ಛತ್ತೀಸಗಢದಲ್ಲಿ ಸೈನಿಕರ ಮೇಲೆ ನಡೆದ ನಕ್ಸಲ್ ದಾಳಿ ಹೇಯ ಕೃತ್ಯವಾಗಿದ್ದು, ನಕ್ಸಲ್ವಾದದ ಉಗ್ರ ಸ್ವರೂಪವನ್ನು ಬಟಾಬಯಲಾಗಿಸಿದೆ. ದೇಶದ ರಕ್ಷಕರನ್ನು ಕೊಲ್ಲುವ ಇಂತಹ ದೇಶದ್ರೋಹಿಗಳನ್ನು ನಿಗ್ರಹಿಸಬೇಕಾದದ್ದು ಇಂದಿನ ಕಾಲಘಟ್ಟದ ತುರ್ತಾಗಿದೆ. ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆಗೆ ಎದುರಾಗುವ ವಿಪತ್ತುಗಳನ್ನು ಕಡೆಗಣಿಸುವುದು ಸರ್ವಥಾ ಸರಿಯಲ್ಲ. ಕಡೆಗಣಿಸುವುದರಿಂದ ಅಂತಹ ಕೃತ್ಯಗಳು ಹೆಚ್ಚಾಗಲು ಪ್ರೋತ್ಸಾಹ ನೀಡಿದಂತಾಗುತ್ತದೆ.
ಛತ್ತೀಸ್ಗಢ, ಮಹಾರಾಷ್ಟ್ರದಲ್ಲಿ ನಕ್ಸಲರ ದೊಡ್ಡ ಜಾಲವೇ ಸಕ್ರಿಯವಾಗಿದ್ದು, ಶಾಂತಿ, ಕಾನೂನು ಸುವ್ಯವಸ್ಥೆಗೆ ಕಂಟಕವಾಗಿದೆ. ಆದ್ದರಿಂದ ದೇಶದ ಆಡಳಿತ ವ್ಯವಸ್ಥೆ ಶೀಘ್ರವಾಗಿ ಸೂಕ್ತ ಕ್ರಮವನ್ನು ಕೈಗೊಳ್ಳಲೇಬೇಕಾಗಿದೆ. ಇನ್ನು ಮುಂದೆ ಇಂತಹ ದುರಂತಗಳು ನಡೆಯದಂಥ ವಾತಾವರಣವನ್ನು ಸೃಷ್ಟಿಸುವ ಮೂಲಕ ಹುತಾತ್ಮರಾದ ಸೈನಿಕರ ಬಲಿದಾನವನ್ನು ಸಾರ್ಥಕಗೊಳಿಸಬೇಕಾಗಿದೆ.
| ವಿಶ್ವನಾಥ ಎನ್. ನೇರಳಕಟ್ಟೆ