More

    ಭರವಸೆ ಕಳೆದುಕೊಳ್ಳಬೇಡಿ, ಧೈರ್ಯವಾಗಿರಿ : ‘ಆರ್ಮಿ’ಗೆ ಬಿಟಿಎಸ್​​ ಸಂದೇಶ !

    ನವದೆಹಲಿ : “ಲೆಟ್ಸ್​​ ನೆವರ್ ಲೂಸ್​ ಹೋಪ್”, “ಸ್ಟೇ ಸ್ಟ್ರಾಂಗ್​” – ಎಂಬುದು ದಕ್ಷಿಣ ಕೊರಿಯಾದ ಪ್ರಖ್ಯಾತ ಮ್ಯೂಸಿಕ್ ಬ್ಯಾಂಡ್​ ‘ಬಿಟಿಎಸ್’​, ಭಾರತದಲ್ಲಿರುವ ತನ್ನ ‘ಆರ್ಮಿ’ಗೆ ಕೊಟ್ಟಿರುವ ಸಂದೇಶ. ಕರೊನಾ ಸನ್ನಿವೇಶದಲ್ಲಿ ತಮ್ಮ ಭಾರತೀಯ ಅಭಿಮಾನಿಗಳಿಗೆ ಸಂದೇಶವೇನು ಎಂಬ ಪ್ರಶ್ನೆಗೆ ಬಿಟಿಎಸ್​​ ತಂಡದ ಸದಸ್ಯ ವಿ, “ನಮ್ಮ ಪ್ರಾರ್ಥನೆ ಭಾರತದೊಂದಿಗಿದೆ. ಧೈರ್ಯವಾಗಿರಿ ಆರ್ಮಿ. ನಾವು ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬಾರದು” ಎಂದು ಪ್ರತಿಕ್ರಿಯಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

    ಜಗತ್ತಿನ ವಿವಿಧೆಡೆ ಮಕ್ಕಳು ಮತ್ತು ಯುವಜನರನ್ನೇ ಹೆಚ್ಚಾಗಿ ತಮ್ಮ ಅಭಿಮಾನಿಗಳಾಗಿ ಹೊಂದಿರುವ ಈ ಸಂಗೀತ ತಂಡ, ಇತ್ತೀಚೆಗಷ್ಟೆ ತಮ್ಮ ಎರಡನೇ ಆಂಗ್ಲಭಾಷೆಯ ಹಾಡು ‘ಬಟರ್​’ಅನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಭಾರೀ ಫ್ಯಾನ್​ ಫಾಲೋಯಿಂಗ್ ಇರುವ ಈ ಏಳು ಯುವ ಸಂಗೀತಗಾರರ ತಂಡ, ಇನ್ನೂ ಭಾರತದ ಟೂರ್​ ಮಾಡುವುದು ಬಾಕಿ ಇದೆ.

    ಇದನ್ನೂ ಓದಿ: ಗಾಯಕಿ ಶ್ರೇಯ ಘೋಶಲ್ ಈಗ ಗಂಡು ಮಗುವಿನ ತಾಯಿ

    ಬ್ಯಾಂಗ್​ಟನ್ ಸಾನ್ಯೋನ್​ಡಾನ್ (ಬುಲೆಟ್​ಪ್ರೂಫ್​ ಬಾಯ್ ಸ್ಕೌಟ್ಸ್​) ಎಂಬ ಕೊರಿಯನ್ ನಾಮಧೇಯ ಮತ್ತು ಬಿಯಾಂಡ್ ದ ಸೀನ್​ ಎಂಬ ಇಂಗ್ಲೀಷ್​ ಬ್ರ್ಯಾಂಡಿಂಗ್​ ಹೊಂದಿರುವ ಈ ತಂಡದ ಸದಸ್ಯರೆಂದರೆ ಆರ್​ಎಂ, ಜಿನ್, ಶುಗಾ, ಜೆ-ಹೋಪ್​, ಜಿಮಿನ್, ವಿ ಮತ್ತು ಜಂಗ್​ಕೂಕ್. ತಮ್ಮ ಅಭಿಮಾನಿಗಳನ್ನು ‘ಆರ್ಮಿ’ ಎಂಬ ವಿಶಿಷ್ಟ ಹೆಸರಿನಿಂದ ಕರೆಯುತ್ತದೆ, ಈ ತಂಡ.

    ಕೊರಿಯನ್​ ಭಾಷೆಯಲ್ಲೇ ಹೆಚ್ಚು ಆಲ್ಬಮ್​ಗಳನ್ನು ಮಾಡಿರುವ ಈ ತಂಡ ತಮ್ಮ ಚೊಚ್ಚಲ ಇಂಗ್ಲೀಷ್​ ಗೀತೆ ಡೈನಮೈಟ್​ಅನ್ನು 2020 ರಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಎರಡನೆಯ ಡಿಸ್ಕೊ-ಪಾಪ್ ಇಂಗ್ಲೀಷ್​ ಗೀತೆಯಾಗಿ ಬಟರ್​ ಎಂಬ ಸಿಂಗಲ್​ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಬಿಡುಗಡೆಯಾದ 24 ಗಂಟೆಗಳಲ್ಲೇ ಈ ಗೀತೆಗೆ ಯೂಟ್ಯೂಬ್​ನಲ್ಲಿ 113 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳು ಲಭಿಸಿವೆ. (ಏಜೆನ್ಸೀಸ್)

    ಹೇರಳವಾಗಿ ಲಭ್ಯವಾಗಲಿದೆ ಸ್ಪುಟ್ನಿಕ್ ವಿ ಲಸಿಕೆ; ಆಗಸ್ಟ್​​ನಿಂದ ಭಾರತದಲ್ಲೇ ಉತ್ಪಾದನೆ ಶುರು

    ವಿದ್ಯುತ್ ಪೂರೈಕೆಯಿಲ್ಲದೆ ಆಕ್ಸಿಜನ್​ ಸ್ಥಗಿತ : ಕರೊನಾ ರೋಗಿ ಸಾವು

    ‘ಅಮ್ಮ ಬಿಟ್ಟು ಹೋದರು… ಅವರ ನೆನಪುಗಳನ್ನು ಉಳಿಸಿಕೊಡಿ’; ಬಾಲಕಿಯ ಈ ಮನವಿ ಕರುಳುಹಿಂಡುವಂಥದ್ದು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts