More

    “ನೆವರ್ ಸರಂಡರ್” ಸಾಕ್ಷ್ಯಚಿತ್ರ ಸೀರೀಸ್‌ನ ಹೊಸ ಸೀಸನ್ ಭಾರತದಲ್ಲಿ ಆರಂಭ

     ಬೆಂಗಳೂರು:ಎಫ್‌ಸಿ ಬೆಂಗಳೂರು ಯುನೈಟೆಡ್ ನಮ್ಮ ಪ್ರಮುಖ ಭಾಗೀದಾರನಾಗಿರುವಂತಹ ದೇಶದಲ್ಲಿ, ನಮ್ಮ ಕ್ಲಬ್‌ನ ಧ್ಯೇಯಘೋಷದ ಆಧಾರದ ಮೇಲೆ, ಮಾರ್ಚ್ 21ರಂದು ಭಾರತದಲ್ಲಿ “ನೆವರ್ ಸರಂಡರ್” ಸೀರೀಸ್‌ನ ಹೊಸ ಸೀಸನ್‌ಅನ್ನು ಪ್ರಾರಂಭಿಸಲು ಕ್ಲಬ್ ಸಿದ್ಧವಾಗಿದೆ. ಸಾಕ್ಷ್ಯಚಿತ್ರದ ಎರಡನೇ ಸೀಸನ್, 2024ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ   ಭಾರತವನ್ನು ಪ್ರತಿನಿಧಿಸಿ ಸ್ಪರ್ಧಿಸುತ್ತಿರುವ ಬಿಲ್ಲುಗಾರ ಧೀರಜ್ ಬೊಮ್ಮದೇವರ ಅವರ ಪ್ರೇರಣಾತ್ಮಕ ಕಥೆಯನ್ನು ಹೇಳುತ್ತದೆ.

    22 ವರ್ಷ ವಯಸ್ಸಿನ ಧೀರಜ್ ಬೊಮ್ಮದೇವರ, ತಮ್ಮ ಪ್ರಪ್ರಥಮ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸುವ ಸಿದ್ಧತೆಯಲ್ಲಿದ್ದು, 2022 ಏಶ್ಯನ್ ಕ್ರೀಡೆಗಳಲ್ಲಿ ರಜತ ಪದಕ ಗೆದ್ದಿದ್ದಾರೆ. ಈ ಸಾಕ್ಷ್ಯಚಿತ್ರದಲ್ಲಿ ಅವರು ತಮ್ಮ ಸ್ವಂತ ಕಥೆಯನ್ನು ಹೇಳುತ್ತಾ, ಒಬ್ಬ ಪ್ರತಿಷ್ಠಿತ ಕ್ರೀಡಾಪಟುವಾಗಿ ಬೆಳೆದ ತಮ್ಮ ಪಯಣ, ಸಣ್ಣ ವಯಸ್ಸಿನಿಂದಲೂ ತಮಗೆ ಕ್ರೀಡೆಯ ಬಗ್ಗೆ ಇದ್ದ ಆಸಕ್ತಿ ಹಾಗೂ ಯಾವ ರೀತಿ ತಾವು ಸದಾ ಇನ್ನಷ್ಟು ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ ಎಂಬುದರ ಕುರಿತು ಸವಿಸ್ತಾರವಾಗಿ ತಿಳಿಸಿಕೊಡುತ್ತಾರೆ. ಅವರ ಕಥೆಯು, ಏಕಾಗ್ರತೆ ಹಾಗೂ ನಿಖರತೆಗೆ ಪ್ರತಿಫಲ ಕೊಡುವ ಒಂದು ಕ್ರೀಡೆಯಲ್ಲಿ ತಾವು ಪ್ರತಿಸ್ಪರ್ಧಿಗಳ ವಿರುದ್ಧ ಮಾತ್ರವಲ್ಲದೆ, ತಮ್ಮ ವಿರುದ್ಧವೇ ಸ್ಪರ್ಧಿಸುತ್ತಿದ್ದಾಗ ಎದುರಿಸಿದ ಅವರ ಕ್ರೀಡಾ ಸವಾಲುಗಳನ್ನು ಪ್ರತಿಫಲಿಸುತ್ತದೆ.

    “ಕ್ಲಬ್, ತನ್ನ ಅಂತರರಾಷ್ಟ್ರೀಯತಾ ತಂತ್ರಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ನಮ್ಮ ತಂಡ ಮತ್ತು ಪಂದ್ಯಗಳನ್ನು ವಿಶ್ವವ್ಯಾಪಿಯಾಗಿ ವೀಕ್ಷಿಸುವುದು ನಮಗೆ ಎಷ್ಟು ಮುಖ್ಯವೋ ನಮ್ಮ ಮೌಲ್ಯಗಳನ್ನು ತಿಳಿಸಿಹೇಳುವುದೂ ಅಷ್ಟೇ ಮುಖ್ಯ. “ನೆವರ್ ಸರಂಡರ್” ಸೀರೀಸ್, ಕ್ರೀಡೆಗಳಲ್ಲಿ ಮಾತ್ರವಲ್ಲದೆ,  ನಮ್ಮ ದಿನನಿತ್ಯದ ಜೀವನಗಳಲ್ಲೂ ನಾವು ಎದುರಿಸುವ ವ್ಯತಿರಿಕ್ತ ಸಂದರ್ಭಗಳಲ್ಲಿ ಎಂದಿಗೂ ಹತಾಶರಾಗಬಾರದು ಎಂಬ ಪರಿಕಲ್ಪನೆಯನ್ನು ಪ್ರತಿಫಲಿಸುವ ಕ್ರೀಡಾ ಕಥೆಗಳೊಂದಿಗೆ ನಮ್ಮ ಅಭಿಮಾನಿಗಳಿಗೆ ಪ್ರೇರಣೆಯ ಮೂಲವಾಗಿರುವುದು ನಮ್ಮ ಗುರಿಯಾಗಿದೆ. ” ಎಂದು ವಿವರಿಸಿದರು ಕ್ಲಬ್ ಅಧ್ಯಕ್ಷ ಜೋಸೆ ಮಾರಿಯಾ ಡೆಲ್ ನಿಡೊ ಕರ್ರಾಸ್ಕೊ(José María del Nido Carrasco).

    “ಸೆವಿಲ್ಲಾ FC ಒಂದು ಸಮೃದ್ಧ ಇತಿಹಾಸವನ್ನು ಒಳಗೊಂಡಿದೆ-ಅವಿರತ ಪ್ರಯತ್ನ, ದೃಢನಿರ್ಧಾರ, ಶ್ರಮ ಮತ್ತು ವಿಜಯದ ಬಗ್ಗೆ ಮಾತನಾಡುವಂತಹುದು.” ಎಂದು ಹೇಳಿದರು, ಎಫ್‌ಸಿ ಬೆಂಗಳೂರು ಯುನೈಟೆಡ್‌ನ ಮಾಲೀಕರಾದ ಗೌರವ್ ಮನ್ಚಂದ. “”ನೆವರ್ ಸರಂಡರ್” ಎಂಬ ಅವರ ಧ್ಯೇಯಘೋಷ, ಈ ಧ್ಯೇಯದೊಂದಿಗೆ ನಿಖರವಾಗಿ ಸ್ಪಂದಿಸುತ್ತದೆ. ಅದೇ ರೀತಿ, ನೆವರ್ ಸರಂಡರ್ ಸಾಕ್ಷ್ಯಚಿತ್ರದಲ್ಲಿ ಬರುವ ಕಥೆಗಳಲ್ಲೂ ನಾವು ಇದನ್ನು ಕಾಣುತ್ತೇವೆ. ವ್ಯತಿರಿಕ್ತ ಪರಿಸ್ಥಿತಿಗಳನ್ನು ಎದುರಿಸಿ ವಿಜಯಿಯಾಗಿ ಹೊರಹೊಮ್ಮಿರುವುದು, ಸೆವಿಲ್ಲಾ ಎಫ್‌ಸಿದ ಕ್ರೀಡಾ ಪಯಣವಾಗಿದ್ದು, ಅವರ ಅಂತರರಾಷ್ಟ್ರೀಯ ಭಾಗೀದಾರನಾಗಿ ನಾವು ಇದರಿಂದ ಅಪಾರ ಪ್ರೇರಣೆ ಪಡೆದುಕೊಳ್ಳಬಹುದು.” ಎಂದು ಮನ್ಚಂದ ಸೇರಿಸಿದರು.

    “ನೆವರ್ ಸರಂಡರ್” ಸಾಕ್ಷ್ಯಚಿತ್ರ ಸೀರೀಸ್‌ನ  ಮೊದಲ ಸೀಸನ್‌ಅನ್ನು 2022-2023ದಲ್ಲಿ ಪ್ರಾರಂಭಿಸಲಾಗಿತ್ತು ಮತ್ತು 8 ದಶಲಕ್ಷಕ್ಕಿಂತ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಳ್ಳುವ ಮೂಲಕ ಅದು ಭಾರತದಲ್ಲಿ ಉತ್ತಮ ಸ್ವೀಕೃತಿ ಕಂಡಿತ್ತು. ಈ ಎಪಿಸೋಡ್‌ಗಳನ್ನು MTV, VH1, ಮತ್ತು ಇನ್ಫಿನಿಟಿ ಒಳಗೊಂಡಂಖ್ತೆ, ಮೂರು ಭಾರತೀಯ ದೂರದರ್ಶನ ವಾಹಿನಿಗಳಲ್ಲೂ ಪ್ರಸಾರ ಮಾಡಲಾಗಿತ್ತು.

    “ನೆವರ್ ಸರಂಡರ್”ನ ಹೊಸ ಸೀರೀಸ್ ಪ್ರಾರಂಭದೊಂದಿಗೆ, ಭಾರತೀಯ ಕ್ರೀಡೆಗಳಿಂದ ಹಿಡಿದು ಸ್ಪೇನ್ ಹಾಗೂ ಯೂರೋಪ್‌ವರೆಗೆ ಅತ್ಯಂತ ಪ್ರೇರಣಾತ್ಮಕ ಕಥೆಗಳನ್ನು ಪ್ರಸಾರ ಮಾಡುವ ಸಮಯದಲ್ಲೇ ತನ್ನ ಧ್ಯೇಯ ಮತ್ತು ಮೌಲ್ಯಗಳನ್ನು ತಿಳಿಸುವುದೂ ಕ್ಲಬ್‌ನ ಗುರಿಯಾಗಿದೆ. ಈ ಕಥೆಗಳು, ಕ್ಲಬ್‌ನ ಬ್ರ್ಯಾಂಡ್‌ನೊಂದಿಗೆ ನಿಖರವಾಗಿ ಹೊಂದಿಕೊಳ್ಳುತ್ತವೆ.

    ಕ್ಲಬ್ ಭಾರತದೊಡನೆ ಅತ್ಯಂತ ಶಕ್ತಿಶಾಲಿ ಸಂಪರ್ಕ ಹೊಂದಿದೆ. ಇದಕ್ಕೆ ಕಾರಣ, ಎಫ್‌ಸಿ ಬೆಂಗಳೂರು ಯುನೈಟೆಡ್‌ನೊಂದಿಗೆ 2021ರಿಂದಲೂ ಚಾಲ್ತಿಯಲ್ಲಿರುವ ಸಹಯೋಗ ಒಪ್ಪಂದ. ಇತ್ತೀಚೆಗೆ, ಭಾರತೀಯ ಕ್ಲಬ್‌ನ ಕೋಚ್ ಫರ್ನಾಂಡೋ ಸಾಂಟಿಯಾಗೊ ವರೇಲ, ನಮ್ಮ ತರಬೇತಿ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಕ್ಲಬ್ ಕುರಿತು ಅರಿವು ಬೆಳೆಸಿಕೊಂಡರಲ್ಲದೆ, Quique Sánchez Flores , Jesús Navas ಮತ್ತು Sergio Ramos ಅವರೊಡನೆ ಮಾತನಾಡುವುದೂ ಸಾಧ್ಯವಾಯಿತು.

    ಭಾರತದಲ್ಲಿ ನಮ್ಮ ಕ್ರೀಡೆಯಲ್ಲಿ ಕ್ಲಬ್ ಮಹತ್ತರವಾದ ಬೆಳವಣಿಗೆಯನ್ನು ಕಾಣುತ್ತಲೇ ಬಂದಿದೆ. ಇತ್ತೀಚೆಗೆ, ಸಮೂಹ ಮಾಧ್ಯಮದಲ್ಲಿ 20 ದಶಲಕ್ಷ ಅನುಯಾಯಿಗಳ ಮೈಲಿಗಲ್ಲು ತಲುಪಿದ ಕ್ಲಬ್ ಕಳೆದ 12 ತಿಂಗಳುಗಳಿಂದ ಶೇಕಡ 1126 ಹೆಚ್ಚಳಿಕೆ ಕಾಣುವ ಮೂಲಕ ಭಾರತವನ್ನು ಅತಿವೇಗವಾಗಿ ಬೆಳೆಯುತ್ತಿರುವ ದೇಶವನ್ನಾಗಿ ಮಾಡಿದೆ. ಕಳೆದ ವಾರ, ಬೆಂಗಳೂರು ಯುನೈಟೆಡ್‌ನೊಂದಿಗಿನ ಸಹಯೋಗದಲ್ಲಿ Celta de Vigo ವಿರುದ್ಧ ಒಂದು ವಾಚ್ ಪಾರ್ಟಿ ನಡೆಸಲಾಗಿತ್ತು. “ನೆವರ್ ಸರಂಡರ್” ಸೀರೀಸ್ ಒಳಗೊಂಡಂತೆ, ಭಾರತದಲ್ಲಿ ನಮ್ಮ ಅಭಿಮಾನಿಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ವಿಶೇಷ ಕಂಟೆಂಟ್‌ನೊಂದಿಗೆ ನಮ್ಮ ಅಂತರರಾಷ್ಟ್ರೀಯತಾ ತಂತ್ರಕ್ಕೆ ಬೆಂಬಲ ಒದಗಿಸಲು ಈ ಬೆಳವಣಿಗೆ ನೆರವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts