More

    ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಅಳೆಯಲಿದೆ ನೆಟ್​ವರ್ಕ್​ ಸರ್ವೇ ವಾಹನ; ತಂತ್ರಜ್ಞಾನ ಆಧಾರಿತ ಸರ್ವೇಗೆ ಎನ್‌ಎಚ್‌ಎಐ ಕ್ರಮ

    ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಅಳೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಅದಕ್ಕಾಗಿ ನೆಟ್​ವರ್ಕ್​ ಸರ್ವೇ ವಾಹನ (ಎನ್‌ಎಸ್‌ವಿ) ನಿಯೋಜಿಸಲು ನಿರ್ಧರಿಸಲಾಗಿದೆ. ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮತ್ತು ನಿರ್ವಹಣೆ ಕಾರ್ಯ ಭರದಿಂದ ಸಾಗಿದೆ. ಈ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಮಾಡಲು ಎನ್‌ಎಚ್‌ಎಐ ಹಲವು ಕ್ರಮ ಕೈಗೊಳ್ಳುತ್ತಿದೆ. ಗುಣಮಟ್ಟ ಪರಿಶೀಲನೆಗಾಗಿ ತಜ್ಞರ ತಂಡ ನೇಮಕ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದು ಮುಂತಾದ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.

    ಅದರ ಜತೆಗೆ ಇದೀಗ ನೆಟ್​ವರ್ಕ್ ಸರ್ವೇ ವಾಹನದ ಮೂಲಕ ಗುಣಮಟ್ಟ ಸರ್ವೇ ನಡೆಸುವ ಕುರಿತು ನಿರ್ಧರಿಸಲಾಗಿದೆ. ಅದಕ್ಕಾಗಿ ಪ್ರಮುಖ ಯೋಜನೆಗಳಿಗೆ ಎನ್‌ಎಸ್‌ವಿಗಳನ್ನು ನಿಯೋಜಿಸಲಾಗುತ್ತಿದೆ. ಈ ವಾಹನವು ಪ್ರತಿ ಕಾಮಗಾರಿ ಮುಗಿದ ಕೂಡಲೆ ಹಾಗೂ ಅದಾದ 6 ತಿಂಗಳಲ್ಲಿ ಒಮ್ಮೆ ಸರ್ವೇ ನಡೆಸಿ ವರದಿ ಸಿದ್ಧಪಡಿಸಲಿದೆ. ಅದರ ಆಧಾರದಲ್ಲಿ ಎನ್‌ಎಚ್‌ಎಐ ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿ ಮಾಡಲಿದೆ.

    ಇದನ್ನೂ ಓದಿ: ಮೈಮೇಲೇ ಲಾರಿ ಚಲಿಸಿ 3 ವರ್ಷದ ಮಗು ಸ್ಥಳದಲ್ಲೇ ಸಾವು; ಪುತ್ರಿಯೊಂದಿಗೆ ದಂಪತಿ ಸಾಗುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ

    ಹಲವು ವ್ಯವಸ್ಥೆಯ ಎನ್‌ಎಸ್‌ವಿ: ಎನ್‌ಎಸ್‌ವಿ ಹಲವು ವ್ಯವಸ್ಥೆಗಳನ್ನು ಹೊಂದಿದೆ. ಪ್ರಮುಖವಾಗಿ 3600 ಇಮೆಜನರಿ ಸಾಮರ್ಥ್ಯದ ಡಿಜಿಟಲ್ ಕ್ಯಾಮರಾ, ಛಾಯಾಚಿತ್ರ ಮತ್ತು ವಿಡಿಯೋ ಮಾಡುವುದು, ಲೇಸರ್ ರಸ್ತೆ ಪ್ರೊಫೈಲೋಮಿಟರ್ ಸೇರಿ ಇನ್ನಿತರ ವ್ಯವಸ್ಥೆಗಳಿರಲಿವೆ. ಈ ಉಪಕರಣಗಳ ಮೂಲಕ ರಸ್ತೆಯ ಮೇಲಿನ ಡಾಂಬಾರು ಸೇರಿ ಇನ್ನಿತರ ವಸ್ತುಗಳನ್ನು ಅಳತೆ ಮಾಡಬಹುದು. ಜತೆಗೆ ರಸ್ತೆಯ ಪರಿಸ್ಥಿತಿಯನ್ನು ಅಳತೆ, ರಸ್ತೆ ಬಿರುಕು ಬಿಟ್ಟಿರುವುದು, ಗುಂಡಿ ಬಿದ್ದಿರುವುದು ಹೀಗೆ ಹಲವು ರೀತಿಯಲ್ಲಿ ವರದಿ ಸಿದ್ಧಪಡಿಸಲಿದೆ.
    ಅದಾದ ನಂತರ ಎನ್‌ಎಚ್‌ಎಐನ ಅಧಿಕಾರಿಗಳು ಬಳಸುವ ವೆಬ್‌ಪೋರ್ಟಲ್‌ಗೆ ಆ ವರದಿ-ಡಾಟಾ ಅಪ್‌ಲೋಡ್ ಮಾಡಲಾಗುತ್ತದೆ. ಅದನ್ನು ರಸ್ತೆ ಆಸ್ತಿ ನಿರ್ವಹಣಾ ಕೋಶ (ರಾಮ್ಸ್ ಕೋಶ)ದ ಸಿಬ್ಬಂದಿ ವರದಿ ಪರಿಶೀಲಿಸಿ, ಗುಣಮಟ್ಟವನ್ನು ನಿರ್ಧರಿಸಲಿದ್ದಾರೆ ಹಾಗೂ ಮುಂದಿನ ಕ್ರಮಕ್ಕೆ ಸಂಬಂಧಪಟ್ಟವರಿಗೆ ಸೂಚಿಸಲಿದ್ದಾರೆ.

    ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದ ಯುವತಿ; ಇಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು!

    ಇದು ನನ್ನದು… ನೀನೂ ಬಟ್ಟೆ ಬಿಚ್ಚಿ ತೋರಿಸು ಎಂದು ಯುವಕರಿಗೆ ಗಾಳ ಹಾಕಿ ಬ್ಲ್ಯಾಕ್​ಮೇಲ್​ ಮಾಡ್ತಿದ್ದವರು ಅಂದರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts