ಬೇರುಗಂಡಿ ಮಠಕ್ಕೆ ಕೋಟ ಭೇಟಿ

0 Min Read
ಬೇರುಗಂಡಿ ಮಠಕ್ಕೆ ಕೋಟ ಭೇಟಿ
ಹಾಂದಿ ಮಾಚಗೊಂಡನಹಳ್ಳಿ ಶ್ರೀ ಬೇರುಗಂಡಿ ಬೃಹ್ಮಠದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಆಶೀರ್ವದಿಸಿದರು. ಎಂ.ಕೆ.ಪ್ರಾಣೇಶ್, ದೀಪಕ್ ದೊಡ್ಡಯ್ಯ ಇತರರಿದ್ದರು.

ಆಲ್ದೂರು: ಮಾಚಗೊಂಡನಹಳ್ಳಿ ಬೇರುಗಂಡಿ ಬೃಹನ್ಮಠದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಭೇಟಿ ನೀಡಿ ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಜತೆ ಸಮಾಲೋಚನೆ ನಡೆಸಿದರು.

ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮಠಕ್ಕೆ ಭೇಟಿ ನೀಡುತ್ತಾರೆ. ಗೆದ್ದ ನಂತರ ಮಠಕ್ಕೆ ಬರುವುದಿಲ್ಲ. ಇದು ಬೇಸರದ ಸಂಗತಿ ಎಂದರು. ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಕವೀಶ್, ರವಿ, ರವೀಂದ್ರ, ಅರವಿಂದ್, ನಾರಾಯಣ್ ಆಚಾರ್ಯ , ಸ್ವರೂಪ್ ಇತರರಿದ್ದರು.

See also  ಅಭಿವೃದ್ಧಿ, ದೇಶ ರಕ್ಷಣೆ ಗುರಿ
Share This Article