ಸಿನಿಮಾದಲ್ಲಿ ಹೂಡಿಕೆ ಮಾಡಿ, ವಾರಕ್ಕೊಮ್ಮೆ ಶೇಕಡ 70ಕ್ಕೂ ಹೆಚ್ಚು ಆದಾಯಗಳಿಸಿ ಎನ್ನುತ್ತಿದ್ದ ಪತಿ, ಪತ್ನಿ!

ನವದೆಹಲಿ: ಹೂಡಿಕೆಗೆ ಹೆಚ್ಚಿನ ಲಾಭ ತಂದುಕೊಡುತ್ತೇನೆಂದು ಕೋಟ್ಯಂತರ ರೂ. ವಂಚಿಸಿದ ಬಾಲಿವುಡ್ ನಿರ್ಮಾಪಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮನರಂಜನಾ ಉದ್ಯಮದಲ್ಲಿ ಹೂಡಿಕೆಗೆ ಹೆಚ್ಚಿನ ಆದಾಯದ ತಂದುಕೊಡುವುದಾಗಿ ಆಮಿಷವೊಡ್ಡಿ ನೂರಾರು ಜನರನ್ನು ವಂಚಿಸಿದ ಆರೋಪದ ಮೇಲೆ ಬಾಲಿವುಡ್ ಚಲನಚಿತ್ರ ನಿರ್ಮಾಪಕನೋರ್ವನನ್ನು ದೆಹಲಿ ಪೊಲೀಸ್ ಸಂಸ್ಥೆಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು (ಇಒಡಬ್ಲ್ಯೂ) ಬಂಧಿಸಿದ್ದಾರೆ. ಚಂದ್ರಕಾಂತ್ ಶರ್ಮಾ ಆರೋಪಿ. ಆತ ಸಿನೆಮಿರ್ಚಿ ಪ್ರೊಡಕ್ಷನ್ಸ್ ಅಡಿ ಯೋಜನೆಗಳಲ್ಲಿ ಮಾಡಿದ ಹೂಡಿಕೆಯ ಮೇಲೆ ವಾರಕ್ಕೊಮ್ಮೆ ಶೇಕಡಾ 70 ಕ್ಕಿಂತ ಹೆಚ್ಚಿನ ಆದಾಯವನ್ನು ನೀಡುವುದಾಗಿ … Continue reading ಸಿನಿಮಾದಲ್ಲಿ ಹೂಡಿಕೆ ಮಾಡಿ, ವಾರಕ್ಕೊಮ್ಮೆ ಶೇಕಡ 70ಕ್ಕೂ ಹೆಚ್ಚು ಆದಾಯಗಳಿಸಿ ಎನ್ನುತ್ತಿದ್ದ ಪತಿ, ಪತ್ನಿ!