More

    ಸಿಲಿಂಡರ್‌ ಬಂದಿಲ್ಲ ಎಂದರೆ ಮಹಿಳೆಯನ್ನೇ ನಿಂದಿಸಿದ ಗ್ಯಾಸ್‌ ಕಂಪನಿಗೆ ಬಿತ್ತು ದಂಡ!

    ಬೆಂಗಳೂರು: ಸಿಲಿಂಡರ್‌ಗೆ ಬುಕ್‌ ಮಾಡಿದ ನಂತರ ನಿಗದಿತ ವೇಳೆಯಲ್ಲಿ ಸಿಲಿಂಡರ್‌ ಬಾರದೇ ಹೋಗುವುದು ಹೊಸ ವಿಷಯವೇನಲ್ಲ. ಆದರೆ ಆ ಬಗ್ಗೆ ಕಂಪನಿಯಲ್ಲಿ ವಿಚಾರಿಸಿದಾಗ ಸಾವಧಾನವಾಗಿ ಉತ್ತರಿಸುವುದನ್ನು ಬಿಟ್ಟು ಮನೆಗೆ ಬೀಗ ಹಾಕಲಾಗಿತ್ತು ಎಂದು ಸುಳ್ಳು ಹೇಳಿಯೋ ಅಥವಾ ಬಾಯಿಗೆ ಬಂದಂತೆ ಸಿಬ್ಬಂದಿ ಮಾತನಾಡುವ ಘಟನೆಗಳು ಅನೇಕರ ಅನುಭವಕ್ಕೆ ಬಂದೇ ಇರುತ್ತದೆ.

    ಆದರೆ ಇಲ್ಲೊಬ್ಬ ಮಹಿಳೆ ಅಷ್ಟಕ್ಕೆ ಸುಮ್ಮನಾಗದೇ ಗ್ಯಾಸ್‌ ಕಂಪನಿ ವಿರುದ್ಧ ಗ್ರಾಹಕರ ಕೋರ್ಟ್‌ ಹೋಗಿದ್ದಾರೆ. ಬರೋಬ್ಬರಿ ಒಂಬತ್ತು ವರ್ಷಗಳ ನಂತರ ಕೋರ್ಟ್‌ನಿಂದ ಆದೇಶ ಹೊರಬಂದಿದ್ದು, ಕಂಪೆನಿಗೆ ಏಳು ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಈ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಮಹಿಳೆಗೆ ನೀಡುವಂತೆ ಗ್ರಾಹಕರ ಕೋರ್ಟ್‌ ಆದೇಶಿಸಿದೆ.

    ಅಷ್ಟಕ್ಕೂ ಆಗಿದ್ದೇನೆಂದರೆ, ಆಂಧ್ರಪ್ರದೇಶದ ಕಡಪಾ ಮೂಲದ ಸುಮನಾ ಬಿ ಅವರು ಜನವರಿ 30, 2001ರಂದು ಬೆಂಗಳೂರಿಗೆ ಆಗಮಿಸಿದ್ದು, ಎಚ್‌.ಪಿ. ಗ್ಯಾಸ್‌ಗೆ ಕರೆ ಮಾಡಿ ಸಿಲಿಂಡರ್‌ ಬುಕ್‌ ಮಾಡಿದ್ದಾರೆ. ಆದರೆ ಮೊದಲ ಸಿಲಿಂಡರ್‌ ಖಾಲಿಯಾಗುತ್ತ ಬಂದರೂ ಎರಡನೆಯ ಸಿಲಿಂಡರ್‌ ಬರಲೇ ಇಲ್ಲ. ಎಷ್ಟು ಫೋನ್‌ ಮಾಡಿ ಕೇಳಿದರೂ ಸಿಬ್ಬಂದಿಯಿಂದ ಸರಿಯಾದ ಉತ್ತರ ಬರಲಿಲ್ಲ.

    ಇದನ್ನೂ ಓದಿ: ವಿಡಿಯೋ: ದಂಪತಿಯೇ ಸೃಷ್ಟಿಸಿದರೊಂದು ಅಪರೂಪದ ಅಭಯಾರಣ್ಯ

    ನಂತರ ಅವರು, ಪುನಃ ಪುನಃ ಕರೆ ಮಾಡಿದಾಗ ಸಿಬ್ಬಂದಿ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಸಿಟ್ಟುಕೊಂಡ ಸುಮನಾ ಅವರ ಪತಿ ಕಂಪನಿ ವಿರುದ್ಧ ಗ್ರಾಹಕರ ಕೋರ್ಟ್‌ ಮೊರೆ ಹೋಗಿದ್ದರು.

    ಕೋರ್ಟ್‌ಗೆ ಅರ್ಜಿ ಹೋಗುತ್ತಿದ್ದಂತೆಯೇ ಇತ್ತ ಕಂಪನಿ ನಕಲಿ ಬಿಲ್‌ ತಯಾರು ಮಾಡಿ, ತಾವು ನಿಗದಿತ ಅವಧಿಯಲ್ಲಿಯೇ ಮಹಿಳೆಗೆ ಗ್ಯಾಸ್‌ ಪೂರೈಕೆ ಮಾಡಿರುವುದಾಗಿ ಹೇಳಿದೆ. ಆದರೆ ಆ ಬಿಲ್‌ನಲ್ಲಿ ಇರುವ ದಿನಾಂಕದಲ್ಲಿ ವ್ಯತ್ಯಾಸ ಆಗಿರುವುದು ಕೋರ್ಟ‌ ಗಮನಕ್ಕೆ ಬಂದು. ಕಂಪನಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿತು.

    ತನ್ನ ತಪ್ಪನ್ನು ತಿದ್ದಿ ಕಂಪನಿ ಕ್ಷಮೆ ಕೋರಿದ ಮೇಲೆ ಮಹಿಳೆಗೆ ಐದು ಸಾವಿರ ರೂಪಾಯಿಗಳ ಪರಿಹಾರ ಹಾಗೂ ಎರಡು ಸಾವಿರ ರೂಪಾಯಿಗಳ ನ್ಯಾಯಾಲಯ ವೆಚ್ಚ ಎಲ್ಲವನ್ನೂ ಸೇರಿಸಿ ಏಳು ಸಾವಿರ ರೂಪಾಯಿಗಳನ್ನು ನೀಡುವಂತೆ ಕೋರ್ಟ್‌ ಆದೇಶಿಸಿದೆ. ಅಂತೂ ಮಹಿಳೆಗೆ 9 ವರ್ಷಗಳ ನಂತರ ನ್ಯಾಯ ಸಿಕ್ಕಿದೆ.

    ಕರೊನಾದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಹೆಲ್ತ್‌ ರಿಪೋರ್ಟರ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts