ಸತ್ಯಕ್ಕೆ ಮಣಿಯುವುದು ಸರ್ವಾಧಿಕಾರಿ ಧೋರಣೆ

blank

ಸಾಗರ: ಒಂದು ವಿಷಯ ದಾಟಿಸಲು ಪ್ರತಿಮೆ, ರೂಪಕ, ಸಾಂಕೇತಿಕಗಳ ಅವಲಂಬನೆ ಅಗತ್ಯ. ಆದರೆ ಅ.ರಾ.ಶ್ರೀನಿವಾಸ್ ತಮ್ಮ ಕೃತಿಯಲ್ಲಿ ನೇರವಾಗಿ ವಿಷಯ ಪ್ರಸ್ತಾಪಿಸಿ ಓದುಗರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಇವರ ಕೃತಿಯಲ್ಲಿ ಕಾವ್ಯ ಸ್ಪರ್ಶವಿದೆ ಎಂದು ಸಾಹಿತಿ ಜಯಪ್ರಕಾಶ್ ಮಾವಿನಕುಳಿ ಹೇಳಿದರು.

ಅಂತರಂಗ ಪ್ರಕಾಶನದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕ ಅ.ರಾ.ಶ್ರೀನಿವಾಸ್ ಅವರ 6 ಲಘು ನಾಟಕಗಳು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಇವರ ಕೃತಿಯಲ್ಲಿ ಪ್ರೇಕ್ಷಕರೇ ಪಾತ್ರಧಾರಿಗಳಾಗಿ ವಿಷಯ ಮಂಡಿಸುತ್ತಾರೆ. ತಮ್ಮೊಳಗಿನ ಸಂಘರ್ಷ, ಸತ್ಯಗಳನ್ನು ತೆರೆದಿಡುತ್ತಾರೆ ಎಂದು ತಿಳಿಸಿದರು.
ಸರ್ವಾಧಿಕಾರಿ ಧೋರಣೆಯು ಒಂದಲ್ಲಾ ಒಂದು ದಿನ ಸತ್ಯ ಸಿದ್ಧಾಂತದ ಪ್ರತಿಭಟನೆಗೆ ಮಣಿಯುತ್ತದೆ ಎಂಬ ಮೂಲ ಆಶಯವನ್ನು ನಾಟಕಗಳು ಪರಿಚಯಿಸುತ್ತವೆ. ಕೃತಿಕಾರ ತನ್ನ ಕೃತಿಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಗುತ್ತಿರುವ ಅಪಚಾರಗಳನ್ನು ಪ್ರಶ್ನಿಸುತ್ತಾರೆ. ಸತ್ಯದ ಅಂಶಗಳ ಅನಾವರಣ ಮಾಡಿದ್ದಾರೆ ಎಂದರು.
ಅ.ರಾ.ಶ್ರೀನಿವಾಸ್ ಅವರ ಮತ್ತೊಂದು ಕೃತಿ ಗುಚ್ಛ ಕುರಿತು ಸಹಕಾರ ಸಂಘಗಳ ಮಾಜಿ ನಿಬಂಧಕ ಜಯಪ್ರಕಾಶ ತಲವಾಟ ಮಾತನಾಡಿ, ಈ ಕೃತಿಯಲ್ಲಿ ಬರಹಗಳು ಗಾಂಧೀಜಿ ಅವರ ಚಿಂತನೆಯ ಪ್ರೇರಣೆ ನೆನಪಿಸುತ್ತದೆ. ಇಲ್ಲಿ ನಡೆದ ಬಹುತೇಕ ಚಳವಳಿಗಳು ಯುವ ತಲೆಮಾರಿನಲ್ಲಿ ಅಪ್ರಸ್ತುತವಾಗುತ್ತಿವೆ. ಹೋರಾಟದ ಭೂಮಿ ಮತ್ತು ಭೂಮಿಕೆ ತನ್ನ ಮಹತ್ವವನ್ನು ಕಳಚಿಕೊಂಡು ಬದಲಾಗುತ್ತಿರುವುದನ್ನು ಕೂಡಾ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು.
ಕೃತಿಕಾರ ಅ.ರಾ.ಶ್ರೀನಿವಾಸ್ ಮಾತನಾಡಿ, ಪ್ರಕಾಶಕರು ಪುಸ್ತಕ ಪ್ರಕಟಿಸುವಾಗ ಪ್ರಸಿದ್ಧರು ಎನ್ನುವ ಹಣೆಪಟ್ಟಿ ಕಟ್ಟಿಕೊಂಟು ಪ್ರಕಟಿಸುವ ಚಿಂತನೆ ಮಾಡುತ್ತಾರೆ. ಪುಸ್ತಕದ ಗಟ್ಟಿತನವನ್ನೂ ಗಮನಿಸಬೇಕು. ಈ ರೀತಿ ತಾರತಮ್ಯಗಳಿಂದ ಎಷ್ಟೋ ಬರಹಗಾರರಿಗೆ ಅವಕಾಶಗಳೇ ಸಿಗುವುದಿಲ್ಲ. ಲೇಖಕನೇ ಪ್ರಕಾಶಕನಾಗಬೇಕಾದ ಪರಿಸ್ಥಿತಿ ಎದುರಾಗಿರುವುದು ದುರ್ದೈವ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಡವಾಗಿದೆ. ಪುಸ್ತಕ ಬಿಡುಗಡೆಗೂ ಸಹ ಸಹಕರಿಸದ ಪರಿಷತ್ ನಿಜವಾಗಿ ತೊಡಗಿಕೊಳ್ಳಬೇಕಾದ ಕೆಲಸಗಳಿಂದ ದೂರ ಸರಿಯುತ್ತಿರುವುದು ಬೇಸರದ ಸಂಗತಿ ಎಂದರು.
ರಂಗಕರ್ಮಿ ಎಂ.ವಿ.ಪ್ರತಿಭಾ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಚಿಂತಕ ಅ.ರಾ.ಲಂಬೋದರ್, ಪರಮೇಶ್ವರ ದೂಗೂರು, ರಾಘವೇಂದ್ರ ತಾಳಗುಪ್ಪ, ಸುಕೃತ, ಮಹಾಲಕ್ಷ್ಮೀ, ಪವನ್, ನಂದಿನಿ ಇದ್ದರು.

ಜಾತ್ಯತೀತ ನಿಲುವಿನಲ್ಲಿಯೇ ಬರವಣಿಗೆಯನ್ನು ಮುನ್ನಡೆಸಿಕೊಂಡು ಬಂದ ಅ.ರಾ.ಶ್ರೀನಿವಾಸ್ ಸಾಹಿತ್ಯಕ್ಕೆ ಅಮೂಲ್ಯ ಕೃತಿಗಳನ್ನು ನೀಡಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಕೈಗೊಂಡ ಕೆಲಸಕ್ಕೆ ವ್ಯವಸ್ಥಿತ ಮನ್ನಣೆ ದೊರೆಯದೇ ಇರುವುದು ಬೇಸರದ ಸಂಗತಿ. ಸಿದ್ಧಾಂತದ ಪ್ರತಿಪಾದನೆ, ಗಟ್ಟಿ ನಿಲುವು, ಮೊಣಚು ಬರಹದ ಮೂಲಕವೇ ಕೃತಿಕಾರರು ಓದುಗರನ್ನು ಸೆಳೆದಿದ್ದಾರೆ.
ಎಂ.ವಿ.ಪ್ರತಿಭಾ, ರಂಗಕರ್ಮಿ

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…