More

    ದಶಕಗಳಿಂದಲೂ ಪೊಲೀಸರು ಹುಡುಕುತ್ತಿದ್ದ ನಕ್ಸಲನನ್ನು ರಕ್ಷಾ ಬಂಧನದಂದೇ ಶರಣಾಗುವಂತೆ ಮಾಡಿದ್ದು ಆತನ ಸೋದರಿ…!

    ದಂತೇವಾಡ: ಇಂದು ರಕ್ಷಾಬಂಧನ. ಈ ದಿನ ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟುವುದು, ಅದಕ್ಕೆ ಪ್ರತಿಯಾಗಿ ಸೋದರರು ತಮ್ಮ ಪ್ರೀತಿಯ ಅಕ್ಕ-ತಂಗಿಗೆ ಉಡುಗೋರೆ ಕೊಡುವುದು ಸಂಪ್ರದಾಯ. ಆದರೆ ಇಲ್ಲೊಬ್ಬ ನಕ್ಸಲ್ ತನ್ನ ತಂಗಿಗೆ ವಿಭಿನ್ನ ಉಡುಗೋರೆ ನೀಡಿದ್ದಾನೆ. ಅದೂ ಆಕೆಯೇ ಕೇಳಿ ಪಡೆದಿದ್ದು…!

    ಛತ್ತೀಸ್​ಗಢ್​ದ ದಂತೇವಾಡದಲ್ಲಿ ಘಟನೆ ನಡೆದಿದೆ. ಈ ನಕ್ಸಲ್ ರಕ್ಷಾ ಬಂಧನಕ್ಕಾಗಿ ಕದ್ದುಮುಚ್ಚಿ ಮನೆಗೆ ಬಂದಿದ್ದ. ಸೋದರಿಯ ಬಳಿ ರಾಖಿ ಕಟ್ಟಿಸಿಕೊಳ್ಳಲು ಆಗಮಿಸಿದ್ದ. ಈತ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ. ಇವನ ತಲೆಗೆ 8 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದರು.

    ರಕ್ಷಾಬಂಧನದ ದಿನ ಪೊಲೀಸರಿಗೆ ಕಾಣದಂತೆ ಮನೆಗೆ ಬಂದಿದ್ದ ಇವನನ್ನು ಸೋದರಿ ಮತ್ತೆ ಕಾಡಿಗೆ ಹೋಗದಂತೆ ಬೇಡಿಕೊಂಡಿದ್ದಾಳೆ. ಅಷ್ಟೇ ಅಲ್ಲ ಪೊಲೀಸರಿಗೆ ಶರಣಾಗು..ಇದೇ ನೀನು ನನಗೆ ರಕ್ಷಾ ಬಂಧನದಂದು ಕೊಡುವ ಉಡುಗೋರೆ ಎಂದು ಕೇಳಿದ್ದಾಳೆ. ಸೋದರಿಯ ಮಾತಿಗೆ ಬೆಲೆ ಕೊಟ್ಟ ನಕ್ಸಲನೀಗ ಪೊಲೀಸರಿಗೆ ಶರಣಾಗಿದ್ದಾನೆ.

    ದಂತೇವಾಡಾದ ಪಲ್ನಾರ್​ ಗ್ರಾಮದ ನಿವಾಸಿಯಾಗಿದ್ದ ಈತನ ಹೆಸರು ಮಲ್ಲಾ. 12 ವರ್ಷದವನಾಗಿದ್ದಾಗಲೇ ಮನೆಯಿಂದ ಓಡಿ ಹೋಗಿ ನಕ್ಸಲ್​ ಚಳವಳಿಗೆ ಸೇರಿಕೊಂಡಿದ್ದ. ಇದೀಗ 14 ವರ್ಷಗಳ ನಂತರ ಪೊಲೀಸರಿಗೆ ಶರಣಾಗಿದ್ದಾನೆ.

    ಇಷ್ಟು ವರ್ಷ ಆತ ತನ್ನ ಮನೆಗೆ ಬಂದಿರಲಿಲ್ಲ. ಇದೀಗ ಸೋದರಿ ಲಿಂಗೈಳನ್ನು ನೋಡಲು ರಕ್ಷಾ ಬಂಧನದಂದೇ ಆಗಮಿಸಿದ್ದ. ಅಣ್ಣನನ್ನು ನೋಡಿದ ಲಿಂಗೈ ಖುಷಿಯಾಗಿದ್ದಲ್ಲದೆ, ಮತ್ತೆ ಕಾಡಿಗೆ ಹೋಗಲು ಬಿಡಲಿಲ್ಲ. ಪೊಲೀಸರಿಗೆ ಶರಣಾಗು ಎಂದು ಮನವಿ ಮಾಡಿದಳು. ಅಷ್ಟೇ ಅಲ್ಲ, ಇತ್ತೀಚೆಗೆ ನಕ್ಸಲರ ಹಾವಳಿ ಜಾಸ್ತಿಯಾಗಿದೆ. ಹೀಗೆ ಆದರೆ ಒಂದಲ್ಲ ಒಂದು ದಿನ ಪೊಲೀಸರ ಗುಂಡೇಟಿಗೆ ನೀನು ಬಲಿಯಾಗುತ್ತೀಯಾ. ನನಗೆ ನಿನ್ನನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಹೇಳಿದಳು. ತಂಗಿಯ ಮಾತಿಗೆ ಮಲ್ಲ ಬೆಲೆ ಕೊಟ್ಟಿದ್ದಾನೆ. ಇದನ್ನು ಓದಿ: ಆಸ್ಪತ್ರೆಯಲ್ಲಿ ಕಾಲ ಕಳೆಯೋದು ಕಷ್ಟ ಎಂದು ಸಿಎಂ ಯಡಿಯೂರಪ್ಪ ಏನ್​ ಮಾಡಿದ್ರು ಗೊತ್ತಾ?

    ಮಲ್ಲ ಶರಣಾಗಿದ್ದನ್ನು ದಂತೇವಾಡಾದ ಎಸ್​ಪಿ ಅಭಿಷೇಕ್​ ಪಲ್ಲವ್​ ಖಚಿತಪಡಿಸಿದ್ದಾರೆ. ಈತ ಅನೇಕ ದೊಡ್ಡದೊಡ್ಡ ಕ್ರೈಂಗಳಲ್ಲಿ ಪಾಲ್ಗೊಂಡಿದ್ದಾನೆ. ಒಂದು ದಶಕಗಳಿಂದಲೂ ಆತನನ್ನು ಹುಡುಕುತ್ತಿದ್ದೆವು. ಇದೀಗ ಅವನೇ ಬಂದು ಶರಣಾಗಿದ್ದಾನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಕೈತುಂಬಾ ಲಾಭ ತಂದುಕೊಡುತ್ತೇನೆ, ಹಣ ಹೂಡಿ ಎಂದ ಬಾಲಿವುಡ್ ಭೂಪ ಹಾಕಿದ್ದು ಪಂಗನಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts