More

    ಮಹಿಷ ದಸರಾ ಆಚರಣೆಗಿದೆಯಂತೆ 50 ವರ್ಷ ಇತಿಹಾಸ! ಹೊಸ ಚರ್ಚೆ ಹುಟ್ಟುಹಾಕಿದ ಆಹ್ವಾನ ಪತ್ರಿಕೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಇದರ ನಡುವೆ ಮಹಿಷ ದಸರಾ ಆಚರಣೆಗೂ ಸಿದ್ಧತೆ ನಡೆದಿದ್ದು, ಪರ-ವಿರೋಧ ಚರ್ಚೆಗೆ ಹಾದಿ ಮಾಡಿಕೊಟ್ಟಿದೆ. ಇದೀಗ ಮಹಿಷ ದಸರಾ ಆಚರಣೆಗೆ 50 ವರ್ಷ ಇತಿಹಾಸವಿದೆ ಎಂದು ಉಲ್ಲೇಖವಾಗಿರುವ ಆಹ್ವಾನ ಪತ್ರಿಕೆ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.

    ಸದ್ಯ 50ನೇ ವರ್ಷದ ಮಹಿಷ ದಸರಾ ಆಚರಣೆ ಎಂದು ಮಹಿಷ ದಸರಾ ಆಚರಣೆ ಸಮಿತಿ ಪೋಸ್ಟರ್ ಬಿಡುಗಡೆ ಮಾಡಿದೆ. ಆದರೆ, ಈ ವಿವಾದ ಆರಂಭವಾಗಿದ್ದು 2015ರಲ್ಲಿ ಎಂದು ಹೇಳಲಾಗಿದೆ. ಚಾಮುಂಡಿ ಬೆಟ್ಟದಲ್ಲೇ ಮಹಿಷ ದಸರಾಗೆ ಚಾಲನೆ ನೀಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರದಲ್ಲಿ ಇದರ ಆಚರಣೆಯನ್ನು ನಿಷೇಧಿಸಲಾಗಿತ್ತು. ಇದೀಗ ಮತ್ತೊಮ್ಮೆ ಆಚರಣೆಗೆ ಸಿದ್ಧತೆ ನಡೆದಿದೆ. ವಿರೋಧಗಳನ್ನು ಬದಿಗೊತ್ತಿ ನಿಗದಿತ ಸ್ಥಳದಲ್ಲೇ ಮಹಿಷ ದಸರಾ ಆಚರಿಸಲು‌ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಆಹ್ವಾನ ಪತ್ರಿಕೆಯಲ್ಲಿ ಚಾಮುಂಡಿ ಬೆಟ್ಟದ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಬಗ್ಗೆ ಮಾಹಿತಿ ಇದೆ. ಅಕ್ಟೋಬರ್ 13 ರಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರು ಮಹಿಷ ದಸರಾ ಉದ್ಘಾಟನೆ ಮಾಡಲಿದ್ದಾರೆ. ಅಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬೆಂಬಲಿಗರು ಜಮಾವಣೆಯಾಗುವಂತೆ ಆಹ್ವಾನ ಪತ್ರಿಕೆ ಮೂಲಕ ಕರೆ ನೀಡಲಾಗಿದೆ.

    ಆದರೆ, ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಸಂಸದ ಪ್ರತಾಪ್ ಸಿಂಹ ಅವರು ಬಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಅದೇ ದಿನ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮವನ್ನು ಸಂಸದು ಹಮ್ಮಿಕೊಂಡಿದ್ದಾರೆ.

    ಇದನ್ನೂ ಓದಿ: ಏಷ್ಯನ್​ ಗೇಮ್ಸ್​ನಲ್ಲಿ ಐತಿಹಾಸಿಕ ಸಾಧನೆ: ಮೊದಲ ಬಾರಿಗೆ ನೂರು ಪದಕಗಳ ಗುರಿ ಮುಟ್ಟಿದ ಭಾರತ

    ಯಾವುದೇ ದ್ವೇಷ ಇಟ್ಟುಕೊಳ್ಳದೆ ಆಚರಣೆ

    50ನೇ ವರ್ಷದ ಮಹಿಷ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ‌, ಎಲ್ಲ ತಾಲೂಕಿನಲ್ಲಿ ಪ್ರಚಾರ ಮಾಡಿದ್ದೇವೆ. ಯಾವುದೇ ದ್ವೇಷ ಇಟ್ಟುಕೊಳ್ಳದೆ ಮಹಿಷ ದಸರಾ ಆಚರಣೆ ಮಾಡುತ್ತಿದ್ದೇವೆ. ಆಸಕ್ತಿ ಇದ್ದವರು ಕಾರ್ಯಕ್ರಮದಲ್ಲಿ‌ ಭಾಗಿಯಾಗಿ. ಸಂಘರ್ಷ ಮಾಡುವವರ ವಿರುದ್ಧ ದೂರು ಕೊಡುತ್ತೇವೆ. ಚಾಮುಂಡಿ ತಾಯಿ ವಿರುದ್ಧ ನಾವು ಆಚರಣೆ ಮಾಡುತ್ತಿಲ್ಲ. ಮಂಟೇಲಿಂಗಯ್ಯನವರು ಮಹಿಷ ದಸರಾ ಆಚರಣೆ ಆರಂಭ ಮಾಡಿದರು. ಚಾಮುಂಡಿ ಬೆಟ್ಟಕ್ಕೆ ಹೋದವರು ಮಹಿಷನಿಗೆ ಗೌರವ ಸಲ್ಲಿಸುತ್ತಿದ್ದರು. 50 ವರ್ಷದ ಹಿಂದೆ ಆಚರಣೆ ಮಾಡುವಾಗ ಕಣ್ಣಿಗೆ ಕಾಣುತ್ತಿರಲಿಲ್ಲ. ಇದು ಸತ್ಯ, ಅಲ್ಲೋ ಇಲ್ಲೋ ಕಾಣುತ್ತಿತ್ತು. ಹಿಂದೆ ಆಚರಣೆ ಮಾಡುತ್ತಿದ್ದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದರು.

    ನಾವು ಸಭೆ ಸೇರಿ ಮಾತನಾಡುವಾಗ ಮಂಟೇಲಿಂಗಯ್ಯ ಆರಂಭ ಮಾಡಿದ್ದು ಎಂಬ ಮಾಹಿತಿ ತಿಳಿದ ನಂತರ 50ನೇ ವರ್ಷದ ಆಚರಣೆ ಎಂದು ಮಾಡಿದ್ದೇವೆ. ಮಂಟೇಲಿಂಗಯ್ಯನವರು ಸಹ ಮಹಿಷನ ಮೂರ್ತಿಯ ಮುಂದೆ ಮಹಿಷ ದಸರಾ ಮಾಡಿರುವ ಇತಿಹಾಸ ಇದೆ. ನಾವು ಸುಳ್ಳಿಗೆ ಆದ್ಯತೆ ಕೊಡುವುದಿಲ್ಲ. ಅಂಬಾರಿ ಮೇಲೆ ಮೊದಲು ಯಾರು ಕುಳಿತುಕೊಳ್ಳುತ್ತಿದ್ದರು. ಅರಸು ಕಾಲದಲ್ಲಿ ಭುವನೇಶ್ವರಿ ಫೋಟೋವನ್ನು ಇಟ್ಟರು. ಇದನ್ನ ಯಾರು ಯಾಕೆ ಪ್ರಶ್ನೆ ಮಾಡಲಿಲ್ಲ? ಯದುವಂಶದ ದೇವರು ಚಾಮುಂಡಿ ತಾಯಿ. ಮಹಿಷಾ ದಸರಾ ಆಚರಣೆಗೆ 50 ವರ್ಷದ ಇತಿಹಾಸ ಇದೆ. ಪೊಲೀಸರು ಅನುಮತಿ ಕೊಡಲೇಬೇಕು. ಮೈಸೂರು ದಸರಾಗೆ ಯಾವುದೇ ಚುತಿ ತರುವುದಿಲ್ಲ. ನಾವು ಪೊಲೀಸರಿಗೆ ಸಹಕರ ಕೊಡುತ್ತೇವೆ. ಎಲ್ಲಾ ಧಾರ್ಮಿಕತೆ ಅವಕಾಶ ಇದೆ ಎಂದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌ಸಿ ಮಹದೇವಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಮಹಿಷಾ ದಸರಾ ಆಚರಣೆ ನಡೆಯುತ್ತದೆ ಎಂದು ತಿಳಿಸಿದರು.

    ನನ್ನ ಗಂಡ ಹೇಗಿರಬೇಕೆಂದರೆ… ; ಕನಸಿನ ರಾಜಕುಮಾರನ ಬಗ್ಗೆ ನಟಿ ಕೃತಿ ಸನನ್ ಮಾತು

    ಇನ್​ಸ್ಟಾಗ್ರಾಂನಲ್ಲಿ ಲವ್​ ಆದ 6 ದಿನಕ್ಕೆ ಮದುವೆ! ಒಂದೇ ತಿಂಗಳಲ್ಲಿ ಮಹಿಳೆಗೆ ಕೈಕೊಟ್ಟ ಪತಿ ಎಸ್ಕೇಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts