More

    ನೇಹಾ ಹಿರೇಮಠ ಕೊಲೆ: ಆರೋಪಿಗೆ ಗಲ್ಲು ನೀಡಲು ಆಗ್ರಹಿಸಿ ವಿವಿಧ ಸಂಟನೆಗಳಿಂದ ಬೃಹತ್​ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಅಖಿಲ ಭಾರತ ಜಂಗಮ ಸೇವಾ ಸಮಿತಿ, ವೀರಶೈವ ಮಹಾಸಭಾ, ಪ್ರಜಾ ಪರಿವರ್ತನಾ ವೇದಿಕೆ, ಕ್ರಾಂತಿ ಸೇನೆ, ವೀರ ಮದಕರಿ ಸೇನೆ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಟನೆ ಹಾಗೂ ವಿವಿಧ ಹಿಂದೂಪರ ಸಂಟನೆಗಳ ಸಹಯೋಗದಲ್ಲಿ ವಿದ್ಯಾಥಿರ್ನಿ ನೇಹಾ ಹಿರೇಮಠ ಕೊಲೆಗೈದ ಆರೋಪಿ ಯಾಜ್​ನನ್ನು ಗಲ್ಲಿಗೆ ಏರಿಸುವಂತೆ ಆಗ್ರಹಿಸಿ ಶನಿವಾರ ನಗರದ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಹಾಗೂ ಸಿಎಂ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
    ಪ್ರತಿಭಟನಾ ಮೆರವಣಿಗೆ ಮುನ್ನ ನಗರದ ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿಮಿರ್ಸಿ ಕೆಲಕಾಲ ರಸ್ತೆತಡೆ ನಡೆಸಿ ಪ್ರತಿಭಟಿಸಲಾಯಿತು. ಪ್ರತಿಭಟನೆಯುದ್ಧಕ್ಕೂ ಆರೋಪಿಗೆ ಗಲ್ಲು ಶಿೆ ನೀಡಿ ನ್ಯಾಯ ದೊರಕಿಸಿಕೊಡಿ ಎಂಬ ೂಷವ್ಯಾಕ್ಯ ಮೊಳಗಿದವು.
    ಈ ಸಂದರ್ಭದಲ್ಲಿ ವೀರಶೈವ ಮಹಾಸಭಾ ಜಿಲ್ಲಾಧ್ಯ ಬಸವರಾಜ ಕೊರ್ಲಹಳ್ಳಿ ಮಾತನಾಡಿ, ಯಾವುದೇ ಸಮಾಜದ ಹೆಣ್ಣುಮಕ್ಕಳಿಗೂ ಈ ರೀತಿ ಅನ್ಯಾಯವಾಗಬಾರದು. ಮಹಿಳಾ ಸಂರಕ್ಷಣೆ ರಾಜ್ಯದ ಕಾನೂನು ಬಿಗಿಯಾಗಬೇಕು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದರು.
    ಜಂಗಮ ಸಮಾಜದ ಮುಖಂಡ ವಿ. ಕೆ. ಗುರುಮಠ ಮಾತನಾಡಿ, ವಿವಿಧ ಸಮುದಾಯಗಳನ್ನು ಒಂದುಗೂಡಿಸಿ ಮುಂಬರುವ ದಿನಮಾನದಲ್ಲಿ ಯಾರಿಗೂ ಅನ್ಯಾಯ ಆಗದಂತೆ ಸಂಸ್ಕಾರ ಸಂಸತಿ ನೀಡಬೇಕಾಗಿದೆ ಎಂದರು.
    ನಿವೃತ್ತ ಯೋದ ರಾಜು ಹುಲಕೋಟಿ ಮಾತನಾಡಿ, ನಾವೆಲ್ಲ ಒಂದಾಗದಿದ್ದರೆ ಈ ಅನ್ಯಾಯ ನಿರಂತರವಾಗಲಿದೆ ಎಂದರು.
    ಬಾಬು ಬಾಕಳೆ, ಪ್ರಭಯ್ಯ ದಂಡಾವತಿಮಠ, ರಾಣಿ ಚಂದಾವರಿ, ಬಸಲಿಂಗಪ್ಪ , ವಿ. ವಿ. ಹಿರೇಮಠ, ಮುರುಗೇಶ ಬಡ್ನಿ, ಸಂಗಮೇಶ ಮೆಣಸಿನಕಾಯಿ, ಬಸವರಾಜ ಬ್ಯಾಹಟ್ಟಿ, ಡಾ. ಜಿ.ಎಸ್​ ಹಿರೇಮಠ, ಸಂತೋಷ, ಶಿವಕುಮಾರ, ಉಮಾಪತಿ ಭೂಸನೂರಮಠ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts