More

    ರೈತಪರ ಯೋಜನೆ ಅರ್ಹರಿಗೆ ತಲುಪಲಿ

    ನಾಯಕನಹಟ್ಟಿ: ರೈತಪರ ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಠಾನಗೊಳಿಸಿದ್ದು, ಅವುಗಳನ್ನು ಅರ್ಹರಿಗೆ ತಲುಪುವಂತೆ ಜಾಗ್ರತೆ ಕಾರ್ಯಕರ್ತರು ವಹಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ ಹೇಳಿದ್ದಾರೆ.

    ಪ್ರಧಾನಿ ಮೋದಿ ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಹೊರಮಠ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಜ.2ರಂದು ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಆಗಮಿಸಿ ರೈತ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದ್ದಾರೆ. ಅತ್ಯುತ್ತಮ ಸಾಧನೆ ತೋರಿದ 25 ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವಿದೆ. ಮೊಳಕಾಲ್ಮೂರಿನಿಂದ ಹೆಚ್ಚಿನ ಸಂಖ್ಯೆಯಲಿ ರೈತರನ್ನು ಕರೆತರಬೇಕು ಎಂದರು.

    ಬಿಜೆಪಿ ಸರ್ಕಾರ ರೈತರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಬದ್ಧತೆ ಹೊಂದಿದೆ. ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯ 614 ಕೋಟಿ ರೂ. ಟೆಂಡರ್ ಅಂತಿಮಗೊಂಡಿದೆ. ಇದರ ಜತೆಗೆ ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ಕುಡಿಯುವ ನೀರು ಪೂರೈಕೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

    ನಾಯಕನಹಟ್ಟಿ ಮಂಡಲ ಅಧ್ಯಕ್ಷ ರಾಮರೆಡ್ಡಿ ಮಾತನಾಡಿ, ಮೋದಿಯವರಂಥಹ ದಿಟ್ಟ ನಾಯಕತ್ವ ದೇಶಕ್ಕೆ ದೊರಕಿದೆ. ಹೀಗಾಗಿ ನಾವು ನಮ್ಮಲ್ಲಿರುವ ವೈಯುಕ್ತಿಕ ಹಿತಾಸಕ್ತಿ ಮರೆತು ದೇಶಕ್ಕಾಗಿ ದುಡಿಯಬೇಕು ಎಂದರು.

    ಮುಖಂಡರಾದ ಸಿ.ಬಿ.ಮೋಹನ್, ಡಿ.ಆರ್.ಬಸವರಾಜ್, ಪರಮೇಶ್ವರಪ್ಪ, ಮಲ್ಲೇಶ್, ಬೋರಣ್ಣ, ತಿಮ್ಮಣ್ಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts