More

    ನೇಹಾ ಹತ್ಯೆ ಪ್ರಕರಣ: ಆರೋಪಿ ಫಯಾಜ್‌ನನ್ನು ಕಸ್ಟಡಿಗೆ ಪಡೆದ ಸಿಐಡಿ ತಂಡ

    ಧಾರವಾಡ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳ ತಂಡ ಬುಧವಾರ ಕಸ್ಟಡಿಗೆ ಪಡೆಯಿತು.
    ನೇಹಾ ಕೊಲೆ ಪ್ರಕರಣವನ್ನು ಉನ್ನತ ತನಿಖೆಗೆ ವಹಿಸಬೇಕು ಎಂಬ ಬೇಡಿಕೆ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಮಂಗಳವಾರವಷ್ಟೇ ಸಿಐಡಿಗೆ ವಹಿಸಿತ್ತು. ನ್ಯಾಯಾಲಯವು ಫಯಾಜ್‌ನನ್ನು 6 ದಿನಗಳ ಕಾಲ ಸಿಐಡಿ ವಶಕ್ಕೆ ನೀಡುವಂತೆ ಆದೇಶಿಸಿತ್ತು.

    ಇದನ್ನೂ ಓದಿ: ಬೇರುಗಂಡಿ ಮಠಕ್ಕೆ ಕೋಟ ಭೇಟಿ

    ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ೧೪ ದಿನಗಳವರೆಗೆ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸದ್ಯ 6 ದಿನಗಳವರೆಗೆ ಸಿಐಡಿ ಅಧಿಕಾರಿಗಳ ವಶಕ್ಕೆ ನೀಡಿ ಹುಬ್ಬಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿತ್ತು. ಬುಧವಾರ ಮಧ್ಯಾಹ್ನ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ ಸಿಐಡಿ ತಂಡ, ಫಯಾಜ್‌ನನ್ನು ವಶಕ್ಕೆ ಪಡೆಯಿತು. ಹತ್ತಿರದ ಪೊಲೀಸ್ ಹೆಡ್‌ಕ್ವಾರ್ಟಸ್‌ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫಯಾಜ್‌ನ ಆರೋಗ್ಯ ತಪಾಸಣೆ ಮಾಡಲಾಯಿತು.

    ಬಳಿಕ ಪೊಲೀಸ್ ಭದ್ರತೆಯಲ್ಲಿ ಕೊಲೆ ನಡೆದ ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಆವರಣಕ್ಕೆ ಕರೆದೊಯ್ಯಲಾಯಿತು. ಮುಂಜಾಗ್ರತಾ ಕ್ರಮವಾಗಿ ಉಪನಗರ ಠಾಣೆ ಪೊಲೀಸರು ಬಂದೋಬಸ್ತ್ ನೀಡಿದ್ದರು.

    ಕ್ಯಾಮರಾಮನ್​ಗೆ ಬಾಟೆಲ್ ಎಸೆದ ಮಹೇಂದ್ರ ಸಿಂಗ್ ಧೋನಿ! ‘ಕೂಲ್’ ಕಳೆದುಕೊಂಡ್ರಾ ಮಾಜಿ ಕ್ಯಾಪ್ಟನ್​?

    “ಹಾರ್ದಿಕ್ ನಾಯಕತ್ವ ಹೀಗೆ ಮುಂದುವರಿದರೆ…” ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಭವಿಷ್ಯ ನುಡಿದ ಮನೋಜ್ ತಿವಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts