More

    ಮಾರಕ ಕರೊನಾ ವೈರಸ್​ ಸ್ಟೀಲ್​ ಪಾತ್ರೆಗಳಲ್ಲಿ 3 ದಿನ ಜೀವಂತವಾಗಿರುತ್ತದೆ: ಅಧ್ಯಯನ ವರದಿಯಲ್ಲಿ ಬಹಿರಂಗ

    ನವದೆಹಲಿ: ವಿಶ್ವವನ್ನು ತೀವ್ರವಾಗಿ ಕಾಡುತ್ತಿರುವ ಕರೊನಾ ವೈರಸ್​ ವಾತಾವರಣದಲ್ಲಿ 3 ಗಂಟೆಗಳ ಕಾಲ ಜೀವಂತವಾಗಿರುತ್ತದೆ ಎಂಬುದು ಅಧ್ಯಯನದಿಂದ ಪತ್ತೆಯಾಗಿದೆ.

    ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ (ಎನ್ಇಜೆಎಂ) ನಲ್ಲಿ ಕರೊನಾ ವೈರಸ್​ ಬಗ್ಗೆ ನಡೆಸಿದ ಅಧ್ಯಯನ ಒಂದು ಪ್ರಕಟವಾಗಿದೆ.

    ಕರೊನಾ ವೈರಸ್​ ವಾತಾವರಣದಲ್ಲಿರುವ ವಾಯು ದ್ರವದಲ್ಲಿ 3 ತಾಸು ಇರುತ್ತದೆ. ನಂತರ ಮೃತಪಡುತ್ತದೆ. ಈ ವೇಳೆಯಲ್ಲಿ ಅದು ತೀವ್ರವಾಗಿ ಹರಡುತ್ತದೆ. ಹೀಗಾಗಿ ಇದು ಸಾಂಕ್ರಾಮಿಕವಾಗಿದೆ.

    ತಾಮ್ರದ ಮೇಲ್ಮೈಯಲ್ಲಿ ನಾಲ್ಕು ಗಂಟೆ, ಹಲಗೆಯಲ್ಲಿ 24 ಗಂಟೆ, ಪ್ಲಾಸ್ಟಿಕ್​, ಸ್ಟೀಲ್​ ಪಾತ್ರೆಗಳಲ್ಲಿ 3 ದಿನಗಳ ಕಾಲ ಜೀವಂತವಾಗಿ ಇರುತ್ತದೆ ಎಂದು ಜರ್ನಲ್​ನಲ್ಲಿ ಅಧ್ಯಯನ ಲೇಖನ ಪ್ರಕಟವಾಗಿದೆ.

    ಸಾರ್ಸ್​ ಕೋವ್​ 2 ವೈರಸ್​ನ್ನು ಕರೊನಾ ವೈರಸ್​ ಎನ್ನಲಾಗಿದೆ. ಇದನ್ನು ವಿಶ್ವಸಂಸ್ಥೆ ಕೋವಿಡ್​-19 ಎಂದು ನಾಮಕರಣ ಮಾಡಿದೆ. ಸಾರ್ಸ್​ಕೋವ್​ 2, ಸಾರ್ಸ್​ ವೈರಸ್​ ಆದ ಸಾರ್ಸ್​ ಕೋವ್​ನ್ನು ಹೋಲುತ್ತದೆ. ಹೀಗಾಗಿ ಈ 2 ವೈರಸ್​ಗಳಿಗೆ ನಿಕಟ ಸಂಬಂಧ ಇದೆ. ಎರಡು ವೈರಸ್​ನಿಂದ ಉಸಿರಾಟದ ತೊಂದರೆ ಎದುರಾಗುತ್ತದೆ. 2004ರಿಂದ ಸಾರ್ಸ್​ ವೈರಸ್​ ಪತ್ತೆಯಾಗಿಲ್ಲ.

    ಕರೊನಾ ವೈರಸ್​ ವಿಶ್ವದಲ್ಲಿ ಅಂದಾಜು 2 ಲಕ್ಷ ಮಂದಿಗೆ ಹರಡಿದೆ. ಇದರಲ್ಲಿ 8 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

    ಕರೊನಾ ಸೋಂಕಿತರ ಪತ್ತೆಗಾಗಿ ವಿದೇಶದಿಂದ ಆಗಮಿಸಿದ ಪ್ರಯಾಣಿಕರ ಬಲಗೈ ಮೇಲೆ ಸ್ಟಾಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts