More

    ರಾಮ್ ​ಚರಣ್​ ಮುಂದಿನ ಚಿತ್ರ ‘RC 16’ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ನಟಿ!

    ಆಂಧ್ರಪ್ರದೇಶ: ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಮತ್ತು ಯಶಸ್ವಿ ನಿರ್ದೇಶಕ ಬುಚ್ಚಿ ಕಾಂಬಿನೇಷನ್​​ನಲ್ಲಿ ಮೂಡಿಬರುತ್ತಿರುವ ‘ಆರ್‌ಸಿ 16’ ಚಿತ್ರ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಮ್​​ಚರಣ್​ಗೆ ಜೋಡಿಯಾಗಿ ಕೃತಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಎಲ್ಲರಿಗೂ ತಿಳಿದಿತ್ತು. ಆದ್ರೆ, ಪ್ರಮುಖ ಪಾತ್ರವನ್ನು ಮಾಡಲು ಎಂಟ್ರಿ ಕೊಟ್ಟಿರುವ ನಟಿ ಯಾರು ಎಂಬ ಪ್ರಶ್ನೆ ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ.

    ಇದನ್ನೂ ಓದಿ: ಮೊಹರಂ ಹಬ್ಬ ಸೌಹಾರ್ದತೆಯಿಂದ ಆಚರಿಸಿ:ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಅನಿಸಿಕೆ

    ಸಿನಿ ಮಾಹಿತಿಯ ಪ್ರಕಾರ, ತೆಲುಗು ನಟಿ ಲಯಾ ಅವರು ರಾಮ್​ಚರಣ್​ ಅವರ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ಮಾಡಲು ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಲು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಚಿತ್ರೀಕರಣ ಪ್ರಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಈ ಬಗ್ಗೆ ನಿರ್ಮಾಪಕರು ಅಧಿಕೃತ ಘೋಷಣೆ ಮಾಡುವುದಷ್ಟೇ ಬಾಕಿಯಿದೆ.

    ‘ಆರ್‌ಸಿ 16’ ಚಿತ್ರದಲ್ಲಿ ರಾಮ್​​ಚರಣ್​ ತೇಜಾ ಮತ್ತು ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯ್ ಸೇತುಪತಿ ಕೂಡ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಸದ್ಯ ಸಿನಿಪ್ರೇಕ್ಷಕರ ಕುತೂಲವನ್ನು ಮತ್ತಷ್ಟು ಹೆಚ್ಚಿಸಿದೆ. ವೃದ್ಧಿ ಸಿನಿಮಾಸ್ ಬ್ಯಾನರ್​ನಲ್ಲಿ, ವೆಂಕಟ ಸತೀಶ್ ಕಿಲಾರು ಅವರ ನಿರ್ಮಾಣದಲ್ಲಿ ಚಿತ್ರ ತಯಾರಾಗುತ್ತಿದ್ದು, ಎ.ಆರ್. ರೆಹಮಾನ್ ಅವರ ಸಂಗೀತ ಚಿತ್ರಕ್ಕಿದೆ. ಆರ್​ಆರ್​ಆರ್​​ ಸಿನಿಮಾದ ನಂತರ ಮೆಗಾಸ್ಟಾರ್​ ಪುತ್ರನನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).

    ಕುಡಿದ ನಶೆಯಲ್ಲಿ ಪತ್ನಿಗೆ ಚುಂಬನ; ಮಹಿಳೆ ಮಾಡಿದ್ದನ್ನು ಗಂಡ ಈ ಜನ್ಮದಲ್ಲಿ ಮರೆಯಲಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts