More

  ಅಜ್ಜಿಯಾಗ್ತಿದ್ದಾರೆ ನೀನಾ ಗುಪ್ತಾ!

  ಬಾಲಿವುಡ್ ನಟಿ ನೀನಾ ಗುಪ್ತಾ ಅಜ್ಜಿಯಾಗೋಕೆ ರೆಡಿಯಾಗ್ತಿದ್ದಾರೆ. ರಿಯಲ್ ಲೈಫ್‍ನಲ್ಲಲ್ಲ, ರೀಲ್ ಲೈಫ್‍ನಲ್ಲಿ ಎಂಬುದು ಗೊತ್ತಿರಲಿ. ಇತ್ತೀಚಿನ ವರ್ಷಗಳಲ್ಲಿ ಹಲವು ಚಿತ್ರಗಳಲ್ಲಿ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನೀನಾ ಗುಪ್ತಾ ಅವರು, ಇದೀಗ ಚಿತ್ರವೊಂದರಲ್ಲಿ ಅಜ್ಜಿಯಾಗುವುದಕ್ಕೆ ಹೊರಟಿದ್ದಾರೆ ಎನ್ನುವುದು ವಿಶೇಷ.

  ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ವಿಚಾರಕ್ಕೆ ಅಜಯ್ ದೇವಗನ್ ಟ್ರೋಲ್

  ನೀನಾ ಗುಪ್ತಾ, ಅಜ್ಜಿಯಾಗುತ್ತಿರುವುದು ಯಾರಿಗೆ ಗೊತ್ತಾ? ಅಲ್ಲೇ ಇರೋದು ಮಜ. ತಮಗಿಂಥ ಅರ್ಧ ವಯಸ್ಸು ಕಡಿಮೆ ಇರುವ ನಟ ಅರ್ಜುನ್ ಕಪೂರ್ ಅಜ್ಜಿಯಾಗಿ ನೀನಾ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ನಿಖಿಲ್ ಅಡ್ವಾಣಿ ಮತ್ತು ಅರ್ಜುನ್ ಕಪೂರ್ ಜತೆಯಾಗಿ ಒಂದು ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದು ನಿಜವಾದರೂ, ಚಿತ್ರತಂಡ ಸ್ಕ್ರಿಪ್ಟ್‍ವರ್ಕ್ ಪೂರ್ತಿ ಮಾಡಿರಲಿಲ್ಲ.

  ಇದೀಗ ಚಿತ್ರತಂಡದವರು ಲಾಕ್‍ಡೌನ್ ಸಮಯವನ್ನು ಚೆನ್ನಾಗಿ ಬಳಸಿಕೊಂಡು, ಸ್ಕ್ರಿಪ್ಟ್ ಕೆಲಸವನ್ನು ಪೂರ್ತಿ ಮಾಡಿದ್ದಾರೆ. ಇನ್ನು ಚಿತ್ರೀಕರಣಕ್ಕೆ ಹೋಗಬೇಕಷ್ಟೇ. ಅರ್ಜುನ್‍ಗೆ ನಾಯಕಿಯಾಗಿ ರಾಕುಲ್ ಪ್ರೀತ್ ಸಿಂಗ್ ನಟಿಸಿದರೆ, ಅವರ ಅಜ್ಜಿಯಾಗಿ ನೀನಾ ಗುಪ್ತಾ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವಿಷಯದ ಕುರಿತಾಗಿ ಚಿತ್ರತಂಡದ ಯಾರೊಬ್ಬರೂ ಸಹ, ಯಾವ ವಿಷಯವನ್ನೂ ಬಾಯಿಬಿಟ್ಟಿಲ್ಲ. ಚಿತ್ರೀಕರಣ ಶುರುವಾಗುತ್ತಿದ್ದಂತೆಯೇ ಒಂದೊಂದೇ ವಿಷಯ ಬೆಳಕಿಗೆ ಬರುವ ಸಾಧ್ಯತೆ ಇದೆ.

  ಇದನ್ನೂ ಓದಿ: ಈ ಒಂದು ಕಾರಣಕ್ಕಾ ಸುಶೀಲ್ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು

  ಕಳೆದ ಮೂರು ದಶಕಗಳಿಂದ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿರುವ ನೀನಾ ಗುಪ್ತಾ, `ಬದಾಯಿ ಹೋ’ ಚಿತ್ರದ ನಂತರ ಬಾಲಿವುಡ್‍ನಲ್ಲಿ ಬೇಡಿಕೆಯ ನಟಿಯಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಅವರು `ಮುಲ್ಕ್’, `ಪಂಗಾ’, `ಶುಭ್ ಮಂಗಲ್ ಜ್ಯಾದಾ ಸಾವಧಾನ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು `83′ ಚಿತ್ರದಲ್ಲೂ ಅವರೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

  ಮಹೇಶ್ ಬಾಬು ಚಿತ್ರದಲ್ಲಿ ನಟಿಸಬಾರದಿತ್ತು … ಪಶ್ಚಾತ್ತಾಪ ಪಟ್ಟ ನಟ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts