More

    ನೂತನ ಹಾವೇರಿ ವಿಶ್ವವಿದ್ಯಾಲಯ ಕಾರ್ಯಾರಂಭ

    • ಕೇಶವಮೂರ್ತಿ ವಿ.ಬಿ. ಹಾವೇರಿ

    ಜಿಲ್ಲೆಯಲ್ಲಿ ನೂತನ ಹಾವೇರಿ ವಿಶ್ವವಿದ್ಯಾಲಯ ಅಧಿಕೃತವಾಗಿ ಆರಂಭವಾಗಿದ್ದು, ಕೆರಿಮತ್ತಿಹಳ್ಳಿ ಗ್ರಾಮದ ನೂತನ ವಿಶ್ವವಿದ್ಯಾಲಯ ಆವರಣದಲ್ಲಿ ಹೊಸ ಭರವಸೆಗಳು ಚಿಗುರೊಡೆಯುತ್ತಿವೆ. ಜಿಲ್ಲೆಯ ಗ್ರಾಮೀಣ ಮತ್ತು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಕನಸು ನನಸಾಗುವ ಸಂದರ್ಭ ಒದಗಿದೆ.

    ಹಿಂದಿನ ಬಿಜೆಪಿ ಸರ್ಕಾರ ಏಳು ನೂತನ ವಿವಿಗಳನ್ನು ಘೊಷಿಸಿತ್ತು. ಅದರಲ್ಲಿ ಹಾವೇರಿ ವಿವಿ ಸಹ ಸೇರಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಹಾವೇರಿ ಜಿಲ್ಲೆಗೆ ಹಲವು ಸಮಸ್ಯೆಗಳನ್ನು ದಾಟಿ ಈಗ ಸ್ವಂತ ವಿವಿಗೆ ಚಾಲನೆ ಸಿಕ್ಕಿದೆ. ಏಳು ಹೊಸ ವಿವಿಗಳ ಪೈಕಿ ಹಾವೇರಿ ಸುಸಜ್ಜಿತ, ಸ್ವಂತ ಕ್ಯಾಂಪಸ್, ಕಟ್ಟಡ ಹೊಂದಿದೆ. ಈ ಮೂಲಕ ಹಲವು ದಶಕಗಳ ಕನಸನ್ನು ಜಿಲ್ಲೆ ನನಸಾಗಿಸಿಕೊಂಡಿದೆ.

    ಹಾವೇರಿ ಶಹರದಿಂದ ಏಳು ಕಿ.ಮೀ. ದೂರದಲ್ಲಿರುವ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ 42 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕ ವಿವಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ನಡೆಯುತ್ತಿತ್ತು. ಈ ಕೇಂದ್ರವನ್ನೇ ಉನ್ನತ ಶಿಕ್ಷಣ ಇಲಾಖೆ ಇದೀಗ ನೂತನ ಹಾವೇರಿ ವಿವಿಯನ್ನಾಗಿ ಪರಿವರ್ತಿಸಿದೆ. ಇಲಾಖೆಯ ದಾಖಲೆಗಳಲ್ಲಿ, ವಿವಿ ಆವರಣದ ನಾಮಫಲಕದಲ್ಲಿ ನೂತನ ವಿವಿ ಎಂದು ಬದಲಾಯಿಸಲಾಗಿದೆ. ಸಂಬಂಧಪಟ್ಟ ಆಸ್ತಿಯ ದಾಖಲೆ ಪತ್ರಗಳನ್ನು ಕವಿವಿ ನೂತನ ವಿವಿಗೆ ಹಸ್ತಾಂತರಿಸುವ ಕಾರ್ಯ ಮಾತ್ರ ಬಾಕಿ ಉಳಿದಿದೆ.

    ಕುಲ ಸಚಿವರ ನೇಮಕ

    ಹಾವೇರಿ ನೂತನ ವಿವಿ ಆಡಳಿತ ವಿಭಾಗದ ಕುಲಸಚಿವರಾಗಿ ಧಾರವಾಡ ಕವಿವಿಯ ಪ್ರೊ. ಸಿದ್ದಪ್ಪ ಬಾಗಲಕೋಟಿ ಹಾಗೂ ಮೌಲ್ಯಮಾಪನ ಕುಲಸಚಿವರಾಗಿ ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಮರಾಠ ಮಂಡಳ ಕಾಲೇಜಿನ ಇಂಗ್ಲಿಷ್ ವಿಭಾಗದ ಪ್ರೊಫೆಸರ್ ಡಾ. ವಿಜಯಲಕ್ಷ್ಮೀ ತಿರ್ಲಾಪುರ ಅವರನ್ನು ನೇಮಕಗೊಳಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಇಬ್ಬರೂ ಕರ್ತವ್ಯಕ್ಕೆ ಹಾಜರಾಗಿದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts