More

    ಇನ್ಮೇಲೆ ವಿಮಾನ ಪ್ರಯಾಣಿಕರು ಯಾವ್ಯಾವ ನಿಯಮ ಪಾಲಿಸಬೇಕು? ಕೇಂದ್ರದಿಂದ ಹೊಸ ಮಾರ್ಗಸೂಚಿ

    ನವದೆಹಲಿ: ಲಾಕ್‌ಡೌನ್ ಮುಗಿದ ನಂತರ ಪುನಾರಂಭವಾಗಲಿರುವ ವಿಮಾನ ಸಂಚಾರದ ವೇಳೆ ಅನುಸರಿಸಬೇಕಾದ ನಿಯಮಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ ರೂಪಿಸಿದ್ದು ಕ್ಯಾಬಿನ್ ಬ್ಯಾಗೇಜ್‌ಗೆ ಅವಕಾಶ ನೀಡದಿರುವುದೂ ಹೊಸ ನಿಯಮಗಳಲ್ಲಿ ಸೇರಲಿದೆ.

    ಲಾಕ್‌ಡೌನ್ ನಂತರದ ದಿನಗಳಲ್ಲಿ ಸ್ವಲ್ಪ ಕಾಲ ವಿಮಾನಗಳಲ್ಲಿ ಪ್ರಯಾಣಿಸುವವರು ಕೊವಿಡ್-19ಗೆ ಸಂಬಂಧಿಸಿದ ಒಂದು ಪ್ರಶ್ನಾವಳಿಯನ್ನು ತುಂಬಬೇಕಾಗುತ್ತದೆ. ಕರೊನಾ ಪತ್ತೆ ಹಚ್ಚುವ ಆರೋಗ್ಯ ಸೇತು ಆ್ಯಪ್ ಬಳಸುವುದು ಹಾಗೂ ವಿಮಾನ ಬಿಡುವ ನಿಗದಿತ ಸಮಕ್ಕಿಂತ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ನಿಲ್ದಾಣ ತಲುಪುವುದು ಕಡ್ಡಾಯ ಮಾಡಲಾಗಿದೆ.

    ಇದನ್ನೂ ಓದಿ ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ

    ಮಾರಕ ಕರೊನಾ ವೈರಸ್ ವ್ಯಾಪಿಸುವುದನ್ನು ತಡೆಯುವ ಕ್ರಮದ ಭಾಗವಾಗಿ ವಿಮಾನಗಳ ಸಂಚಾರವನ್ನು ನಿಷೇಧಿಸಲಾಗಿದೆ. ದೇಶದಲ್ಲಿ ವಾಣಿಜ್ಯ ವಿಮಾನ ಪ್ರಯಾಣ ಪುನಾರಂಭಕ್ಕೆ ಸಚಿವಾಲಯ ಸ್ಟಾಂಡರ್ಡ್ ನಿರ್ವಹಣಾ ನಿಯಮಾವಳಿ (ಎಸ್‌ಓಪಿ) ರೂಪಿಸಿದೆ.

    ಆರೋಗ್ಯ ಸೇತು ಆ್ಯಪ್‌ನಲ್ಲಿ ಗ್ರೀನ್ ಸ್ಟೇಟಸ್, ವೆಬ್ ಚೆಕ್-ಇನ್ ಮತ್ತು ದೇಹದ ತಾಪಮಾನ ಪರೀಕ್ಷೆ ಕಡ್ಡಾಯಗೊಳಿಸುವ ಪ್ರಸ್ತಾವವೂ ಸಚಿವಾಲಯದ ಮುಂದಿದೆ.

    ಇದನ್ನೂ ಓದಿ ಲಾಕ್​ಡೌನ್​ನಲ್ಲೇ ಸೂಪರ್​ಸ್ಟಾರ್​ ರಜನಿಕಾಂತ್​ ಕಡೆಯಿಂದ ಬಂತು ಸಿಹಿಸುದ್ದಿ!

    ಸಾಧ್ಯವಾದಷ್ಟೂ ಹೆಚ್ಚು ದಿನ ಅದೇ ಕ್ಯಾಬಿನ್ ಮತ್ತು ಕಾಕ್‌ಪಿಟ್ ಸಿಬ್ಬಂದಿಯನ್ನು ಕಾರ್ಯ ನಿರ್ವಹಿಸುವಂತೆ ಮಾಡುವ ಉದ್ದೇಶವೂ ಇದೆ. ರೊಟೇಷನ್ ಇದ್ದರೆ ಇತರ ಸಿಬ್ಬಂದಿಗಳಿಗೆ ಸೋಂಕು ಹರಡುವ ಸಂಭವ ಇರುವುದರಿಂದ ಆ ಅಪಾಯ ತಡೆಯುವುದು ಇದರ ಉದ್ದೇಶ.

    ಪ್ರಯಾಣಿಕರು ಮಾತ್ರವಲ್ಲದೆ ಭದ್ರತಾ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣ ನಿರ್ವಾಹಕರು ಅನುಸರಿಸಬೇಕಾದ ಕ್ರಮಗಳನ್ನು ಕೂಡ ಸಚಿವಾಲಯ ಸಲಹೆ ಮಾಡಿದೆ. ವಿಮಾನ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಗುರುತು ಪತ್ರ ತಪಾಸಣೆ ಮಾಡದಿರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಖಾತರಿಪಡಿಸುವುದೂ ಅದರಲ್ಲಿ ಸೇರಿವೆ.

    ಇದನ್ನೂ ಓದಿ ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ ಲಾಕ್​ಡೌನ್​ 4.0: ಪ್ರಧಾನಿ ಮೋದಿ

    ತುರ್ತು ವೈದ್ಯಕೀಯ ನೆರವು ಅಗತ್ಯವಾಗಬಹುದಾದ ಪ್ರಯಾಣಿಕರನ್ನು ಐಸೊಲೇಟ್ ಮಾಡುವ ಅನುಕೂಲಕ್ಕಾಗಿ ವಿಮಾನಗಳಲ್ಲಿ ಮೂರು ಸಾಲುಗಳನ್ನು ಖಾಲಿ ಬಿಡಲು ಸೂಚಿಸಲಾಗಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಕ್ಕಾಗಿ ವಿಮಾನದ ಮಧ್ಯದ ಆಸನವನ್ನು ಖಾಲಿ ಬಿಡಬೇಕೆಂಬ ಬಗ್ಗೆ ನಿಯಮಾವಳಿ ಮೌನವಾಗಿದೆ.

    ಮಾರ್ಚ್‌ನಲ್ಲಿ ವಿಮಾನ ಪ್ರಯಾಣ ಸೇವೆ ರದ್ದುಪಡಿಸುವ ಮುನ್ನ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಮಧ್ಯದ ಆಸನ ಖಾಲಿ ಬಿಡಬೇಕೆಂದು ಹೇಳಿತ್ತು.

    ಗುರುಗ್ರಾಮ್​ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್​ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts