More

    ಹಳೇ ವಾಹನಕ್ಕೆ ಕೇಂದ್ರದ ಹೊಸ ಕೊಡುಗೆ

    ನವದೆಹಲಿ: ಮಾಲಿನ್ಯ ನಿಯಂತ್ರಣ ಮತ್ತು ಇಂಧನ ಬಳಕೆಯ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ ನೆರವಾಗಬಲ್ಲ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ವಾಹನ ಸ್ಕ್ರಾ್ಯಪಿಂಗ್ ಪಾಲಿಸಿಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಯಲ್ಲಿ ಮಂಡಿಸಿದರು.

    ದೇಶದ ಆಟೊಮೊಬೈಲ್ ಉದ್ಯ ಮದ ವಾರ್ಷಿಕ ವಹಿವಾಟನ್ನು ಈಗಿರುವ 4.5 ಲಕ್ಷ ಕೋಟಿ ರೂಪಾಯಿಯಿಂದ 10 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸುವಲ್ಲಿ ಈ ನೀತಿ ಪೂರಕವಾಗಿರಲಿದೆ. ಹಳೆ ವಾಹನದ ಸ್ಕ್ರಾ್ಯಪ್ ಮೌಲ್ಯವು ಅಂದಾಜು ಹೊಸ ವಾಹನದ ಎಕ್ಸ್ ಶೋರೂಮ್ ಮೌಲ್ಯದ ಶೇಕಡ 4ರಿಂದ 6ರಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.

    ಹಳೆಯ ಮತ್ತು ದೋಷ ಪೂರಿತ ವಾಹನಗಳ ಸಂಖ್ಯೆ ಕಡಿಮೆಯಾದಾಗ, ಅವುಗಳಿಂದ ಉಂಟಾಗುತ್ತಿದ್ದ ವಾಯು ಮತ್ತು ಇತರೆ ಮಾಲಿನ್ಯ ಪ್ರಮಾಣವೂ ತಗ್ಗಲಿದೆ. ಹಳೆಯ ವಾಹನಗಳಲ್ಲಿ ಬಳಸಿದ ಪ್ಲಾಸ್ಟಿಕ್, ತಾಮ್ರ, ಅಲ್ಯೂಮಿನಿಯಂ, ಸ್ಟೀಲ್ ಮತ್ತು ರಬ್ಬರ್ ಸೇರಿ ಬಿಡಿಭಾಗಗಳ ಮರುಬಳಕೆಯೂ ಆಗಲಿದೆ. ಇದರಿಂದ ಹೊಸ ವಾಹನಗಳ ಉತ್ಪಾದನಾ ವೆಚ್ಚವೂ ಗಣನೀಯವಾಗಿ ತಗ್ಗಲಿದೆ. ಅದೇ ರೀತಿ, ಹೊಸ ವಾಹನಗಳ ಖರೀದಿ ಹೆಚ್ಚುವ ಕಾರಣ ಜಿಎಸ್​ಟಿ ಆದಾಯವೂ ವೃದ್ಧಿಯಾಗಲಿದೆ. ಹೊಸ ವಾಹನಗಳ ಕಾರಣ ರಸ್ತೆ ಸುರಕ್ಷತೆಯೂ ಹೆಚ್ಚಲಿದೆ ಎಂದು ಸಚಿವ ಗಡ್ಕರಿ ವಿವರಿಸಿದರು.

    ಸ್ಕ್ರಾ್ಯಪ್ ನೀತಿ ಪ್ರಯೋಜನ

    ವೈಯಕ್ತಿಕ/ಖಾಸಗಿ ವಾಹನಗಳ ರಸ್ತೆ ತೆರಿಗೆಯಲ್ಲಿ ಶೇಕಡ 25 ಮತ್ತು ವಾಣಿಜ್ಯ ವಾಹನಗಳ ತೆರಿಗೆಯಲ್ಲಿ ಶೇಕಡ 15 ವಿನಾಯಿತಿ ನೀಡುವುದಕ್ಕೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಗಿದೆ.

    ಹೊಸ ವಾಹನ ಖರೀದಿ ವೇಳೆ ಗ್ರಾಹಕರು ಸ್ಕ್ರಾ್ಯಪ್ ಪ್ರಮಾಣಪತ್ರವನ್ನು ತೋರಿಸಿದರೆ ವಾಹನ ತಯಾರಕರು 5% ವಿನಾಯಿತಿ ನೀಡಬೇಕೆಂಬ ಸಲಹೆ ನೀಡಲಾಗಿದೆ.

    ಸ್ಕ್ರಾ್ಯಪ್ ಪ್ರಮಾಣಪತ್ರ ಇದ್ದರೆ ಹೊಸ ವಾಹನದ ನೋಂದಣಿ ಶುಲ್ಕವನ್ನೂ ಮನ್ನಾ ಮಾಡುವ ಪ್ರಸ್ತಾವನೆ ಇದೆ.

    ಸ್ಕ್ರಾ್ಯಪ್ ಪ್ರಮಾಣಪತ್ರ ಇದ್ದರೆ ಅಂತಹ ವಾಹನ ಮಾಲೀಕರಿಗೆ ಇನ್​ಸೆಂಟಿವ್ಸ್ ಕೊಡುವ ಪ್ರಸ್ತಾವನೆಯೂ ಕರಡಿನಲ್ಲಿದೆ.

    ವಾಹನ್ ಡೇಟಾ ಬೇಸ್ ಬಳಸಿ ಕೊಂಡು ಸ್ಕ್ರಾ್ಯಪ್​ಗೆ ಬಂದ ವಾಹನ ಗಳ ಮಾಲೀಕತ್ವ ಪರಿಶೀಲಿಸಲಾಗುತ್ತದೆ.

    ಕಳವು ಮಾಡಿ ತಂದ ವಾಹನಗಳ ಸ್ಕ್ರಾ್ಯಪ್ ಮಾಡುವುದಕ್ಕೆ ಸ್ಕ್ರಾ್ಯಪಿಂಗ್ ಸೆಂಟರ್​ಗೆ ಅಧಿಕಾರ ಇಲ್ಲ.

    ಯಾವ ವಾಹನಗಳನ್ನು ಗುಜರಿಗೆ ಹಾಕಬಹುದು ಎಂದರೆ, 15 ವರ್ಷ ಮೇಲ್ಪಟ್ಟ ಸರ್ಕಾರಿ, ಪಿಎಸ್​ಯುು ಮಾಲೀಕತ್ವದ ವಾಹನಗಳು, ಅಗ್ನಿ ದುರಂತ, ದೊಂಬಿ ಗಲಾಟೆಗೆ ಬಲಿಯಾದ ವಾಹನಗಳು, ಪ್ರಕೃತಿ ವಿಕೋಪಕ್ಕೆ ತುತ್ತಾದ ವಾಹನಗಳು, ದೋಷಪೂರಿತ ವಾಹನಗಳು, ಜಪ್ತಿ ಮಾಡಲಾಗಿದ್ದು ಬಳಕೆಯಲ್ಲಿ ಇಲ್ಲದೆ ಇರುವ ವಾಹನಗಳು

    ನೀತಿ ಅನುಷ್ಠಾನ ಯಾವಾಗ?

    ಸದ್ಯದ ಮಾಹಿತಿ ಪ್ರಕಾರ, 2021ರ ಅಕ್ಟೋಬರ್ 1ರಿಂದ ವಾಹನ ಸ್ಕ್ರಾ್ಯಪಿಂಗ್ ನಿಯಮ ಜಾರಿಗೆ ಬರಲಿದೆ. ಸರ್ಕಾರಿ ಮತ್ತು ಪಿಎಸ್​ಯುುಗಳ 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವ ನಿಯಮ 2022ರ ಎಪ್ರಿಲ್ 1ರಿಂದ ಜಾರಿಗೆ ಬರಲಿದೆ. ಬೃಹತ್ ವಾಣಿಜ್ಯ ವಾಹನಗಳ ಫಿಟ್ನೆಸ್ ಟೆಸ್ಟ್ 2023ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಯಾಗಲಿದೆ. ಇತರೆ ಕೆಟಗರಿಯ ವಾಹನಗಳಿಗೆ ಇದು 2024ರ ಜೂನ್ 1ರಿಂದ ಹಂತಹಂತವಾಗಿ ಅನುಷ್ಠಾನವಾಗಲಿದೆ.

    ಶೀಘ್ರವೇ ಕರಡು ಅಧಿಸೂಚನೆ

    ವಾಹನ ಸ್ಕ್ರಾ್ಯಪಿಂಗ್ ನೀತಿಯ ಕರಡು ಅಧಿಸೂಚನೆ ಕೆಲ ವಾರಗಳಲ್ಲಿ ಪ್ರಕಟಿಸಲಾ ಗುತ್ತದೆ. ಅದನ್ನು ಗಮನಿಸಿ, ಅಗತ್ಯ ತಿದ್ದುಪಡಿಗಳು ಸೂಚಿಸುವುದಕ್ಕೆ ಕಾಲಾವ ಕಾಶ ನೀಡ ಲಾಗುತ್ತದೆ. ಸರ್ಕಾರದ ಗಮನಕ್ಕೆ ಬಂದ ಪರಿಷ್ಕರಣೆ ಬೇಡಿಕೆ ಪರಿಶೀಲಿಸಿ ಅಂತಿಮ ನೀತಿ ರೂಪಿಸಲಾಗುತ್ತದೆ ಎಂದು ಕೇಂದ್ರ ಸಚಿವ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

    ಗುಜರಿ ಸೇರಲಿರುವ ವಾಹನಗಳು

    • 20 ವರ್ಷ ಮೇಲ್ಪಟ್ಟ 51 ಲಕ್ಷ ಲಘು ಮೋಟಾರು ವಾಹನಗಳು
    • 15 ವರ್ಷ ಮೇಲ್ಪಟ್ಟ 34 ಲಕ್ಷ ಲಘು ಮೋಟಾರು ವಾಹನಗಳು
    • 15 ವರ್ಷ ಮೇಲ್ಪಟ್ಟ 17 ಲಕ್ಷ ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts