More

    ಕಬ್ಬಿಣದ ಕಡಲೆಯಾದ ಆನ್​ಲೈನ್ ಶಿಕ್ಷಣ

    ಕಳಸ: ಕರೊನಾದಿಂದ ಸರ್ಕಾರ ಶಾಲಾ ಮಕ್ಕಳಿಗೆ ಆನ್​ಲೈನ್ ಶಿಕ್ಷಣ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದು, ಅದು ಕಾರ್ಯರೂಪಕ್ಕೆ ಬಂದರೆ ಕಳಸ ಭಾಗದ ಮಕ್ಕಳನ್ನು ದೇವರೇ ಕಾಪಾಡಬೇಕು.

    ಒಂದೆಡೆ ಜಗತ್ತು 5ಜಿ ಕಡೆ ಮುನ್ನುಗ್ಗುತ್ತಿದೆ. ಆದರೆ ಕಳಸ ಹೋಬಳಿಯಲ್ಲಿ ಮಾತ್ರ ಆನ್​ಲೈನ್ ಇರಲಿ ಒಂದು ಫೋನ್ ಕಾಲ್​ಗಾಗಿ ನೆಟ್​ವರ್ಕ್ ಹುಡುಕುವ ಸ್ಥಿತಿ ನಿರ್ವಣವಾಗಿದೆ. ಸಂಸೆ ಗ್ರಾಪಂ ವ್ಯಾಪ್ತಿಯ ಬಾಳ್​ಗಲ್, ಬಿಳಗಲ್, ಜಾಂಬ್ಲೆ, ನೆಲ್ಲಿಬೀಡು, ಕತ್ತಡ್ಕ, ಕೋನೆಮನೆ, ಕೆಂಗನಕೊಂಡ, ಬಸ್ರಿಕಲ್, ಕುಚಗೇರಿ, ಕುದುರೆಮುಖ, ವಿನೋಬನಗರ, ಜೋಗಿಕುಂಬ್ರಿ, ಎಸ್.ಕೆ.ಮೇಗಲ್, ಕಾರ್ಲೆ, ಕಲ್ಕೋಡು ಹಾಗೂ ಕಳಸ ಗ್ರಾಪಂ ವ್ಯಾಪ್ತಿಯ ಬಲಿಗೆ, ಕ್ಯಾತನಮಕ್ಕಿ, ಚಿಕ್ಕನಕುಡಿಗೆ ಗ್ರಾಮಗಳ ಸುಮಾರು 350ಕ್ಕೂ ಹೆಚ್ಚು ಕುಟುಂಬಗಳಿಗೆ ನೆಟ್​ವರ್ಕ್​ನದ್ದೇ ಸಮಸ್ಯೆಯಾಗಿದೆ.

    ಸಂಸೆ, ಕುದುರೆಮುಖ ಮತ್ತು ಹೊರನಾಡಿನಲ್ಲಿ ಬಿಎಸ್​ಎನ್​ಎಲ್ ಟವರ್​ಗಳನ್ನು ನಿರ್ವಿುಸಲಾಗಿದೆ. ಆದರೆ ಗ್ರಾಮಾಂತರ ಪ್ರದೇಶವಾಗಿರುವುದರಿಂದ ವಿದ್ಯುತ್ ವ್ಯತ್ಯಯ ಸಾಮಾನ್ಯ. ಕರೆಂಟ್ ಇದ್ದಾಗ ಮಾತ್ರ ಟವರ್ ಕಾರ್ಯನಿರ್ವಹಿಸುತ್ತದೆ. ಜನರೇಟರ್ ಇದ್ದರೂ ಡೀಸೆಲ್ ಪೂರೈಕೆ ಇಲ್ಲದಿರುವುದು ಸಮಸ್ಯೆಯಾಗಿದೆ.

    ಕರೊನಾದಿಂದ ಪ್ರಸಕ್ತ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಆನ್​ಲೈನ್ ಶಿಕ್ಷಣ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿರುವುದು ಈ ಭಾಗದ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿದೆ. ಈ ಭಾಗದಲ್ಲಿ 200ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೆಟ್​ವರ್ಕ್ ಸಮಸ್ಯೆಯಿಂದ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts