More

    ವಿದ್ಯಾರ್ಥಿಗಳು ಮೌಢ್ಯದಿಂದ ದೂರಿವಿರಲಿ

    ಭದ್ರಾವತಿ: ಮೂಢನಂಬಿಕೆಗಳಿಂದ ದೂರವಿದ್ದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ನೈಜವಾದ ಬದುಕು ಕಟ್ಟಿಕೊಳ್ಳಬೇಕು ಎಂದು ಬಿಇಒ ಎ.ಕೆ.ನಾಗೇಂದ್ರಪ್ಪ ಸಲಹೆ ನೀಡಿದರು.

    ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಪ್ರಯೋಗಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು ಎಂದರು.
    ಸರ್ ಸಿ.ವಿ.ರಾಮನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಉಪಪ್ರಾಚಾರ್ಯರಾದ ಟಿ.ಎಸ್.ಸುಮನ, ತೀರ್ಪುಗಾರರಾದ ಸಂಪನ್ಮೂಲ ಶಿಕ್ಷಕ ಮುಕ್ತೇಶ್, ಬೊಮ್ಮನಕಟ್ಟೆ ಕ್ಲಸ್ಟರ್‌ನ ಲಕ್ಷ್ಮೀ, ವಿಜ್ಞಾನ ಶಿಕ್ಷಕರಾದ ಜಯಲಕ್ಷ್ಮೀ, ನಾಗರಾಜು, ಫರ್ಜಾನಾ ಇತರರಿದ್ದರು.
    ಹಿರಿಯೂರು ಶಾಲೆ: ಸ್ವಂತ ಅಧ್ಯಯನ, ಪರಿಶ್ರಮದ ಫಲದಿಂದ ಹಲವು ರಹಸ್ಯಗಳನ್ನು ಅರಿತು ಸ್ವತಂತ್ರ ಸಂಶೋಧನಾ ಶಕ್ತಿಯಿಂದ ಭಾರತಕ್ಕೆ ವಿಶ್ವದ ಶ್ರೇಷ್ಠ ನೊಬೆಲ್ ಪ್ರಶಸ್ತಿಯನ್ನು ಭೌತಶಾಸ್ತ್ರಕ್ಕೆ ತಂದುಕೊಟ್ಟ ಅದ್ಭುತ ವಿಜ್ಞಾನಿ ಸರ್ ಸಿ.ವಿ.ರಾಮನ್ ಎಂದು ಹಿರಿಯೂರಿನ ಎಸ್‌ಬಿಎಂಆರ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಹರೋನಹಳ್ಳಿ ಸ್ವಾಮಿ ಬಣ್ಣಿಸಿದರು.
    ಎಸ್‌ಬಿಎಂಆರ್ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿ.ವಿ.ರಾಮನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
    ರಾಮನ್ ಅವರು ತಮ್ಮ ತಂದೆಯ ಸಂಗೀತ ಮತ್ತು ಪುಸ್ತಕಗಳಿಂದ ಪ್ರಭಾವಿತರಾದವರು. ವೃತ್ತಿ ಜತೆಗೆ ಸಂಶೋಧನಾ ವಿಚಾರಗಳಿಗೆ ಹೆಚ್ಚು ಸಮಯ ನೀಡುತ್ತಿದ್ದರು. ಬದುಕು ಮತ್ತು ಸಾಧನೆ ವಿದ್ಯಾರ್ಥಿಗಳಿಗೆ ಆದರ್ಶ ಎಂದರು. ವಿಜ್ಞಾನ ಶಿಕ್ಷಕಿ ಜಾನಿ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts