More

    ಪ್ರ್ಯಾಂಕ್​ ಹೆಸರಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಭಾರತದ ಯೂಟ್ಯೂಬರ್​ಗಳಿಗೆ ಕಾದಿದೆ ಸಂಕಷ್ಟ!

    ನವದೆಹಲಿ: ಭಾರತದ ಅನೇಕ ಯೂಟ್ಯೂಬರ್​ಗಳು ಪ್ರ್ಯಾಂಕ್​ (ತಮಾಷೆ) ಹೆಸರಿನಲ್ಲಿ ಮಹಿಳೆಯರ ಮೇಲೆ ಮಾಡುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ತಿಳಿಸಿದ್ದಾರೆ.

    ಪ್ರ್ಯಾಂಕ್​ ಹೆಸರಿನಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಯೂತ್ ಎಗೆನ್ಸ್ಟ್​ ರೇಪ್​ (Youth Against Rape) ಹೆಸರಿನ ಟ್ವಿಟರ್​ ಖಾತೆಯಲ್ಲಿ ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಒಪ್ಪಿಗೆಯ ಆಕ್ರಮಣದ ಮೂಲಕ ಹಣ ಮಾಡಲು ಯೂಟ್ಯೂಬರ್​ಗಳು ಯಾವ ರೀತಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ನೋಡಿ ಎಂದು ಟ್ವೀಟ್​ ಮಾಡಲಾಗಿದೆ.

    ಇದನ್ನೂ ಓದಿರಿ: ಗಿಳಿಶಾಸ್ತ್ರ ಹೇಳುತ್ತಿದ್ದ ಐವರು ವಶಕ್ಕೆ, ಮಂಗಳೂರಿನಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ

    ಅನೇಕ ಟ್ವಿಟ್ಟಿಗರು ಈ ರೀತಿಯ ಅನೇಕ ಘಟನಾವಳಿಗಳ ಸರಪಳಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಇಂತಹ ಯೂಟ್ಯೂಬರ್​ಗಳು ಲಕ್ಷ ಲಕ್ಷ ಚಂದಾದಾರರನ್ನು ಹೊಂದಿದ್ದಾರೆ ಮತ್ತು ಡಿಜಿಟಲ್​ ವೇದಿಕೆಯಲ್ಲಿ ಪರಿಶೀಲಿತ ಕಂಟೆಂಟ್​ ಕ್ರಿಯೇಟರ್​ ಸಹ ಆಗಿದ್ದಾರೆಂದು ತಿಳಿಸಿದ್ದಾರೆ. ಅಲ್ಲದೆ, ಈ ಪ್ರ್ಯಾಂಕ್​ಗಳಲ್ಲಿ ಕೆಲವು ನಿಜವಲ್ಲ. ಅವುಗಳಲ್ಲಿ ಭಾಗಿಯಾಗಿರುವ ಜನರು ಇಂತಹ ಘೋರ ಕೃತ್ಯಗಳಿಗೆ ಮೊದಲೇ ಒಪ್ಪಿಗೆ ನೀಡುತ್ತಾರೆ ಎಂಬ ಅಂಶವನ್ನೂ ಟ್ವಿಟ್ಟಿಗರು ಗಮನಕ್ಕೆ ತಂದಿದ್ದಾರೆ.

    ಟ್ವಿಟರ್​ನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ, ಕೇಂದ್ರ ಸಚಿವರಾದ ಪ್ರಕಾಶ್​ ಜಾವಡೇಕರ್​ ಮತ್ತು ರವಿಶಂಕರ್​ ಪ್ರಸಾದ್​ರಿಗೆ ಟ್ಯಾಗ್​ ಮಾಡಿದ್ದು, ಪ್ರ್ಯಾಂಕ್​ ಹೆಸರಿನಲ್ಲಿ ಇಂದಿನ ಪೀಳಿಗೆ ಹೊಲಸನ್ನು ಹರಡುತ್ತಿವೆ. ಯಾವುದೇ ಸೂಕ್ಷ್ಮತೆಯನ್ನು ಚಿತ್ರಿಸಲಾಗುತ್ತಿಲ್ಲ. ಮಹಿಳೆಯರನ್ನು ಸಾರ್ವಜನಿಕವಾಗಿಯೇ ಸ್ಪರ್ಶಿಸಲಾಗುತ್ತದೆ. ಇದೆಲ್ಲಾ ನೋಡಿ ನೀವು ಇನ್ನು ಸುಮ್ಮನಿರುತ್ತೀರಾ ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ. ಅಲ್ಲದೆ, ನೀವು ಸುಮ್ಮನಾದರೇ ನಾಳೆ ಇಂತಹ ಮತ್ತಷ್ಟು ಮಂದಿ ಹುಟ್ಟಿಕೊಳ್ಳುತ್ತಾರೆಂದು ಎಚ್ಚರಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೇಖಾ ಶರ್ಮಾ, ಈ ವಿಚಾರವನ್ನು ಯೂಟ್ಯೂಬ್​ನೊಂದಿಗೆ ಚರ್ಚಿಸಿ, ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಇದನ್ನೂ ಓದಿರಿ: ಶ್ರದ್ಧಾ ಕಪೂರ್​ ಹಾಕಿರುವ ಈ ಬಿಕಿನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!

    ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕುವ ಮತ್ತು ದುರ್ಬಳಕೆ ನಿಲ್ಲಿಸುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದರ ಪ್ರಕಾರ ವ್ಯಕ್ತಿಯೊಬ್ಬ ವಿಡಿಯೋ ಅಥವಾ ಫೋಟೋ ಕುರಿತು ದೂರು ನೀಡಿದ 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದೆ. ಅಲ್ಲದೆ, ಇಂತಹದ್ದನ್ನು ಬಗೆಹರಿಸಲು ಸಂಸ್ಥೆಗಳು ಕುಂದುಕೊರತೆ ಅಧಿಕಾರಿಯೊಬ್ಬರನ್ನು ನೇಮಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. (ಏಜೆನ್ಸೀಸ್​)

    ಸಿಡಿ ಪ್ರಕರಣ: ಎಫ್​ಐಆರ್ ಇಲ್ಲದೆ ವಿಚಾರಣೆ ನಡೆಸಲಿದೆ ಎಸ್​ಐಟಿ

    ‘ನಾನು ಹೊಡೆದೇ ಇಲ್ಲ, ಅವಳೇ ಚಪ್ಪಲಿಯಲ್ಲಿ ಹೊಡೆದಿದ್ದು.. ಹಿಂದಿಯಲ್ಲಿ ಬೈದಿದ್ದು..’ ಕಥೆಯನ್ನು ಬಿಚ್ಚಿಟ್ಟ ಡೆಲಿವರಿ ಬಾಯ್​

    ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಕಾರಿಗಾಗಿ ಕೊಂದನಾ ಪತಿರಾಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts