More

    ವಿಜ್ಞಾನ ಕ್ಲಬ್‌ನಿಂದ ಶೂನ್ಯ ನೆರಳಿನ ಪ್ರಯೋಗ

    ನಾಯಕನಹಟ್ಟಿ: ಪಟ್ಟಣದಲ್ಲಿ ವಿಜ್ಞಾನ ಕ್ಲಬ್ ವತಿಯಿಂದ ಶುಕ್ರವಾರ ಸಾಮಾಜಿಕ ಅಂತರ ಕಾಯ್ದುಕೊಂಡು ಶೂನ್ಯ ನೆರಳಿನ ಪ್ರಯೋಗ ಕೈಗೊಳ್ಳಲಾಯಿತು.

    ಸೂರ್ಯನ ನೆರಳು ಪ್ರತಿದಿನ ನಾನಾ ಅಳತೆಗಳಲ್ಲಿ ಕಾಣುತ್ತದೆ. ಆದರೆ, ಶುಕ್ರವಾರ ಮಧ್ಯಾಹ್ನ 12.05ಕ್ಕೆ ಯಾವುದೇ ನೆರಳು ಗೋಚರಿಸಲಿಲ್ಲ. ಸೂರ್ಯನು ಮಕರ ವೃತ್ತದಿಂದ ಕರ್ಕಾಟಕ ವೃತ್ತದೆಡೆಗೆ ಸಾಗುವಾಗ (ಏ.24 ರಂದು), ಇದೇ ರೀತಿ ಕರ್ಕಾಟಕ ವೃತ್ತದಿಂದ ಮಕರ ವೃತ್ತದ ಕಡೆಗೆ (ಆ.18) ರಂದು ಮಧ್ಯಾಹ್ನದ ಒಂದು ನಿಗದಿತ ಸಮಯದಲ್ಲಿ ಸಾಗುವಾಗ ಯಾವುದೇ ನೆರಳು ಉಂಟಾಗುವುದಿಲ್ಲ.

    ವರ್ಷದಲ್ಲಿ ಎರಡು ದಿನವನ್ನು ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ. ಇದನ್ನು ಅರಿಯಲು ಪಟ್ಟಣದ ವಿದ್ಯಾವಿಕಾಸ ವಿಜ್ಞಾನ ಕ್ಲಬ್ ಹಾಗೂ ಗ್ರೀನ್ ಗ್ರೂಪ್ ಕ್ಲಬ್‌ನಿಂದ ಚಟುವಟಿಕೆ ಏರ್ಪಡಿಸಲಾಗಿತ್ತು.

    ಲಂಭವಾಗಿರುವ ಪೈಪ್, ಪೋಲ್, ಮೈಕ್ ಸ್ಟ್ಯಾಂಡ್ ನಾನಾ ವಸ್ತುಗಳನ್ನು ನೆಲದ ಮೇಲೆ ಲಂಬವಾಗಿ ಇರಿಸಲಾಗಿತ್ತು. ಮಧ್ಯಾಹ್ನ 12.5ಕ್ಕೆ ಲಂಬವಾಗಿರಿಸಿದ್ದ ವಸ್ತುಗಳಿಂದ ಯಾವುದೇ ನೆರಳು ಉಂಟಾಗಲಿಲ್ಲ.

    ಈ ಎರಡು ದಿನಗಳು ಮಾತ್ರ ಸೂರ್ಯನು ನೇರವಾಗಿ ನಮ್ಮ ನೆತ್ತಿಯ ಮೇಲೆ ಇರುತ್ತಾನೆ. ಹೀಗಾಗಿ ನೆಲದ ಮೇಲೆ ಲಂಬವಾಗಿರುವ ವಸ್ತುಗಳಿಂದ ಯಾವುದೇ ನೆರಳು ಉಂಟಾಗುವುದಿಲ್ಲ.

    ಸೂರ್ಯನ ಬಿಂಬವನ್ನು ಕನ್ನಡಿ ಹಾಗೂ ಬಿಂಬಗ್ರಾಹಿ ಬಳಸಿ, ಗೋಡೆಯ ಮೇಲೆ ಪಡೆದು ಸೂರ್ಯನ ಗಾತ್ರ, ದೂರ ಸೇರಿ ನಾನಾ ಪ್ರಯೋಗಗಳನ್ನು ಕೈಗೊಳ್ಳಲಾಯಿತು.

    ವಿಜ್ಞಾನ ಶಿಕ್ಷಕ ಡಿ.ಎಸ್.ಸುಜಯ್, ವಿದ್ಯಾರ್ಥಿಗಳಾದ ಸಿ.ಮೌರ್ಯ, ಎ.ಆಕಾಶ್, ತ್ರಿಶೂಲ್, ಇಂದ್ರಪ್ರಸಾದ್, ಅರುಣಿ, ಪವನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts