More

    ಏಪ್ರಿಲ್​ 16ಕ್ಕೆ ಲೋಕಸಭಾ ಚುನಾವಣೆ: ತಾತ್ಕಾಲಿಕ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ

    ನವದೆಹಲಿ: ರಾಮ ಮಂದಿರವೇನೋ ಉದ್ಘಾಟನೆ ಆಯಿತು. ಇದೀಗ ಎಲ್ಲರ ದೃಷ್ಠಿ ಲೋಕಸಭಾ ಚುನಾವಣೆ ಮೇಲೆ ಬಿದ್ದಿದೆ. ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ಆರಂಭಿಸಿದ್ದು, ಚುನಾವಣೆ ಯಾವಾಗ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಇದರ ನಡುವೆ ಕೇಂದ್ರ ಚುನಾವಣಾ ಆಯೋಗ ತಾತ್ಕಾಲಿಕ ದಿನಾಂಕವನ್ನು ಪ್ರಕಟಿಸಿದೆ.

    ಏಪ್ರಿಲ್​ 16ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ್ಯ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದೆ. ಆದರೆ, ಇದೇ ಫೈನಲ್​ ದಿನಾಂಕ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಈ ಸಂಬಂಧ ದೆಹಲಿಯ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದು, ಏಪ್ರಿಲ್​ 16 ತಾತ್ಕಾಲಿಕ ದಿನಾಂಕವಷ್ಟೇ, ಇದೇ ಅಧಿಕೃತ ದಿನಾಂಕವಲ್ಲ ಎಂದು ತಿಳಿಸಿದ್ದಾರೆ.

    ಲೋಕಸಭಾ ಚುನಾವಣಾ ಸಿದ್ಧತೆಗಾಗಿ ಚುನಾವಣೆಯ ಆರಂಭ ಮತ್ತು ಅಂತಿಮ ದಿನಾಂಕಗಳನ್ನು ಲೆಕ್ಕಾಚಾರ ಮಾಡುವ ಸಲುವಾಗಿ ಚುನಾವಣಾ ಆಯೋಗ ಏಪ್ರಿಲ್​ 16 ಅನ್ನು ತಾತ್ಕಾಲಿಕ ದಿನಾಂಕವನ್ನಾಗಿ ಪ್ರಕಟಿಸಿದೆ. ಈ ಸಂಬಂಧ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ನೋಟಿಫಿಕೇಶನ್​ ಹೊರಡಿಸಿದೆ.

    ದೆಹಲಿಯಲ್ಲಿರುವ ಎಲ್ಲ 11 ಜಿಲ್ಲೆಗಳ ಚುನಾವಣಾ ಅಧಿಕಾರಿಗಳಿಗೆ ನೋಟಿಫಿಕೇಶನ್​ ಹೊರಡಿಸಲಾಗಿದೆ. ದೆಹಲಿ ಮುಖ್ಯ ಚುನಾವಣಾ ಆಯುಕ್ತರ ಕಚೇರಿ ಈ ನೋಟಿಫಿಕೇಶನ್​ ಅನ್ನು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿ, ಈ ದಿನಾಂಕ ಕೇವಲ ಪ್ರಸ್ತಾಪವಷ್ಟೇ, ಇದೇ ಅಧಿಕೃತವಲ್ಲ ಎಂದು ಒತ್ತಿ ಹೇಳಿದೆ.

    ಅಂದಹಾಗೆ ಲೋಕಸಭಾ ಚುನಾವಣೆಯ ಅಧಿಕೃತ ದಿನಾಂಕ ಇನ್ನಷ್ಟೇ ಪ್ರಕಟಿಸಬೇಕಿದೆ. ಬಹುಶಃ ಏಪ್ರಿಲ್ ತಿಂಗಳಲ್ಲಿ ಆರಂಭವಾಗಿ ಬಹುಹಂತದ ಮತದಾನ ಪ್ರಕ್ರಿಯೆಯೊಂದಿಗೆ ಮೇ ತಿಂಗಳವರೆಗೂ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಳೆದ ವರ್ಷ ಅಂದರೆ, 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಏಪ್ರಿಲ್​ 11ರಂದು ಆರಂಭವಾಗಿ ಮೇ 19ರವರೆಗೆ 7 ಹಂತಗಳಲ್ಲಿ ನಡೆಯಿತು. ಮೇ 23ರಂದು ಫಲಿತಾಂಶ ಪ್ರಕಟವಾಯಿತು.

    ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಎರಡು ಬಾರಿ ಅಧಿಕಾರದ ಗದ್ದುಗೆ ಏರಿ ಸತತ 10 ವರ್ಷಗಳ ಕಾಲ ಆಡಳಿತ ನಡೆಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಪ್ರತಿಪಕ್ಷ ಕಾಂಗ್ರೆಸ್ ಕೇವಲ 52 ಸ್ಥಾನಗಳಿಗೆ ಕುಸಿದು ಹೀನಾಯ ಸೋಲು ಅನುಭವಿಸಿತು. ಈ ಬಾರಿ ಕಾಂಗ್ರೆಸ್​ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಿದೆ. ಇತ್ತ ಬಿಜೆಪಿ ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದೆ. (ಏಜೆನ್ಸೀಸ್​)

    ಆಹ್ವಾನವಿದ್ದರೂ ಕೊಹ್ಲಿ, ರೋಹಿತ್​, ಧೋನಿ ಅಯೋಧ್ಯೆಗೆ ಬರಲಿಲ್ಲ ಏಕೆ? ಕಾರಣ ಇಲ್ಲಿದೆ…

    ಗೃಹಪ್ರವೇಶಕ್ಕೂ ಮುನ್ನವೇ ಅಡಿಪಾಯ ಸಮೇತ ಧರೆಗುರುಳಿದ 3 ಅಂತಸ್ತಿನ ಕಟ್ಟಡ: ಕ್ಯಾಮೆರಾ ಕಣ್ಣಲ್ಲಿ ಭೀಕರ ದೃಶ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts