More

    ರಿಷಿ ಕಪೂರ್​ಗೆ ನಮನ ಸಲ್ಲಿಸಿದ ನೀತೂ ಮತ್ತು ರಣಬೀರ್​ ಕಪೂರ್​

    ನವದೆಹಲಿ: ಇತ್ತೀಚೆಗೆ ನಿಧನರಾದ ಬಾಲಿವುಡ್​ನ ದಿಗ್ಗಜ ನಟ ರಿಷಿ ಕಪೂರ್​ ಅವರ ಮೂರನೇ ದಿನದ ಶ್ರಾದ್ಧ ಕಾರ್ಯಕ್ರಮದಲ್ಲಿ ಅವರ ಪತ್ನಿ ನೀತೂ ಕಪೂರ್​, ಪುತ್ರ ರಣಬೀರ್​ ಕಪೂರ್​ ಮತ್ತು ಪುತ್ರಿ ರಿದ್ಧಿಮಾ ಕಪೂರ್​ ಅಲ್ಲದೆ, ಕಪೂರ್​ ಕುಟುಂಬದವರೆಲ್ಲರೂ ಸೇರಿ ಹಲವರು ನಮನ ಸಲ್ಲಿಸಿದರು.

    ಮುಂಬೈನ ನಿವಾಸದಲ್ಲಿ ಭಾನುವಾರ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ರಿಷಿ ಕಪೂರ್​ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ನೀತೂ ಮತ್ತು ರಣಬೀರ್​ ಕಪೂರ್​ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನೀತೂ ಕಪೂರ್​ ಬಿಳಿ ವಸ್ತ್ರ ಧರಿಸಿದ್ದರೆ, ರಣಬೀರ್​ ಕಪೂರ್​ ಕೆಂಪು ಪೇಟ ಧರಿಸಿದ್ದರು. ಈ ಚಿತ್ರವೀಗ ಸಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ:ಕುಲಭೂಷಣ್​ ಜಾಧವ್​ ವಿಷಯದಲ್ಲಿ ಪಟ್ಟು ಸಡಿಲಿಸದ ಪಾಕಿಸ್ತಾನ

    ಕ್ಯಾನ್ಸರ್​ನಿಂದ ಬಳಲುತ್ತಿದ್ದ ರಿಷಿ ಕಪೂರ್​ ಮುಂಬೈನ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದರು. ಬಾಲಿವುಡ್​ನ ದಿಗ್ಗಜ ನಟ, ನಟಿಯರು ಟ್ವಿಟರ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದರು.

    ಪಾತ್ರೆಯಲ್ಲಿ ಕುದಿಯುತ್ತಿತ್ತು ಆ ಮಾತೃ ಹೃದಯ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts