More

    ಭೂಪಟದಲ್ಲಿ ದುರ್ಗಕ್ಕೆ ಪ್ರಮುಖ ಸ್ಥಾನ

    ನಾಯಕನಹಟ್ಟಿ: ಪ್ರಪಂಚ ಮಟ್ಟದ ವೈಜ್ಞಾನಿಕ ಸಂಸ್ಥೆಗಳು ಚಿತ್ರದುರ್ಗ ಜಿಲ್ಲೆಯಲ್ಲಿರುವುದರಿಂದ ಜಿಲ್ಲೆಯ ಮಹತ್ವ ಹೆಚ್ಚಾಗಿದೆ ಎಂದು ಮಾಜಿ ಸಂಸದ ಜೆ.ಜನಾರ್ಧನಸ್ವಾಮಿ ಅಭಿಪ್ರಾಯಪಟ್ಟರು.

    ಸಮೀಪದ ಭಾರತೀಯ ವಿಜ್ಞಾನ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಶುಕ್ರವಾರ ಐಐಎಸ್ಸಿ ತರಬೇತಿಯಿಂದ ವಿದ್ಯಾರ್ಥಿಗಳ ಮೇಲಾಗಿರುವ ಪರಿಣಾಮ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

    ಈ ಸಂಸ್ಥೆಯನ್ನು ನಮ್ಮ ಜಿಲ್ಲೆಯಲ್ಲಿಯೇ ಉಳಿಸಬೇಕೆಂಬ ಛಲದಿಂದ ಪ್ರಧಾನಿ ಸೇರಿ ನಾನಾ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿದ್ದೆ. ಅವರ ಮನವೊಲಿಕೆಯಿಂದಾಗಿ ಐಐಎಸ್ಸಿ ಇಲ್ಲಿ ಸ್ಥಾಪನೆ ಆಯಿತು. ಇದರಿಂದಾಗಿ ಆಂಧ್ರಪ್ರದೇಶದ ಜನಪ್ರತಿನಿಧಿಗಳ ವಿರೋಧ ಎದುರಿಸಬೇಕಾಯಿತು ಎಂದರು.

    ಐಐಎಸ್ಸಿ ಪ್ರತಿಭಾ ವಿಕಾಸ ಕೇಂದ್ರದ ಮುಖ್ಯಸ್ಥ ಪ್ರೊ.ಎಂ.ಎಸ್.ಹೆಗಡೆ ಮಾತನಾಡಿ. ರಾಜ್ಯದ 8318 ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರಿಗೆ ಇಲ್ಲಿನ ಕ್ಯಾಂಪಸ್‌ನಲ್ಲಿ ತರಬೇತಿ ನೀಡಲಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಇಲ್ಲಿನ ತರಬೇತಿ ಪೂರಕವಾಗಿದೆ ಎಂದು ತಿಳಿಸಿದರು.

    ರಾಜಕೀಯವಾಗಿ ಹಿಂದೆ ಸರಿದಿಲ್ಲ: ಮುಂದಿನ 10-20 ವರ್ಷಗಳಲ್ಲಿ ಇಡೀ ಕ್ಯಾಂಪಸ್‌ನ ಚಿತ್ರಣ ದೊಡ್ಡ ಪ್ರಮಾಣದಲ್ಲಿ ಬದಲಾಗಲಿದೆ. 50 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲು ಯೋಜನೆಗಳಿಗೆ ಆರಂಭ ದೊರಕಿಸಿಕೊಟ್ಟ ಸಮಾಧಾನ ನನಗಿದೆ. ನಾನು ರಾಜಕೀಯವಾಗಿ ಹಿಂದೆ ಸರಿದಿಲ್ಲ. ಮುಂದಿನ ದಿನಗಳಲ್ಲಿ ಇಲ್ಲಿನ ಪ್ರದೇಶಕ್ಕೆ ಅಗತ್ಯ ಕಾರ್ಯಗಳನ್ನು ನಿರ್ವಹಿಸುವುದಾಗಿ ಜನಾರ್ಧನಸ್ವಾಮಿ ಹೇಳಿದರು.

    ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮಾಜಿ ಕುಲಪತಿ ಮಹೇಶ್ವರಪ್ಪ, ಐಐಎಸ್ಸಿ ಇಂಜಿನಿಯರ್ ಹೇಮಂತ್, ಬೆಸ್ಕಾಂ ನಿವೃತ್ತ ಕಾರ್ಯದರ್ಶಿ ತಿಪ್ಪೇಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts