More

    ಬಂಗಾರ್ ಪಲ್ಕೆ ಗುಡ್ಡದ ಮಣ್ಣಿನಡಿ ಸಿಲುಕಿದ ಯುವಕನ ಸುಳಿವಿಲ್ಲ

    ಕಳಸ: ಮೂಡಿಗೆರೆ ತಾಲೂಕಿನ ಬಂಗಾರ್ ಪಲ್ಕೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಜಲಪಾತದಲ್ಲಿ ಗುಡ್ಡಕುಸಿದು ಮಣ್ಣಿನಡಿ ಸಿಲುಕಿರುವ ಬೆಳ್ತಂಗಡಿಯ ಲಾಯಿಲ ಗ್ರಾಮದ ಕಾಶಿಬೆಟ್ಟು ಯುವಕನನ್ನು ಎರಡು ದಿನವಾದರೂ ಹೊರಗೆ ತೆಗೆಯಲು ಸಾಧ್ಯವಾಗಲಿಲ್ಲ.

    ಕಾಶಿಬೆಟ್ಟು ಕೃಷ್ಣಯ್ಯ ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ (21)ಮಣ್ಣಿನಡಿ ಸಿಲುಕಿದ್ದು, ತೆರವಿಗೆ ಎಸ್​ಡಿಆರ್​ಎಫ್,ಪೊಲೀಸ್, ಅಗ್ನಿಶಾಮಕದಳ, ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ ಸತತ ಕಾರ್ಯಾಚರಣೆ ನಡೆಸುತ್ತಿವೆ. ಉಜಿರೆ ಎಸ್​ಡಿಎಂ ಕಾಲೇಜು ದ್ವಿತೀಯ ಪದವಿ ವಿದ್ಯಾರ್ಥಿ ಸನತ್ ಶೆಟ್ಟಿ ಮತ್ತು ಆತನ ಇಬ್ಬರು ಸ್ನೇಹಿತರು ಸಂಸೆಗೆ ಬಂದು ಕ್ರಿಕೆಟ್ ಪಂದ್ಯಾವಳಿ ಮುಗಿಸಿ ಅಲ್ಲಿಯೇ ಸ್ನೇಹಿತನ ಮನೆಗೆ ಭಾನುವಾರ ತೆರಳಿದ್ದರು. ಸೋಮವಾರ ಮಧ್ಯಾಹ್ನ ಸನತ್, ಸ್ನೇಹಿತರಾದ ಆದಿತ್ಯ, ಸೌರಭ್ ಜಲಪಾತ ನೋಡಲು ತೆರಳಿದ್ದರು. ಜಲಪಾತಕ್ಕೆ ಇಳಿಯುತ್ತಿದ್ದಂತೆ ಮೇಲಿನಿಂದ ಒಂದು ಬದಿಯ ಗುಡ್ಡ ಕುಸಿದಿದೆ. 15 ಅಡಿ ಆಳಕ್ಕೆ ಬೃಹತ್ ಗಾತ್ರದ ಬಂಡೆ, ಮಣ್ಣಿನಡಿ ಸನತ್ ಸಿಲುಕಿದ್ದಾನೆ. ಆತನ ಸ್ನೇಹಿತರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸೌರಬ್​ಗೆ ಸಣ್ಣಪುಟ್ಟ ಗಾಯಗಳಾಗಿದೆ.

    ಕೂಡಲೇ ಸ್ಥಳಕ್ಕೆ ಸ್ಥಳೀಯರು ರಕ್ಷಣೆಗೆ ತೆರಳಿದರು. ಆದರೆ ಬಂಡೆಗಳು ಬಿದ್ದಿರುವುದರಿಂದ ಅಸಹಾಯಕಾರದರು. ದುರ್ಗಮವಾದ ಸ್ಥಳಕ್ಕೆ ಜೆಸಿಬಿ, ಹಿಟಾಚಿಯಂಥ ವಾಹನಗಳು ತೆರಳಲು ಸಾಧ್ಯವಾಗದಿರುವುದರಿಂದ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ. ಮಂಗಳವಾರವೂ ಅಗ್ನಿಶಾಮಕ ದಳ, ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿದರೂ ಆತನ ಬಗ್ಗೆ ಸುಳಿವು ದೊರಕಲಿಲ್ಲ.

    ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts