More

    ಗುಗ್ಗರಿ ಹಬ್ಬಕ್ಕೆ ಸಂಭ್ರಮದ ತೆರೆ

    ನಾಯಕನಹಟ್ಟಿ: ಸಮೀಪದ ಜೋಗಿಹಟ್ಟಿಯಲ್ಲಿ ಕಾಡುಗೊಲ್ಲ ಸಂಸ್ಕೃತಿ ಬಿಂಬಿಸುವ ಬಾಲರಂಗನಾಥ ಸ್ವಾಮಿ ಜಾತ್ರೋತ್ಸವ (ಗುಗ್ಗರಿ ಹಬ್ಬ) ಕಳೆದ ನಾಲ್ಕು ದಿನಗಳಿಂದ ವಿಜೃಂಭಣೆಯಿಂದ ಜರುಗಿ ಮಂಗಳವಾರ ದೇವರನ್ನು ಗುಡಿತುಂಬಿಸುವ ಕಾರ್ಯದೊಂದಿಗೆ ಸಂಪನ್ನಗೊಂಡಿತು.

    ಕಳೆದ ಶನಿವಾರ ಹಲಗದ ಪೂಜೆ, ಹುತ್ತದ ಪೂಜೆಯೊಂದಿಗೆ ಜಾತ್ರೆ ಆರಂಭಗೊಂಡಿತ್ತು. ಮಂಗಳವಾರ ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಜೋಗಿಹಟ್ಟಿ ಪಕ್ಕದ ಅಜ್ಜನಗುಡ್ಡೆಯೆಂದೇ ಕರೆಯಲಾಗುವ ಆಲದ ಮರದ ಬಳಿ ಕರೆದಂತು ಪ್ರತಿಷ್ಠಾಪಿಸಿ ನೈವೇದ್ಯ ಅರ್ಪಿಸಿ ಗುಡಿಕಟ್ಟಿನ ಅಣ್ಣತಮ್ಮಂದಿರಿಗೆ ಹಂಚಲಾಯಿತು. ನಂತರ ನೂರಾರು ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿತು.

    ಆಲದ ಮರದ ಬಳಿ ಪೂರ್ವಿಕರ ಸಮಾಧಿ ಇದ್ದು ಅವುಗಳಿಗೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಯೊಂದಿಗೆ ಉತ್ಸವ ಮೂರ್ತಿಗಳನ್ನು ಗ್ರಾಮಕ್ಕೆ ಕರೆತಂದು ಮಣೇವು ಆಡುವುದು, ಮೊಸರು ಕುಡಿಯುವ ಹಾಗೂ ಭಂಡಾರವಾಡುವ ಪೂಜಾ ವಿಧಿಗಳು ಮುಗಿದ ಬಳಿಕ ಶ್ರೀಸ್ವಾಮಿಯನ್ನು ಗುಡಿತುಂಬಿಸಲಾಯಿತು. ಗ್ರಾಮದ ಹಿರಿಯರಾದ ಗೋವಿಂದಪ್ಪ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಮತ್ತಿತರೆಡೆಯಿಂದ ನೂರಾರು ಭಕ್ತರು, ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts