More

    ಒಂದು ಕೈ ನಿಷ್ಕ್ರಿಯಗೊಂಡಿದ್ದ ವ್ಯಕ್ತಿ ನೇಣು ಹಾಕಿಕೊಂಡಿದ್ದಾದರೂ ಹೇಗೆ?

    ನೆಲಮಂಗಲ: ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದು, ಆತನ ಸಾವು ಹೇಗೆ ಸಂಭವಿಸಿತೆಂಬುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆತ್ಮಹತ್ಯೆಗೆ ಶರಣಾಗಿರುವ ಕೆ.ಜಿ. ಜಾಜೂರು ಗ್ರಾಮದ ಸದಾನಂದ (41) ಐದು ವರ್ಷದವನಿದ್ದಾಗಲೇ ಎಡ ಕೈಗೆ ತೀವ್ರ ಪೆಟ್ಟಾಗಿ ಅದು ಅಂದಿನಿಂದಲೂ ನಿಷ್ಕ್ರಿಯಗೊಂಡಿದ್ದು, ಒಂದೇ ಕೈಯಿಂದ ಹೇಗೆ ನೇಣು ಹಾಕಿಕೊಂಡ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.

    ಆತ ಕೃಷಿಯ ಜತೆ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ಕೆಲಸವನ್ನೂ ಮಾಡುತ್ತಿದ್ದ. ಒಂದು ವಾರದ ಹಿಂದೆಯೇ (ಜು. 25) ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿತ್ತು. ಪೊಲೀಸರು ಮತ್ತು ಗ್ರಾಮಸ್ಥರ ಅನುಮಾನದ ಹಿನ್ನೆಲೆಯಲ್ಲಿ ಆತನ ಶವವನ್ನು ಗುಂಡಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹಿಂದುಗಳು ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಮಾಡುವಾಗ ದೇಹದ ಬಟ್ಟೆಯನ್ನು ಬಿಡುವುದಿಲ್ಲ. ಎಲ್ಲವನ್ನೂ ಕಳಚಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಆದರೆ ಸದಾನಂದನ ಶವವನ್ನು ಬಟ್ಟೆ ಸಹಿತ ಅಂತ್ಯಸಂಸ್ಕಾರ ಮಾಡಲಾಗಿದೆ. ಹೀಗಾಗಿ ಇದು ಕೊಲೆ ಇರಬಹುದು ಎಂಬ ಶಂಕೆ ಮೂಡಿದೆ. ಪೊಲೀಸರು ತಹಸೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರತೆಗೆದಿದ್ದಾರೆ. ವೈದ್ಯರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪುನಃ ಅಂತ್ಯಕ್ರಿಯೆ ಮಾಡಲಾಗಿದೆ. ಇದನ್ನೂ ಓದಿ ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್​ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಕೆ

    ಮೃತ ಸದಾನಂದನ ಪತ್ನಿ ಇನ್ನೊಂದು ಗ್ರಾಮದ ವ್ಯಕ್ತಿ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗಿದ್ದು, ಆತ ಜು. 25ರಂದು ಇವರ ಮನೆಗೆ ಬಂದಿದ್ದ. ಆಗ ಸದಾನಂದ ಮನೆಯಲ್ಲಿರಲಿಲ್ಲ. ಅವರಿಬ್ಬರೂ ಜತೆಯಲ್ಲಿದ್ದಾಗಲೇ ಸದಾನಂದ ಮನೆಗೆ ಬಂದಿದ್ದಾನೆ. ಆಗ ಅವರ ಜತೆ ಜಗಳವಾಗಿದೆ. ಇಬ್ಬರೂ ಸೇರಿ ಸದಾನಂದನ ಕೊಲೆ ಮಾಡಿ ನೇಣಿಗೆ ಏರಿಸಿರಬಹುದು. ನಂತರ ಸದಾನಂದನ ಮನೆಯವರು ಮರಣೋತ್ತರ ಪರೀಕ್ಷೆಗೂ ಅವಕಾಶವಾಗದಂತೆ, ಪೊಲೀಸರಿಗೂ ವಿಷಯ ತಿಳಿಸದೇ ರಾತ್ರೋರಾತ್ರಿ ಅಂತ್ಯಕ್ರಿಯೆ ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಶಂಕೆ.

    ಘಟನೆಯ ಮರುದಿನ ಗ್ರಾಮಸ್ಥರಿಂದ ಕರೆ ಬಂದಾಗಲೇ ದಾಬಸ್‌ಪೇಟೆ ಪೊಲೀಸರಿಗೆ ವಿಷಯ ಗೊತ್ತಾಗಿದೆ. ಪೊಲೀಸರು ಕುಟುಂಬದವರನ್ನು ವಿಚಾರಿಸಿದಾಗ ದೇಹವನ್ನು ಆಸ್ಪತ್ರೆಗೆ ಒಯ್ದರೆ ಕರೊನಾ ಹಿನ್ನೆಲೆಯಲ್ಲಿ ವಾಪಸ್ ಕೊಡಲು ತಡ ಮಾಡುವುದರಿಂದ ತಾವೇ ಅಂತ್ಯಕ್ರಿಯೆ ನೆರವೇರಿಸಿದ್ದೇವೆ ಎಂದು ಹೇಳಿದ್ದಾರೆ. ಜುಲೈ 25ರ ಸಂಜೆ ನಾಲ್ಕೂವರೆಗೆ ಸಾವು ಸಂಭವಿಸಿದ್ದು, ಏಳು ಗಂಟೆಯೊಳಗಾಗಿ ಅಂತ್ಯಕ್ರಿಯೆ ನಡೆಸಿರುವ ತರಾತುರಿಯೇ ಎಲ್ಲವನ್ನೂ ಹೇಳುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ಇದನ್ನೂ ಓದಿ15ನೇ ವರ್ಷಕ್ಕೆ ಮದುವೆ, ಎರಡೂವರೆ ವರ್ಷದ ಮಗುವಿನ ತಾಯಿಯೀಗ ಪಿಯು ಪರೀಕ್ಷೆಯಲ್ಲಿ ಅಗ್ರ ಸಾಧಕಿ

    ಸದಾನಂದ ಪ್ರತಿದಿನವೂ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ. ಆತನ ಪುತ್ರಿಯ ಸೀಮಂತ ಇದ್ದ ಕಾರಣ ಜು. 26ರಂದು ಆಕೆಯನ್ನು ಮನೆಗೆ ಕರೆತರಬೇಕಿತ್ತು. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಅಗತ್ಯ ಸಾಮಗ್ರಿಗಳನ್ನೆಲ್ಲ ಒಂದು ದಿನ ಮೊದಲೇ ತಂದು ಮನೆಯಲ್ಲಿ ಇಟ್ಟಿದ್ದ. ನಂತರ ಹೊಲದ ಬಳಿ ಸುತ್ತಾಡಲು ಹೋಗಿದ್ದ. ಸಂಜೆ ಮನೆಗೆ ಬಂದಾಗ ಗಲಾಟೆಯಾಗಿತ್ತು. ರೂಮಿನಲ್ಲಿ ಕಬ್ಬಿಣದ ರಾಡ್‌ಗೆ ಮಫ್ಲರನ್ನು ಸುತ್ತಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿತ್ತು. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಕೋರ್ಟ್​ಗಾದರೂ ದಾಖಲೆ ಸಲ್ಲಿಸಲೇಬೇಕಲ್ಲ; ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು; ನೋಟಿಸ್​ಗೆ ಸ್ವಾಗತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts