More

    ದರ್ಶನ ಭಾಗ್ಯ ಕರುಣಿಸಿದ ಹಟ್ಟಿ ತಿಪ್ಪೇಶ

    ನಾಯಕನಹಟ್ಟಿ: ಕರೊನಾ ಕಾರಣದಿಂದ 78 ದಿನಗಳ ಕಾಲ ಮುಚ್ಚಿದ್ದ ಹಟ್ಟಿ ತಿಪ್ಪೇಶನ ದೇವಸ್ಥಾನ ಹಲವು ನಿಬಂಧನೆಗಳೊಂದಿಗೆ ಸೋಮವಾರ ಬಾಗಿಲು ತೆರೆಯಲಾಗಿತ್ತು.

    ಜಿಪಂ ಅಧ್ಯಕ್ಷೆ ಶಶಿಕಲಾ ಸೇರಿ ನೂರಾರು ಭಕ್ತರು ಮೊದಲ ದಿನ ದೇವರ ದರ್ಶನ ಪಡೆದರು. ಬೆಳಗ್ಗೆ ದೇವಸ್ಥಾನದ ಸಿಬ್ಬಂದಿ ಒಳಮಠ, ಹೊರಮಠ, ರಥದ ಬಳಿ ರಾಸಾಯನಿಕ ಸಿಂಪಡಣೆ ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟರು.

    ಒಳಮಠಕ್ಕೆ ಬಂದಂತಹ ಭಕ್ತರ ವೈಯಕ್ತಿಕ ವಿವರ ದಾಖಲಿಸಿಕೊಂಡು ಥರ್ಮೋಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಮಾಡಿ ನಂತರ ದೇವಸ್ಥಾನದ ಒಳಗಡೆ ದರ್ಶನಕ್ಕೆ ಬಿಡಲಾಗುತ್ತಿತ್ತು. ಗರ್ಭಗುಡಿ ಬಳಿ ಬಿಡದೇ ಒಳಮಠದ ಪ್ರಾಂಗಣದ ಬಳಿಯೇ ಸರತಿ ಸಾಲಿನಲ್ಲಿ ಬಂದು ದರ್ಶನ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೊದಲು ದೇವಸ್ಥಾನ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್ ಮತ್ತು ಸದಸ್ಯರು ನಿಯಮಾನುಸಾರ ದರ್ಶನ ಪಡೆದರು.

    ಧ್ವನಿವರ್ಧಕದಲ್ಲಿ ಕರೊನಾ ಮುನ್ನೆಚ್ಚರಿಕೆ ಬಗ್ಗೆ ವಿವರಗಳನ್ನು ಭಿತ್ತರಿಸಲಾಗುತ್ತಿತ್ತು. ಯಾವುದೇ ರೀತಿಯ ಸೇವೆಗಳನ್ನು ಮಾಡುವುದಿಲ್ಲ. ಬರೀ ದರ್ಶನ ಮಾತ್ರ, ಭಕ್ತರು ಸಹಕರಿಸಬೇಕೆಂದು ಸಮಿತಿಯವರು ವಿನಂತಿ ಮಾಡಿಕೊಳ್ಳುತ್ತಿದ್ದರು. ಬಳ್ಳಾರಿ, ದಾವಣಗೆರೆ ಸೇರಿ ವಿವಿಧೆಡೆಯಿಂದ ಬಂದಂತಹ ನೂರಾರು ಭಕ್ತರು ದರ್ಶನ ಪಡೆದರು.

    ದೇವಸ್ಥಾನ ಸಮಿತಿ ಸದಸ್ಯರಾದ ಎಸ್.ವಿ.ತಿಪ್ಪೇಸ್ವಾಮಿ ರೆಡ್ಡಿ, ಮುನಿಯಪ್ಪ, ರುದ್ರಮುನಿ, ಗೋವಿಂದಪ್ಪ, ಹಂಸವೇಣಿ, ಲಲಿತಮ್ಮ, ನಾಗಪ್ಪ, ಸಿಬ್ಬಂದಿ ಸತೀಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts