More

    ಬ್ರಹ್ಮಪುತ್ರಾ, ಜಿಯಾಭರಲಿ ನದಿಗಳಲ್ಲಿ ಪ್ರವಾಹ: ಅಸ್ಸಾಂನ 6 ಜಿಲ್ಲೆಗಳಲ್ಲಿ ಸಂಕಷ್ಟ

    ಗುವಾಹಟಿ: ಅಸ್ಸಾಂನ ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು ಸೋಮವಾರ ಕನಿಷ್ಠ 49,000 ಸಾವಿರ ಜನ ನೆಲೆ ಕಳೆದುಕೊಂಡಿದ್ದಾರೆ. ಬ್ರಹ್ಮಪುತ್ರಾ ಮತ್ತು ಜಿಯಾ ಭರಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು,ಆರು ಜಿಲ್ಲೆಗಳು ಸಂಕಷ್ಟಕ್ಕೆ ಒಳಗಾಗಿವೆ.

    ಸೊಂತಿಪುರ, ವೆಸ್ಟ್​ ಕರ್ಬಿ ಅಂಗ್ಲಾಂಗ್​ನ ಹಿಲ್ ಡಿಸ್ಟ್ರಿಕ್ಟ್ ನಿಂದ ಹಿಡಿದು ಧೆಮಜಿ, ಲಖಿಂಪುರ, ಗೋಲಾಪಾರ, ಹೊಜಾಯ್​, ಕಚಾರ್​ ಜಿಲ್ಲೆಗಳ ವಿವಿಧ ಭಾಗಗಳು ಪ್ರವಾಹ ಪೀಡಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂ ಸ್ಟೇಟ್ ಡಿಸಾಸ್ಟರ್ ಮ್ಯಾನೇಜ್​ಮೆಂಟ್​ ಅಥಾರಿಟಿಯ ನಿತ್ಯದ ಪ್ರವಾಹ ಪರಿಸ್ಥಿತಿ ವರದಿ ಪ್ರಕಾರ ಇದುವರೆಗೆ 5,798 ಹೆಕ್ಟೇರ್ ಬೆಳೆಗಳು ಧೆಮಜಿ, ಗೋಲಾಪಾರ, ಹೊಜಾಯ್ ಜಿಲ್ಲೆಗಳಲ್ಲಿ ನೀರಿನಲ್ಲಿ ಮುಳುಗಿವೆ.

    ಇದನ್ನು ಓದಿದ್ದೀರಾ?ಸುದ್ದಿ ಸಮಗ್ರ: ದೆಹಲಿ ಕಂಪನ ಜನರಲ್ಲಿ ನಡುಕ

    ಗೋಲಪಾರ ಜಿಲ್ಲೆ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದು 33,000 ಜನ ತೊಂದರೆಗೆ ಒಳಗಾಗಿದ್ದಾರೆ. ಹೊಜಾಯ್​ ಜಿಲ್ಲೆಯಲ್ಲಿ 13,000, ಲಖಿಂಪುರದಲ್ಲಿ 1,533, ಕಚಾರ್​ನಲ್ಲಿ 450, ಧೆಮಜಿಯಲ್ಲಿ 410 ಜನ ಸಂಕಷ್ಟಕ್ಕೆ ಈಡಾಗಿದ್ದಾರೆ.ಮೊದಲ ಹಂತದ ಈ ಪ್ರವಾಹದಲ್ಲಿ ಇದುವರೆಗೆ ರಾಜ್ಯದಲ್ಲಿ 10 ಜನ ಜೀವ ಕಳೆದುಕೊಂಡಿದ್ದಾರೆ. ಎರಡು ಜಿಲ್ಲೆಗಳ ನಿರಾಶ್ರಿತರ ಶಿಬಿರದಲ್ಲಿ 48,783 ಜನ ನೆಲೆ ಕಂಡುಕೊಂಡಿದ್ದಾರೆ.

    ಪ್ರವಾಹದಿಂದಾಗಿ ಕರೀಗಂಜ್​, ದಿಬ್ರುಗಢ, ಬಕ್ಸಾ ಜಿಲ್ಲೆಗಳಲ್ಲಿ ರಸ್ತೆ ಮತ್ತು ಇತರೆ ಮೂಲಸೌಕರ್ಯಗಳು ಭಾರಿ ಹಾನಿಗೊಳಗಾಗಿವೆ. ನಷ್ಟದ ಪ್ರಮಾಣವನ್ನು ಇನ್ನೂ ಅಂದಾಜಿಸಲಾಗಿಲ್ಲ. (ಏಜೆನ್ಸೀಸ್​)

    ರಾಜಧರ್ಮ ರಾಜನೀತಿ| ರಾಜಕಾರಣ ಮತ್ತು ದಡ್ಡತನದ ಕುರಿತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts