More

    VIDEO: ಸತತ ನಾಲ್ಕು ವಿಕೆಟ್ ಕಬಳಿಸಿ ದಾಖಲೆ ಬರೆದ ಐರ್ಲೆಂಡ್ ವೇಗಿ ಕರ್ಟಿಸ್ ಕ್ಯಾಂಪರ್

    ಅಬುಧಾಬಿ: ಸತತ ನಾಲ್ಕು ಎಸೆತಗಳಲ್ಲಿ ವಿಕೆಟ್ ಕಬಳಿಸಿದ ಕರ್ಟಿಸ್ ಕ್ಯಾಂಪರ್ (26ಕ್ಕೆ 4) ಹಾಗೂ ಮಾರ್ಕ್ ರಿಚರ್ಡ್ ಅಡೈರ್ (9ಕ್ಕೆ 3) ಮಾರಕ ದಾಳಿ ನೆರವಿನಿಂದ ಐರ್ಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಮಧ್ಯಮ ವೇಗದ ಬೌಲರ್ ಕರ್ಟಿಸ್ ಕ್ಯಾಂಪರ್, ಟಿ20 ಕ್ರಿಕೆಟ್‌ನಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ ವಿಶ್ವದ 3ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮೊದಲು ಶ್ರೀಲಂಕಾದ ಲಸಿತ್ ಮಾಲಿಂಗ, ಅಫ್ಘಾನಿಸ್ತಾನದ ರಶೀದ್ ಖಾನ್ ಈ ಸಾಧನೆ ಮಾಡಿದ್ದರು. ಆಸ್ಟ್ರೇಲಿಯಾದ ಬ್ರೆಟ್ ಲೀ ಬಳಿಕ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ 2ನೇ ಬೌಲರ್ ಕ್ಯಾಂಪರ್. ದಕ್ಷಿಣ ಆಫ್ರಿಕಾ ಮೂಲದ ಕ್ಯಾಂಪರ್, ಐರ್ಲೆಂಡ್ ಪರ 10 ಏಕದಿನ, 5 ಟಿ20 ಪಂದ್ಯಗಳನ್ನಾಡಿದ್ದಾರೆ.

    ಜಯೇದ್ ಶೇಖ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಎ ಗುಂಪಿನ ಹಣಾಹಣಿಯ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ ತಂಡ 20 ಓವರ್‌ಗಳಲ್ಲಿ 106 ರನ್‌ಗಳಿಗೆ ಸರ್ವಪತನ ಕಂಡಿತು. ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಕ್ಯಾಂಪರ್ ಸತತ 4 ವಿಕೆಟ್ ಕಬಳಿಸಿ ನೆದರ್ಲೆಂಡ್ಸ್ ಕುಸಿತದಲ್ಲಿ ಪ್ರಮುಖ ಪಾತ್ರವಹಿಸಿದರು. ಬಳಿಕ ಈ ಅಲ್ಪಮೊತ್ತ ಬೆನ್ನಟ್ಟಿದ ಐರ್ಲೆಂಡ್, ಗ್ಯಾರೆತ್ ಡೆಲ್ಯಾನಿ (44ರನ್, 29 ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಲವಾಗಿ 15.1 ಓವರ್‌ಗಳಲ್ಲಿ 3 ವಿಕೆಟ್‌ಗೆ 107 ರನ್‌ಗಳಿಸಿ ಜಯದ ನಗೆ ಬೀರಿತು.

    ನೆದರ್ಲೆಂಡ್ಸ್: 20 ಓವರ್‌ಗಳಲ್ಲಿ 106 (ಮ್ಯಾಕ್ಸ್‌ವೆಲ್ ಪ್ಯಾಟ್ರಿಕ್ 51, ಪೀಟರ್ ಸೀಲಾರ್ 21, ಕರ್ಟಿಸ್ ಕ್ಯಾಂಪರ್ 26ಕ್ಕೆ 4, ಮಾರ್ಕ್ ಅಡೈರ್ 9ಕ್ಕೆ 3), ಐರ್ಲೆಂಡ್: 15.1 ಓವರ್‌ಗಳಲ್ಲಿ 3 ವಿಕೆಟ್‌ಗೆ 107 (ಪೌಲ್ 30*, ಗ್ಯಾರೆತ್ ಡೆಲ್ಯಾನಿ 44, ್ರೆಡ್ ಕ್ಲಾಸೆನ್ 18ಕ್ಕೆ 1, ಬ್ರ್ಯಾಂಡೊನ್ ಗ್ಲೋವೆರ್ 21ಕ್ಕೆ 1, ಪೀಟರ್ ಸೀಲಾರ್ 14ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts