More

    ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ; ಡಾ. ಆರ್.ಎಂ. ಕುಬೇರಪ್ಪ

    ರಾಣೆಬೆನ್ನೂರ: ವಿದ್ಯಾರ್ಥಿಗಳು ಇಂದಿನ ದಿನಮಾನದಲ್ಲಿ ವೈಜ್ಞಾನಿಕ ಹಾಗೂ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಬಿಎಜೆಎಸ್‌ಎಸ್ ಸಮೂಹ ಸಂಸ್ಥೆ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಹೇಳಿದರು.
    ನಗರದ ಬಿಎಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಕಾಲೇಜ್‌ನಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಮಾಟ ಮಂತ್ರಗಳಿಂದ ದೂರವಿದ್ದು ವಿಜ್ಞಾನದೆಡೆಗೆ ಬಂದು ವೈಚಾರಿಕ ಮನೋಭಾವನೆ ರೂಢಿಸಿಕೊಳ್ಳಬೇಕು. ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂದರು.
    ಡಾ. ಎಂ.ಎಂ. ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ. ಕೊಟ್ರೇಶ ವಿಜ್ಞಾನದ ಕುರಿತು ಉಪನ್ಯಾಸ ನೀಡಿದರು.
    ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಎಚ್.ಎ. ಭಿಕ್ಷಾವರ್ತಿಮಠ, ಎಲ್. ರಾಮಚಂದ್ರರಾವ, ಪರಶುರಾಮ ಪವಾರ, ಶೋಭಾ ಕುಂಚೂರ, ಉಪ ಪ್ರಾಚಾರ್ಯ ಶಿವಕುಮಾರ ಬಿಸಲಳ್ಳಿ, ಡಾ. ಎಚ್.ಐ. ಬ್ಯಾಡಗಿ, ಮುತ್ತುರಾಜ ಸಿದ್ದಣ್ಣನವರ, ಮೇಘನಾ ಮಾಕನೂರ, ಬಿ.ಬಿ. ಆಯೀಷಾ, ಮೇಘಾ ವಿಭೂತಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts