More

    ‘ನಾಟು ನಾಟು’ ಶೂಟು ನಡೆದದ್ದು ಯುದ್ಧ ಪೀಡಿತ ಯೂಕ್ರೇನ್​ನಲ್ಲಿ..!

    ನವದೆಹಲಿ: ಗೋಲ್ಡನ್ ಗ್ಲೋಬ್ ಟ್ರೋಫಿಯನ್ನು ಗೆದ್ದ RRRನ ‘ನಾಟು ನಾಟು’ ಹಾಡಿಗೆ ಯೂಕ್ರೇನ್​ ಜೊತೆಗೆ ಹತ್ತಿರದ ಸಂಬಂಧ ಇದೆ ಎಂದು ಅನೇಕರಿಗೆ ಗೊತ್ತಿಲ್ಲ.

    ಹೌದು, ‘ನಾಟು ನಾಟು’ ಹಾಡನ್ನು ಆಗಸ್ಟ್ 2021ರಲ್ಲಿ ಯೂಕ್ರೇನ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಅದು ಕೂಡ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿಯ ಅಧಿಕೃತ ನಿವಾಸದ ಹೊರಗೆ. ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣ ಶುರು ಮಾಡುವ ಕೆಲವು ತಿಂಗಳುಗಳ ಮೊದಲು ಟ್ರ್ಯಾಕ್ ಅನ್ನು ಚಿತ್ರೀಕರಿಸಲಾಗಿತ್ತು.

    ಮಾರ್ಚ್ 2022ರಲ್ಲಿ ‘RRR’ ಪ್ರಚಾರದ ಸಮಯದಲ್ಲಿ, ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ ಯೂಕ್ರೇನ್‌ನಲ್ಲಿ ನಡೆದ ಹಾಡಿನ ಚಿತ್ರೀಕರಣವನ್ನು ನೆನಪಿಸಿಕೊಂಡು ರಷ್ಯಾ-ಯೂಕ್ರೇನ್ ಯುದ್ಧದ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದ್ದರು. “ನಾವು ಕೆಲವು ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲು ಅಲ್ಲಿಗೆ ಹೋಗಿದ್ದೆವು, ನಾವು ಚಿತ್ರೀಕರಣ ಮಾಡುವಾಗ, ಇದ್ದ ಸಮಸ್ಯೆಗಳು ಯುದ್ಧದ ರೂಪ ಪಡೆದುಕೊಳ್ಳಬಹುದು ಎಂಬ ಅಂದಾಜು ಇರಲಿಲ್ಲ. ಈಗ ನನಗೆ ಆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿದೆ” ಎಂದು ರಾಜಮೌಳಿ ಹೇಳಿಕೆ ನೀಡಿದ್ದರು.
    (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts