More

    ಕೆ.ಪಿ. ಓಲಿಗೆ ಸಂಕಷ್ಟ, ಹೊಸ ಗಡಿಠಾಣೆ ಬಿಟ್ಟು ಓಡಿದರಾ ನೇಪಾಳ ಯೋಧರು

    ಪಿತ್ತೋರ್​ಗಢ/ದೆಹ್ರಾಡೂನ್​: ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಅವರ ಗಾದಿ ಅಲ್ಲಾಡತ್ತಿರುವಂತೆ, ಭಾರತ-ನೇಪಾಳ ಗಡಿಯಲ್ಲಿ ಅವರ ಆಣತಿಯಂತೆ ಹೊಸದಾಗಿ ನಿರ್ಮಿಸಲಾಗಿದ್ದ ಗಡಿಠಾಣೆಗಳನ್ನು ಬಿಟ್ಟು ನೇಪಾಳ ಸಶಸ್ತ್ರ ಪ್ರಹಾರಿ (ಎನ್​ಎಸ್​ಪಿ) ಅಥವಾ ನೇಪಾಳ ಸಶಸ್ತ್ರ ಪೊಲೀಸರು ಓಡಿ ಹೋಗಿದ್ದಾರೆ.
    ಕಳೆದ ಕೆಲವು ದಿನಗಳಿಂದ ಎನ್​ಎಸ್​ಪಿ ಯೋಧರು ಹೊಸದಾಗಿ ಸ್ಥಾಪಿಸಿರುವ ಗಡಿಠಾಣೆಯತ್ತ ಸುಳಿದಿಲ್ಲ ಎಂದು ಉತ್ತರಾಖಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕೆ.ಪಿ. ಓಲಿ ಅವರ ಭಾರತ ವಿರೋಧಿ ನಿಲುವನ್ನು ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ (ಎನ್​ಸಿಪಿ) ಸದಸ್ಯರೇ ಖಂಡಿಸುತ್ತಿದ್ದಾರೆ. ಅವರ ವಿರುದ್ಧ ಬಂಡಾಯ ಎದ್ದಿದ್ದು, ಅವರ ರಾಜೀನಾಮೆಗಾಗಿ ಒತ್ತಾಯಿಸುತ್ತಿದ್ದಾರೆ. ಶತಾಯಗತಾಯ ತಮ್ಮ ಅಧಿಕಾರ ಉಳಿಸಿಕೊಳ್ಳಲು ಪಕ್ಷವನ್ನೇ ಒಡೆಯುವ ಪ್ರಯತ್ನಗಳನ್ನು ಜಾರಿಯಲ್ಲಿಟ್ಟಿದ್ದರೂ, ಆ ತಂತ್ರಗಾರಿಕೆ ಫಲಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಸೋಮವಾರ ನಿಗದಿಯಾಗಿದ್ದ ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ ಸ್ಥಾಯಿ ಸಮಿತಿಯ ಸಭೆ ಕೂಡ ಬುಧವಾರಕ್ಕೆ ಮುಂದೂಡಿಕೆಯಾಗಿದೆ.

    ಕೆ.ಪಿ. ಶರ್ಮ ಓಲಿ ಒತ್ತಾಸೆಯ ಮೇರೆಗೆ ಭಾರತೀಯ ಭೂಮಿಯನ್ನು ಸೇರಿಸಿಕೊಂಡು ಎನ್​ಎಸ್​ಪಿ ಯೋಧರು ಹೊಸದಾಗಿ ಆರು ಗಡಿಠಾಣೆಗಳನ್ನು ನಿರ್ಮಿಸಿದ್ದರು. ಲಿಪುಲೇಖ್​ ಪಾಸ್​ನಿಂದ ಪಿತ್ತೋರ್​ಗಢ ಜಿಲ್ಲೆಯ ಧಾರ್​ಚುಲಾ ಪಟ್ಟಣಕ್ಕೆ ಸಂಪರ್ಕಿಸುವ ಹೆದ್ದಾರಿಯನ್ನು ಭಾರತ ಉದ್ಘಾಟಿಸಿದ ನಂತರದಲ್ಲಿ ಈ ಬೆಳವಣಿಗೆ ಕಂಡುಬಂದಿತ್ತು.

    ಇದನ್ನೂ ಓದಿ: ಸಿಲಿಂಡರ್‌ ಬಂದಿಲ್ಲ ಎಂದರೆ ಮಹಿಳೆಯನ್ನೇ ನಿಂದಿಸಿದ ಗ್ಯಾಸ್‌ ಕಂಪನಿಗೆ ಬಿತ್ತು ದಂಡ!

    ಆದರೆ ಅವುಗಳ ಪೈಕಿ ಎರಡು ಗಡಿಠಾಣೆಗಳನ್ನು ಎನ್​ಎಸ್​ಪಿ ಯೋಧರು ಎರಡು ದಿನಗಳ ಹಿಂದೆ ತೆರವುಗೊಳಿಸಿದ್ದಾರೆ. ಧಾರ್​ಚುಲಾದ ಉಪವಿಭಾಗಾಧಿಕಾರಿ ಅನಿಲ್​ ಕುಮಾರ್​ ಶುಕ್ಲಾ ಇದನ್ನು ಖಚಿತಪಡಿಸಿದ್ದಾರೆ.

    ನೇಪಾಳದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಇದನ್ನು ಗಮನಿಸಿ, ಪ್ರಶ್ನಿಸಿದೆವು. ಅದಕ್ಕೆ ಅವರು ತಮ್ಮ ಉನ್ನತ ಅಧಿಕಾರಿಗಳ ಸೂಚನೆ ಮೇರೆಗೆ ದಾರ್​ಚುಲಾ ಜಿಲ್ಲೆಯ ಸಮೀಪದ ಉಕ್ಕು ಮತ್ತು ಬಾಕ್ರಾ ಪ್ರದೇಶಗಳ ಎರಡು ಗಡಿಠಾಣೆಗಳನ್ನು ತೆರವುಗೊಳಿಸಿರುವುದಾಗಿ ಹೇಳಿದರು. ಹೊಸದಾಗಿ ಸ್ಥಾಪಿಸಿದ್ದ ಇನ್ನೂ ಮೂರು ಗಡಿಠಾಣೆಗಳನ್ನು ಅವರು ತೆರವುಗೊಳಿಸುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ.

    ತೀರಾ ಕಡಿದಾದ ಪ್ರದೇಶದಲ್ಲಿ ಗಡಿಠಾಣೆಗಳನ್ನು ನಿರ್ಮಿಸುವುದು ಸುಲಭ. ಆದರೆ ಅವುಗಳ ನಿರ್ವಹಣೆ ಸುಲಭದ ಮಾತಲ್ಲ. ಅಲ್ಲದೆ, ಅವುಗಳ ಸ್ಥಾಪನೆಯಿಂದ ಅವರ ಉದ್ದೇಶವನ್ನು ಈಡೇರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಅವರು ಗಡಿಠಾಣೆಗಳನ್ನು ತೆರವುಗೊಳಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಕರೊನಾಗೆ ವಿಧಾನಸೌಧ ಭದ್ರತಾ ವಿಭಾಗದ ಎಎಸ್​ಐ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts