More

    ‘ಓಂ ಶಾಂತಿ ಓಂ..’: ದೀಪಿಕಾ ಪಡುಕೋಣೆಗೆ ಖುಷಿ, ಅರ್ಜುನ್​ ರಾಮ್​​ಪಾಲ್​ಗೆ ಮಂಡೆಬಿಸಿ!

    ಮುಂಬೈ: ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ ಒಂದೆಡೆಯಲ್ಲಿ ಖುಷಿಯಾಗಿದ್ದರೆ ಮತ್ತೊಂದೆಡೆ ಅರ್ಜುನ್​ ರಾಮ್​ಪಾಲ್​ ಮಂಡೆಬಿಸಿಯಲ್ಲಿದ್ದಾರೆ. ಇಬ್ಬರ ಖುಷಿ-ಮಂಡೆಬಿಸಿ ಎರಡಕ್ಕೂ ಈ ದಿನಕ್ಕೂ ಒಂದು ಲಿಂಕ್​ ಇದೆ.

    2007ರ ನ. 9ರಂದು ಇದೇ ದಿನ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಹಾಗೂ ಅರ್ಜುನ್ ರಾಮ್​ಪಾಲ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ ‘ಓಂ ಶಾಂತಿ ಓಂ’ ಸಿನಿಮಾ ಬಿಡುಗಡೆ ಆಗಿತ್ತು. ಅದೇ ಚಿತ್ರದ ಮೂಲಕ ಬಾಲಿವುಡ್​ಗೆ ಪ್ರವೇಶಿಸಿದ್ದ ದೀಪಿಕಾ ಪಡುಕೋಣೆ, ಬಾಲಿವುಡ್​ನಲ್ಲಿ 13 ವರ್ಷ ಪೂರೈಸಿದ ಖುಷಿಯಲ್ಲಿದ್ದಾರೆ. ಮಾತ್ರವಲ್ಲ, ಆ ಚಿತ್ರದಲ್ಲಿ ತಾವು ಮಾಡಿದ್ದ ‘ಶಾಂತಿಪ್ರಿಯ’ ಎಂಬ ಪಾತ್ರದ ಗುಂಗಿನಲ್ಲಿ ಟ್ವಿಟರ್ ಹ್ಯಾಂಡಲ್​ನಲ್ಲೂ ಹೆಸರು ಬದಲಿಸಿಕೊಂಡು ಸಂಭ್ರಮ ಹಂಚಿಕೊಂಡಿದ್ದಾರೆ.

    ಮತ್ತೊಂದೆಡೆ ಅದೇ ಸಿನಿಮಾದಲ್ಲಿ ವಿಲನ್​ ಆಗಿ ಗಮನ ಸೆಳೆದಿದ್ದ ಅರ್ಜುನ್​ ರಾಮ್​ಪಾಲ್​ ಈಗ ರಿಯಲ್ ವಿಲನ್​ ಎನಿಸಿಕೊಳ್ಳುವಂಥ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಮಂಡೆಬಿಸಿಯಲ್ಲಿದ್ದಾರೆ. ದೀಪಿಕಾ ಪಡುಕೋಣೆಗೆ ತಗುಲಿಕೊಂಡಿರುವ ಡ್ರಗ್ಸ್​ ಪ್ರಕರಣ, ಅರ್ಜುನ್​ ರಾಮ್​ಪಾಲ್​ಗೂ ಉರುಳಾಗಿದ್ದಷ್ಟೇ ಅಲ್ಲ, ಸೋಮವಾರ ಅವರ ಮನೆ ಮೇಲೆ ಮಾದಕ ವಸ್ತು ನಿಯಂತ್ರಣ ದಳ(ಎನ್​ಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈನಲ್ಲಿರುವ ಅರ್ಜುನ್​ ರಾಮ್​ಪಾಲ್​ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ವ್ಯಾಪಕ ಪರಿಶೀಲನೆಯಲ್ಲಿ ತೊಡಗಿದ್ದಾರೆ. (ಏಜೆನ್ಸೀಸ್​)

    ‘ಶಾಂತಿಪ್ರಿಯ’ ಆದ ದೀಪಿಕಾ ಪಡುಕೋಣೆ; ಟ್ವಿಟರ್​ನಲ್ಲೂ ಹೆಸರು ಬದಲಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts