More

    ನಾಟಿಕೋಳಿ ದರ ಬಲು ತುಟ್ಟಿ!

    | ಜಗದೀಶ ಹೊಂಬಳಿ ಬೆಳಗಾವಿ

    ಕರೊನಾ ಇಫೆಕ್ಟ್‌ನಿಂದಾಗಿ ನಾಟಿ ಕೋಳಿಗಳ ದರ ಗಗನಕ್ಕೆ ಜಿಗಿದಿದೆ. ಫಾರ್ಮ್ ಕೋಳಿಗಳಿಂದ ಕರೊನಾ ವೈರಸ್ ಹರಡುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಬಹಳಷ್ಟು ಜನರು ನಾಟಿ ಕೋಳಿಗಳಿಗೆ ಮುಗಿ ಬೀಳುತ್ತಿದ್ದಾರೆ. ಇದರಿಂದ ನಾಟಿ ಕೋಳಿಗಳ ಮಾಲೀಕರಿಗೆ, ವ್ಯಾಪಾರಸ್ಥರಿಗೆ ಲಾಟರಿ ಹೊಡೆದಂತಾಗಿದೆ.

    ಈ ಮೊದಲು 400 ರೂ. ದರವಿದ್ದ ನಾಟಿ ಕೋಳಿಗಳ ಬೆಲೆಯೀಗ 700ರಿಂದ 800 ರೂಪಾಯಿಗೆ ಏರಿಕೆಯಾಗಿದೆ. ಭರಪೂರ ಬೆಲೆ ಏರಿಕೆಯಿಂದಾಗಿ ನಾಟಿ ಕೋಳಿಗಳು ಇರುವವರು ಹಾಗೂ ವ್ಯಾಪಾರಸ್ಥರು ರಸ್ತೆಬದಿಯಲ್ಲೂ ಇದೀಗ ಕೋಳಿಗಳನ್ನು ಮಾರಾಟ ಮಾಡುತ್ತಿದ್ದಾರೆ.

    ಕರೊನಾ ವೈರಸ್ ವದಂತಿ ಹಿನ್ನೆಲೆಯಲ್ಲಿ ಫಾರ್ಮ್ ಕೋಳಿಗಳನ್ನು ಜಿಲ್ಲೆಯಾದ್ಯಂತ ಜೀವಂತ ಮುಚ್ಚುತ್ತಿದ್ದಾರೆ. ಹೀಗಾಗಿ ಕೋಳಿಮಾಂಸ ಪ್ರಿಯರು ಫಾರ್ಮ್ ಕೋಳಿ ಖರೀದಿ ಮಾಡುವುದನ್ನು ಬಿಟ್ಟು ನಾಟಿ ಕೋಳಿಗಳ ಮೊರೆ ಹೋಗಿದ್ದಾರೆ. ಇದರಿಂದಾಗಿ ಕೋಳಿಗಳ ದರ ಗಗನಕ್ಕೇರಿದೆ.

    ಹಳ್ಳಿಗಳತ್ತ ಹೋಟೆಲ್ ಸಿಬ್ಬಂದಿ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಾಟಿ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ನಗರದಲ್ಲಿ ನಾಟಿ ಕೋಳಿಗಳ ಲಭ್ಯತೆ ಇಲ್ಲ. ಹೀಗಾಗಿ ಮಾಂಸಾಹಾರಿ ಹೋಟೆಲ್, ದಾಬಾ ಸಿಬ್ಬಂದಿಗಳು ನಾಟಿ ಕೋಳಿಗಳ ಖರೀದಿಗೆ ಹಳ್ಳಿಗಳಿಗೆ ತಿರುಗುತ್ತಿದ್ದಾರೆ. ಸಿಬ್ಬಂದಿಯು ಗ್ರಾಮೀಣ ಪ್ರದೇಶದಿಂದ ನಾಟಿ ಕೋಳಿಗಳನ್ನು ತಂದು ಗ್ರಾಹಕರನ್ನು ಸೆಳೆಯುತ್ತಿದ್ದಾರೆ.

    ಕರೊನಾ ಹಿನ್ನೆಲೆಯಲ್ಲಿ ಚಿಕನ್ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬಹಳಷ್ಟು ಗ್ರಾಹಕರು ಜವಾರಿ ಕೋಳಿ ಊಟ ಕೇಳುತ್ತಿದ್ದಾರೆ. ತುಟ್ಟಿಯಾದರೂ ಪರವಾಗಿಲ್ಲ ಜವಾರಿ ಕೋಳಿ ತರಬೇಕೆಂದರೆ ನಗರದಲ್ಲಿ ಸಿಗುತ್ತಿಲ್ಲ. ಫಾರ್ಮ್ ಕೋಳಿಗಳ ಮಾಂಸ ತಿಂದರೆ ಕರೊನಾ ಬರುತ್ತದೆ ಎಂಬ ವದಂತಿ ನಿಲ್ಲುವವರೆಗೆ ವ್ಯಾಪಾರ ಡಲ್ಲೇ ಇರುತ್ತದೆ ಎನ್ನುತ್ತಾರೆ ಬೆಳಗಾವಿಯ ಮಾಂಸಾಹಾರಿ ಹೋಟೆಲ್ ಮಾಲೀಕರು.

    ಕೋಳಿ ಒಡೆಯನಿಗೆ ಬಹು ಬೇಡಿಕೆ

    ಬೆಳಗಾವಿ ನಗರದ ಜನದಟ್ಟನೆ ಪ್ರದೇಶದಲ್ಲಿ ನಾಟಿ ಕೋಳಿಗಳನ್ನು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ಖರೀದಿಗೆ ಜನರು ಮುಗಿ ಬೀಳುತ್ತಿರುವುದಿಂದ ವ್ಯಾಪಾರಸ್ಥರು ಹೆಚ್ಚಿನ ದರ ನಿಗದಿ ಮಾಡುತ್ತಿದ್ದಾರೆ. ಾರ್ಮ್ ಕೋಳಿಯ ಮಾಂಸ ಸೇವನೆಯಿಂದ ಕರೊನಾ ವೈರಸ್ ಬರುತ್ತದೆ ಎಂಬ ಸುಳ್ಳು ವದಂತಿಯಿಂದಾಗಿ ನಾಟಿ ಕೋಳಿಗೆ ಬೇಡಿಕೆ ಬಂದಿದೆ. ಮೊದಲು 400 ರೂ. ಇದ್ದ ನಾಟಿ ಕೋಳಿ ದರ ಇದೀಗ ಕರೊನಾ ವೈರಸ್ ಭೀತಿಯಿಂದಾಗಿ ಮಾಂಸಪ್ರಿಯರು 700ರಿಂದ 800 ರೂ. ವರೆಗೆ ದರ ಇದ್ದರೂ ನಾಟಿ ಕೋಳಿ ಖರೀದಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಈಗ ನಾಟಿ ಕೋಳಿ ಒಡೆಯನಿಗೆ ಬಹು ಬೇಡಿಕೆ ಬಂದಿದೆ.

    ನಮ್ ಮನ್ಯಾಗಿದ್ದ ಎರಡು ನಾಟಿ ಕೋಳಿ 500 ರೂಪೈಗ ಮಾರಾಟ ಆಗ್ಯಾವ್ರೀ. ಎರಡು ಹುಂಜಕ್ಕೆ 800 ರೂ. ಕೊಟ್‌ತಗೊಂಡು ಹೋಗ್ಯಾರ‌್ರೀ. ಇಷ್ಟ ದುಬಾರಿ ದರಕ್ಕೆ ಮಾರಾಟ ಆಗಿದ್ದ ನಾ ಎಂದೂ ಕಂಡಿರಲಿಲ್ರೀ.
    | ನಾಗಮ್ಮ ನಾಟಿ ಕೋಳಿ ಮಾಲಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts