭಾಗವನ್ನು ಸಹ ಶ್ರೀ ರಾಮನ ಜೀವನ ಚರಿತ್ರೆಯನ್ನು ಹೇಳುವಂತೆ ಸಿಂಗರಿಸಲಾಗುವುದು. ರೈಲಿನ ಒಳಗೆ ರಾಮನ ಭಜನೆಯನ್ನು ಹಾಕಲಾಗುವುದು ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್​ ತಿಳಿಸಿದ್ದಾರೆ.

    ನವೆಂಬರ್​ 17ರಂದು ತನ್ನ ಸಂಚಾರವನ್ನು ಆರಂಭಿಸಿದ ಶ್ರೀ ರಾಮಾಯಣ ಎಕ್ಸ್​ಪ್ರೆಸ್​ ರೈಲಿನ ಮುಂದುವರಿದ ಭಾಗ ಈ ವಿಶೇಷ ರೈಲಾಗಿರಲಿದೆ. ಮಾರ್ಚ್​ 10ರ ನಂತರ ಈ ರೈಲು ಸಂಚಾರ ಆರಂಭಿಸಲಿದೆ ಎನ್ನಲಾಗಿದೆ. ಶ್ರೀ ರಾಮಾಯಣ ಎಕ್ಸ್​ಪ್ರೆಸ್​ ರೈಲಿನಂತೆಯೆ ಈ ರೈಲು ಸಹ ರಾಮನ ಬದುಕಿನ ಹಲವು ಪ್ರಸಿದ್ಧ ಸ್ಥಳಗಳಿಗೆ ಸಂಚಾರ ನಡೆಸಲಿದೆ. ಪ್ರಯಾಣಿಕರಿಗೆ ರೈಲಿನಲ್ಲಿಯೇ ರಾಮನ ದೇವಸ್ಥಾನದಲ್ಲಿರುವಂತಹ ಅನುಭವವನ್ನು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

    ಒಟ್ಟು ನಾಲ್ಕು ಕಡೆಗಳಿಂದ ಈ ರೈಲು ಹೊರಡುವ ನಿರೀಕ್ಷೆಯಿದ್ದು ದೇಶದ ಎಲ್ಲ ಭಾಗದ ಜನರು ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುವುದು ಎನ್ನಲಾಗಿದೆ. ರೈಲ್ವೆ ಇಲಾಖೆ ಸದ್ಯದಲ್ಲೇ ರೈಲು ಪ್ರವಾಸಕ್ಕೆ ಹೊರಡುವ ದಿನಾಂಕ ಮತ್ತು ದರವನ್ನು ಪ್ರಕಟಿಸುವುದಾಗಿ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts