More

    ಕರೊನಾವನ್ನು ಸೋಲಿಸಿತು 980 ಗ್ರಾಂ ತೂಕದ ನವಜಾತ ಶಿಶು!

    ಬೆಂಗಳೂರು: ಕರೊನಾ ಸೋಂಕಿಗೆ ಒಳಗಾಗಿದ್ದ 980 ಗ್ರಾಂ ತೂಕದ ನವಜಾತ ಹೆಣ್ಣು ಶಿಶು ಯಶಸ್ವಿಯಾಗಿ ಚೇತರಿಸಿಕೊಂಡಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದೆ.

    ಕಳೆದ ಆಗಸ್ಟ್ 13ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಿನ ತುಂಬುವ ಮೊದಲೇ (ಅವಧಿಪೂರ್ವ) ಜನಿಸಿದ್ದ ಶಿಶುವಿನ ತೂಕ 980 ಗ್ರಾಂ (ಆರೋಗ್ಯಕರ ಶಿಶು ಜನನವಾದಾಗ ಅದರ ತೂಕ 2.8 ರಿಂದ 2.9 ಕೆ.ಜಿ. ಇರಬೇಕು) ಇತ್ತು. ಹೀಗಾಗಿ ಶಿಶುವನ್ನು ಹೆಚ್ಚಿನ ಆರೈಕೆಗಾಗಿ ಅದೇ ದಿನ ವಾಣಿವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಯ ಎನ್‌ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಶುವಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ನಂತರ ಶಿಶುವನ್ನು ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ಅಭಿಮಾನಿಗಳ ಹಾರೈಕೆಗೆ ಸಿಕ್ಕಿತು ಫಲ: ಎಸ್​ಪಿಬಿ ಚೇತರಿಕೆ- ಮಗನಿಂದ ಮಾಹಿತಿ

    ಅವಧಿ ಪೂರ್ವ ಜನನ, ಕಡಿಮೆ ತೂಕ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳ ಜತೆಗೆ ಕೋವಿಡ್ ಸೋಂಕು ಹೊಂದಿದ್ದರಿಂದ ಚಿಕಿತ್ಸೆ ನೀಡುವುದು ಸವಾಲಾಗಿತ್ತು. ಅದೃಷ್ಟವಶಾತ್ ಸೋಂಕು ಲಕ್ಷಣಗಳು ಇರಲಿಲ್ಲ (ಎ-ಸಿಮ್ಟಮ್ಯಾಟಿಕ್). ಹೀಗಾಗಿ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಾಯಿತು ಎಂದು ವಾಣಿವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಕೆ. ಮಲ್ಲೇಶ್ ತಿಳಿಸಿದ್ದಾರೆ.

    ತಾಯಿಗೆ ಸೋಂಕು ಇರಲಿಲ್ಲ, ಹೀಗಾಗಿ ಮಗುವಿಗೂ ಸೋಂಕು ತಗುಲಲು ಸಾಧ್ಯವಿಲ್ಲ. ಆದರೆ ಜನಿಸಿದ ಸಂದರ್ಭದಲ್ಲಿ ಅಥವಾ ಆಸ್ಪತ್ರೆಯಿಂದ ಸ್ಥಳಾಂತರಿಸುವ ವೇಳೆ ಸೋಂಕು ತಗುಲಿರಬಹುದು. ಚಿಕಿತ್ಸೆಯಿಂದಾಗಿ ಮಗು ಸಂಪೂರ್ಣ ಚೇತರಿಸಿಕೊಂಡಿದ್ದು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಗೃಹ ಸಚಿವ ಬಸವರಾಜ್​ ಬೊಮ್ಮಾಯಿಗೆ ಕರೊನಾ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts