More

    ತಂಪು ಪಾನೀಯಗಳಿಗೆ ಪೈಪೋಟಿ ನೀಡುತ್ತಿದೆ ‘ನೀರಾ’; ಏನಿದರ ವಿಶೇಷತೆ?

    ಮಂಗಳೂರು: ನೈಸರ್ಗಿಕವಾಗಿ ದೊರೆಯುವ ರುಚಿಕರ ಪಾನೀಯ ‘ನೀರಾ’ ಜಾಂಬೂರಿಯಲ್ಲಿ ಇತರ ರಾಸಾಯನಿಕ ಮಿಶ್ರಿತ ತಂಪು ಪಾನೀಯಗಳಿಗೆ ಪೈಪೋಟಿ ನೀಡುತ್ತಿದೆ. ಅಮಲು ಮುಕ್ತವಾದ ಕಬ್ಬಿನ ಹಾಲು ರೀತಿಯ ಸಿಹಿ ಪಾನೀಯವಾಗಿರುವ ಕಲ್ಪರಸವು ಸತ್ವ ಮತ್ತು ಪೋಷಕಾಂಶಗಳಲ್ಲಿ ಎಳನೀರಿಗೆ ಹೋಲಿಸಿದರೆ ದುಪ್ಪಟ್ಟು ಶಕ್ತಿಯುತವಾಗಿದೆ.

    ಈ ತಂತ್ರಜ್ಞಾನವನ್ನು ಕಾಸರಗೋಡಿನ ಸಿ.ಪಿ.ಸಿ.ಆರ್.ಐ ಸಂಸ್ಥೆ ಅಭಿವೃದ್ಧಿಪಡಿಸಿದ್ದು ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನದಲ್ಲಿ ಉಡುಪಿಯ ಕೊಕೊನಟ್ ಕಂಪನಿ ವೈಜ್ಞಾನಿಕವಾಗಿ ತಯಾರಿಸಿ ಮಾರುಕಟ್ಟೆ ಮಾಡುತ್ತಿದೆ.

    ತೆಂಗಿನ ಮರ ಹತ್ತಿ ಹೊಂಬಾಳೆ ಹದಗೊಳಿಸಿ ಅದರ ರಸವನ್ನು ಪೆಟ್ಟಿಗೆಯಲ್ಲಿ ಸಂಗ್ರಹಿಸಿ, 4 ಡಿಗ್ರಿಗಿಂತ ಕಡಿಮೆ ಉಷ್ಣಾಂಶದಲ್ಲಿ ಶೇಖರಿಸಿ ಇಡುವ ಪ್ರಕ್ರಿಯೆ ಶ್ರಮದಾಯಕವಾದುದು. ಇದು 17 ರೀತಿಯ ಅಮೈನೋ ಆಮ್ಲಗಳನ್ನು ಹೊಂದಿರುವುದರಿಂದ ದೇಹಕ್ಕೆ ಬೇಕಾದ ಹೆಚ್ಚಿನ ಪ್ರೊಟೀನ್ ಉತ್ಪಾದನೆಗೆ ಸಹಕಾರಿ. ಹೇರಳ ಪ್ರಮಾಣದಲ್ಲಿ ವಿಟಮಿನ್ ಎ ಮತ್ತು ಬಿ ಕಾಂಪ್ಲೆಕ್ಸ್ ಹಾಗೂ ವಿಟಮಿನ್ ಸಿ ಹೊಂದಿರುವ ಏಕೈಕ ಪಾನೀಯ. ಹಲವು ರೋಗಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದ್ದು, ಆರೋಗ್ಯಕ್ಕೆ ಪೂರಕವಾಗಿದೆ ಎಂದು ಸಂಶೋಧನೆಗಳು ಹೇಳುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts