More

    ‘ಮತ್ತೆ ಲಾಕ್​ಡೌನ್​ ವಿಸ್ತರಣೆ, ಲಾಕ್​ಡೌನ್​ ತೆಗೆಯಬೇಕೆಂದರೆ..’ ದೆಹಲಿ ಮುಖ್ಯಮಂತ್ರಿ ಹೇಳಿದ್ದೇನು?

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕರೊನಾ ಸೋಂಕಿನ ಅಬ್ಬರ ಕಡಿಮೆಯಾಗಿದೆ. ಹಾಗಿದ್ದರೂ ಲಾಕ್​ಡೌನ್​ ಹಿಂಪಡೆಯದ ಸರ್ಕಾರ ಇನ್ನೂ ಒಂದು ವಾರದ ಕಾಲ ಲಾಕ್​ಡೌನ್​ ವಿಸ್ತರಣೆ ಮಾಡಿದೆ. ಲಾಕ್​ಡೌನ್​ ತೆಗೆಯಬೇಕೆಂದರೆ ಪರಿಸ್ಥಿತಿ ಇನ್ನಷ್ಟು ಹತೋಟಿಗೆ ಬರಬೇಕಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ತಿಳಿಸಿದ್ದಾರೆ.

    ನವದೆಹಲಿಯ ಲಾಕ್​ಡೌನ್​ ಮೇ 31ರ ಬೆಳಗ್ಗೆ 5 ಗಂಟೆಯವರೆಗೆ ಮುಂದುವರಿಯಲಿದೆ. ಈ ಬಗ್ಗೆ ಮಾತನಾಡಿರುವ ಅರವಿಂದ ಕೇಜ್ರಿವಾಲ್​, “ಕರೊನಾ ಎರಡನೇ ಅಲೆ ಎಷ್ಟು ಕಾಲದವರೆಗೆ ಮುಂದುವರಿಯುತ್ತದೆ ಎನ್ನುವುದು ನಮಗ್ಯಾರಿಗೂ ಗೊತ್ತಿಲ್ಲ. ಲಾಕ್​ಡೌನ್ ಅವಧಿಯಲ್ಲಿ ಜನರು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ವೈರಸ್​ ವಿರುದ್ಧ ಪೂರ್ತಿ ದೆಹಲಿ ಒಂದು ಕುಟುಂಬವಾಗಿ ಹೋರಾಡಿದೆ. ಆಕ್ಸಿಜನ್​ ಸಮಸ್ಯೆಯಾದಾಗಲೂ ನಮ್ಮ ಹೋರಾಟ ನಿಂತಿರಲಿಲ್ಲ. ಈಗ ಲಸಿಕೆ ಕೊರತೆಯಿದೆ. ಅದಕ್ಕೂ ಶೀಘ್ರದಲ್ಲೇ ಪರಿಹಾರ ಸಿಗಲಿದೆ” ಎಂದು ತಿಳಿಸಿದ್ದಾರೆ.

    ಕರೊನಾ ಸಮಸ್ಯೆಗೆ ಲಸಿಕೆಯೇ ಪರಿಹಾರ. ಸದ್ಯಕ್ಕೆ ಲಾಕ್​ಡೌನ್​ ವಿಸ್ತರಣೆ ಮಾಡಲಾಗುವುದು. ಸೋಂಕಿನ ನಿಯಂತ್ರಣ ಬಂದ ಮೇಲೆ ನಿಧಾನವಾಗಿ ಹಂತ ಹಂತವಾಗಿ ಲಾಕ್​ಡೌನ್​ ತೆಗೆಯಲಾಗುವುದು. ನಮ್ಮಲ್ಲಿ ಕೆಲ ದಿನಗಳ ಹಿಂದೆ ದಿನಕ್ಕೆ 28 ಸಾವಿರದಷ್ಟು ಪ್ರಕರಣ ಪತ್ತೆಯಾಗಿವೆ. ಪಾಸಿಟಿವಿಟಿ ಪ್ರಮಾಣ ಶೇ. 35ರಷ್ಟಿತ್ತು. ಆದರೆ ಈಗ ಏಕದಿನ ಏರಿಕೆ 1,600ಕ್ಕೆ ಇಳಿದಿದೆ ಹಾಗೆಯೇ ಪಾಸಿಟಿವಿಟಿ ಪ್ರಮಾಣ ಕೂಡ ಶೇ. 2.5ಕ್ಕೆ ಇಳಿದಿದೆ ಎಂದು ಅವರು ಹೇಳಿದ್ದಾರೆ.

    ಕರ್ನಾಟಕ, ತಮಿಳುನಾಡು ಸೇರಿ ಅನೇಕ ರಾಜ್ಯಗಳು ಈಗಾಗಲೇ ಲಾಕ್​ಡೌನ್​ ವಿಸ್ತರಣೆ ಮಾಡಿ ಆದೇಶ ಹೊರಡಿಸಿವೆ. (ಏಜೆನ್ಸೀಸ್​)

    ರಾಷ್ಟ್ರಮಟ್ಟದ ಕುಸ್ತಿಪಟುವನ್ನೂ ಬಿಡದ ಕರೊನಾ! ನಗರಸಭೆ ಅಧ್ಯಕ್ಷ ಕರೊನಾಗೆ ಬಲಿ

    ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

    ನರ್ಸ್​ ಕೆನ್ನೆಗೆ ಹೊಡೆದ ವೈರಲ್​ ವಿಡಿಯೋದಲ್ಲಿದ್ದ ಡಾಕ್ಟರ್​ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts