More

    ವಿವೇಕಾನಂದರ ಸರಳತೆ ಯುವಜನಾಂಗಕ್ಕೆ ಸ್ಫೂರ್ತಿ

    ಹುಣಸೂರು: ಸ್ವಾಮಿ ವಿವೇಕಾನಂದರ ಸರಳತೆ ಮತ್ತು ರಾಷ್ಟ್ರೀಯತೆ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ವೈ.ಮನುಪಟೇಲ್ ಅಭಿಪ್ರಾಯಪಟ್ಟರು.

    ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಷಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡ ವಿವೇಕಾನಂದರು ಅಲ್ಲಿ ಕೂಡ ಯಾವುದೇ ಐಷಾರಾಮಿ ಸೌಲಭ್ಯಗಳನ್ನು ಬಳಸಿರಲಿಲ್ಲ. ಬದಲಾಗಿ ತನ್ನ ದೇಶ, ಸಂಸ್ಕೃತಿ ಮತ್ತು ಮಾತೃಪ್ರೇಮದ ಪ್ರತೀಕವಾಗಿ ನಿಂತರು. ಇಡೀ ವಿಶ್ವ ಭಾರತದತ್ತ ತಿರುಗಿ ನೋಡುವಂತೆ ಮಾಡಿದರು. ಇಂದಿನ ಯುವಸಮೂಹ ಇಂತಹ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ತಾಯಿನಾಡು ಎನ್ನುವ ಹೆಮ್ಮೆ ನಮಗಿದ್ದರೆ ಮಾತ್ರ ವಿಶ್ವದ ಎಲ್ಲೇ ಹೋದರೂ ಬಾಳಿ ಬದುಕಬಲ್ಲೆವು. ದೇಶಕ್ಕಾಗಿ ನಾವು ಏನನ್ನು ನೀಡುತ್ತೇವೆ ಎನ್ನುವುದೇ ಮುಖ್ಯವಾಗಬೇಕೇ ಹೊರತು ದೇಶ ನನಗೇನು ನೀಡಿತು ಎನ್ನುವುದಲ್ಲ ಎಂದು ಮನಗಾಣಬೇಕೆಂದರು.

    ಪ್ರಾಂಶುಪಾಲ ನಾಗರಾಜೇ ಅರಸ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಕೆ.ಜೆ.ಲಕ್ಷ್ಮೀಕಾಂತ್ ಯುವ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ, ಉಪಾಧ್ಯಕ್ಷ ಸಿ.ಹರೀಶ್‌ಕುಮಾರ್, ಕಾರ್ಯದರ್ಶಿ ಎಚ್.ಜೆ.ಸಂದೀಪ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಟಿ.ಚಂದ್ರಶೇಖರ್, ಉಪನ್ಯಾಸಕರಾದ ಎನ್.ಜಿ.ರಮೇಶ್, ಬಿ.ಆರ್.ರಮೇಶ್, ಶಾಂತರಾಜು, ಧರ್ಮೇಗೌಡ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts