More

    ಸಬ್​ಸ್ಕ್ರೈಬರ್ಸ್​​ ಸಂಖ್ಯೆ ಕೆಳಕ್ಕೆ ಬಿತ್ತು, ನೆಟ್​ಫ್ಲಿಕ್ಸ್​ನ 150 ಮಂದಿ ಕೆಲಸಕ್ಕೇ ಕುತ್ತು!

    ನವದೆಹಲಿ: ನೆಟ್​ಫ್ಲಿಕ್ಸ್​ನಂಥ ದೈತ್ಯ ಕಂಪನಿಯ ಚಂದಾದಾರರ ಸಂಖ್ಯೆಯಲ್ಲಿ ಭಾರಿ ಕುಸಿತ ಉಂಟಾಗಿದ್ದು, ಪರಿಣಾಮವಾಗಿ ಸಂಸ್ಥೆಯ ನೂರಾರು ಮಂದಿ ಕೆಲಸ ಕಳೆದುಕೊಳ್ಳುವಂತಾಗಿದೆ. ಇದನ್ನು ನೆಟ್​​ಫ್ಲಿಕ್ಸ್​ ಸಂಸ್ಥೆಯೇ ಹೇಳಿಕೊಂಡಿದ್ದು, ಅದರ ಉದ್ಯೋಗಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ಕಳೆದ ತಿಂಗಳಿನಲ್ಲಿ ಅಚ್ಚರಿ ಎಂಬ ರೀತಿಯಲ್ಲಿ ಸಬ್​ಸ್ಕ್ರೈಬರ್​ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದರಿಂದ 150 ಉದ್ಯೋಗಿಗಳ ಕೆಲಸಕ್ಕೆ ಕುತ್ತುಂಟಾಗಿದೆ. ನಮ್ಮ ಆದಾಯ ಕುಂಟುತ್ತ ಸಾಗಿರುವುದರಿಂದ ಕಂಪನಿಯ ಬೆಳವಣಿಗೆಯಲ್ಲೂ ಕುಂಠಿತ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ 150 ಉದ್ಯೋಗಿಗಳನ್ನು ತೆಗೆಯುವುದು ಅನಿವಾರ್ಯವಾಗಿದೆ. ಆ ಪೈಕಿ ಬಹುಶಃ ಹೆಚ್ಚಿನವರು ಅಮೆರಿಕದವರು ಎಂದು ಸಂಸ್ಥೆ ಹೇಳಿಕೊಂಡಿದೆ.

    ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 2 ಲಕ್ಷ ಮಂದಿ ಸಬ್​ಸ್ಕ್ರೈಬರ್​ಗಳನ್ನು ಕಳೆದುಕೊಂಡಿರುವುದು ಕಳೆದ ತಿಂಗಳಲ್ಲಿ ತಿಳಿದುಬಂದಿದೆ. ಅಲ್ಲದೆ ಮುಂದೆ 20 ಲಕ್ಷ ಸಬ್​ಸ್ಕ್ರೈಬರ್​ಗಳನ್ನು ಕಳೆದುಕೊಳ್ಳುವ ಅಂದಾಜಿರುವುದರಿಂದ ಈ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಕಾಡುದಾರಿ, ಹೆರಿಗೆ ಬೇನೆ; ಆ್ಯಂಬುಲೆನ್ಸ್​ಗೇ ಅಡ್ಡ ಬಂದ ಆನೆ!; ಆಪರೇಷನ್​ ಗಜ-ಪ್ರಸವ

    ಗಡ್ಡ-ಮೀಸೆ ಬಗ್ಗೆ ತಮಾಷೆ ಮಾಡಿ ಇಕ್ಕಟ್ಟಿಗೆ ಸಿಲುಕಿದ ಮಹಿಳೆ; ಕೇಸ್​ ಬಿತ್ತು, ಕ್ಷಮೆ ಕೂಡ ಕೇಳಿದ್ಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts