More

    ನವ ಪೀಳಿಗೆಗೆ ಡಾ. ಕೋರೆ ರೋಲ್‌ಮಾಡೆಲ್

    ಬೆಳಗಾವಿ: ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಲಿಂಗರಾಜು ಕಾಲೇಜು ಪ್ರಾಚಾರ್ಯ ಡಾ. ಆರ್. ಎಂ. ಪಾಟೀಲ ಹೇಳಿದರು.

    ಡಾ. ಪ್ರಭಾಕರ ಕೋರೆ ಅವರ 73ನೇ ಜನ್ಮದಿನದ ಅಂಗವಾಗಿ ನಗರದ ಲಿಂಗರಾಜು ಕಾಲೇಜು ಆವರಣದಲ್ಲಿ ಶನಿವಾರ ಸಸಿಗಳನ್ನು ನೆಡುವ ಮೂಲಕ ಸರಳವಾಗಿ ಜನ್ಮದಿನಾಚರಣೆ ಆಚರಿಸಿದ ಬಳಿಕ ಅವರು ಮಾತನಾಡಿ, ಇಂದಿನ ಯುವ ಪೀಳಿಗೆಗೆ ಅವರು ರೋಲ್‌ಮಾಡೆಲ್ ಆಗಿದ್ದಾರೆ ಎಂದರು.

    ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಎಲ್‌ಇ ಸಂಸ್ಥೆ ಮನ್ನಣೆ ಗಳಿಸಿದೆ. ಈ ಖ್ಯಾತಿಗೆ ಕಾರಣ, ಅದರ ಹಿಂದಿನ ಮಹಾನ್ ಶಕ್ತಿ ಡಾ. ಪ್ರಭಾಕರ ಕೋರೆ ಅವರೇ ಕಾರಣ. ಕೆಎಲ್‌ಇ ಸಂಸ್ಥೆಯು ಜಾಗತಿಕವಾಗಿ ಪ್ರಸಿದ್ಧವಾಗಲು ಅವರ ನಿರಂತರ ಶ್ರಮ, ನಿಸ್ವಾರ್ಥ ಸೇವೆ ಪ್ರಮುಖವಾಗಿದೆ ಎಂದು ತಿಳಿಸಿದರು.

    ಕೆಎಲ್‌ಇ ಆಜೀವ ಸದಸ್ಯ ಡಾ. ಪ್ರಕಾಶ ಕಡಕೋಳ, ಉಪಪ್ರಾಚಾರ್ಯ ಎಂ.ಆರ್. ಬನಹಟ್ಟಿ, ಪಪೂ ಪ್ರಾಚಾರ್ಯ ಗಿರಿಜಾ ಹಿರೇಮಠ, ಕಾಲೇಜ್‌ನ ಎನ್‌ಸಿಸಿ ಅಧಿಕಾರಿ ಡಾ. ಮಹೇಶ ಗುರನಗೌಡರ, ಕ್ರೀಡಾ ವಿಭಾಗ ಡಾ. ಸಿ.ರಾಮರಾವ್ ಹಾಗೂ ಎನ್‌ಎಸ್‌ಎಸ್ ವಿಭಾಗದ ಡಾ. ಚನ್ನಪ್ಪಗೋಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts