More

    ಹೊಸ ಶೇಂಗಾ ತಳಿ ಬೆಳೆಯಲು ಸೂಚನೆ

    ನಾಯಕನಹಟ್ಟಿ: ಹವಾಮಾನಕ್ಕೆ ಹೊಂದಿಕೊಳ್ಳುವ, ಹೊಸದಾಗಿ ಆವಿಷ್ಕಾರಗೊಂಡ ಶೇಂಗಾ ತಳಿಯ ಬೀಜ ಬಿತ್ತನೆಗೆ ರೈತರು ಮುಂದಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಮೋಹನ್‌ಕುಮಾರ್ ಹೇಳಿದರು.

    ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಶೇಂಗಾ ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಈ ಭಾಗದ ಶೇ.90ರಷ್ಟು ರೈತರು ಶೇಂಗಾ ಬೆಳೆಯುತ್ತಾರೆ. ಹಲವು ವರ್ಷಗಳಿಂದಲೂ ಕೇವಲ ಟಿಎಂವಿ-2 ತಳಿಯ ಶೇಂಗಾ ಬೆಳೆಯುತ್ತಿದ್ದಾರೆ. ದಿನ ಕಳೆದಂತೆ ಹಳೇ ತಳಿಯ ಬೀಜಗಳು ಇಳುವರಿ ನೀಡುವಲ್ಲಿ ವಿಫಲವಾಗುತ್ತವೆ ಎಂದರು.

    ಆದ್ದರಿಂದ ಹವಾಮಾನಕ್ಕೆ ಹೊಂದಿಕೊಂಡು ಅಲ್ಪ ತೇವಾಂಶ, ಕಡಿಮೆ ಮಳೆಗೆ ಅಧಿಕ ಇಳುವರಿ ಕೊಡುವ ನೂತನ ಶೇಂಗಾ ತಳಿಯನ್ನು ಇಲಾಖೆ ಆವಿಷ್ಕರಿಸಿದೆ. ರೈತರು ಈ ಹೊಸತಳಿ ಬಿತ್ತನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

    ರೈತ ಮುಖಂಡ ಪ್ರಕಾಶ್, ಕೆನರಾ ಬ್ಯಾಂಕ್ ಕೃಷಿ ವಿಸ್ತರಣಾಧಿಕಾರಿ ಕೆ.ಸಂತೋಷ್, ತಾಪಂ ಸದಸ್ಯ ತಿಪ್ಪೇಸ್ವಾಮಿ, ಕೃಷಿಅಧಿಕಾರಿಗಳಾದ ಹೇಮಂತ್‌ನಾಯ್ಕ, ಶ್ರೀನಿವಾಸ್, ಗಂಗಮ್ಮ, ಅನುವುಗಾರರಾದ ಮಚ್ಚೇಂದ್ರಪ್ಪ, ಪಾಲಯ್ಯ ಇದ್ದರು.

    ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದ್ರೆ ಕ್ರಮ: ಖಾಸಗಿ ರಸಗೊಬ್ಬರ ಮಾರಾಟಗಾರರು ರಸಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಕೆ.ಎಂ.ಪಂಚಾಕ್ಷರಿಸ್ವಾಮಿ ಆರೋಪಿಸಿದರು. ಇದಕ್ಕೆ ಕೃಷಿ ಅಧಿಕಾರಿಗಳು, ಅಂತವರ ವಿರುದ್ಧ ಲಿಖಿತ ದೂರ ದಾಖಲಿಸಿದರೆ ಸ್ಥಳದಲ್ಲೇ ಪರವಾನಗಿ ಮತ್ತು ಅವರ ನೋಂದಣಿ ಅಮಾನತು ಮಾಡಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts